ಕನ್ನಡಪ್ರಭ ವಾರ್ತೆ ಇಳಕಲ್ಲಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗು ವಿಸರ್ಜನೆಯ ವೇಳೆ ಯಾರು ಡಿಜೆ ಬಳಸುವಂತ್ತಿಲ್ಲ ಎಂದು ಡಿವೈಎಸ್ಪಿ ಸಂತೋಷ ಬನ್ನಟ್ಟಿ ತಿಳಿಸಿದರು. ನಗರದ ಪೊಲೀಸ್ ಠಾಣೆ ಆವರಣದಲ್ಲಿ ಕರೆದ ಗಣೇಶ ಹಬ್ಬದ ಶಾಂತಿ ಸಮಿತಿ ಸಭೆಯಲ್ಲಿ ಅವರು ಸೂಚನೆ ನೀಡಿದರು. ಗಣೇಶನ ಹಬ್ಬ ನಮಗೆಲ್ಲರಿಗೂ ಪ್ರಮುಖ ಹಬ್ಬ. ಆದರೆ ಆ ಹಬ್ಬದಲ್ಲಿ ಎಲ್ಲರೂ ಭಜನೆ, ಜಾನಪದ ಬಳಸುತ್ತಾರೆ. ಆದರೆ ಜನರ ಆರೋಗ್ಯಕ್ಕೆ ತೊಂದರೆ ಮಾಡುವ ಡಿಜೆಗಳನ್ನು ಮಾತ್ರ ಯಾರು ಬಳಸಬಾರದು ಎಂದು ಖಡಕ್ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗು ವಿಸರ್ಜನೆಯ ವೇಳೆ ಯಾರು ಡಿಜೆ ಬಳಸುವಂತ್ತಿಲ್ಲ ಎಂದು ಡಿವೈಎಸ್ಪಿ ಸಂತೋಷ ಬನ್ನಟ್ಟಿ ತಿಳಿಸಿದರು.ನಗರದ ಪೊಲೀಸ್ ಠಾಣೆ ಆವರಣದಲ್ಲಿ ಕರೆದ ಗಣೇಶ ಹಬ್ಬದ ಶಾಂತಿ ಸಮಿತಿ ಸಭೆಯಲ್ಲಿ ಅವರು ಸೂಚನೆ ನೀಡಿದರು. ಗಣೇಶನ ಹಬ್ಬ ನಮಗೆಲ್ಲರಿಗೂ ಪ್ರಮುಖ ಹಬ್ಬ. ಆದರೆ ಆ ಹಬ್ಬದಲ್ಲಿ ಎಲ್ಲರೂ ಭಜನೆ, ಜಾನಪದ ಬಳಸುತ್ತಾರೆ. ಆದರೆ ಜನರ ಆರೋಗ್ಯಕ್ಕೆ ತೊಂದರೆ ಮಾಡುವ ಡಿಜೆಗಳನ್ನು ಮಾತ್ರ ಯಾರು ಬಳಸಬಾರದು ಎಂದು ಖಡಕ್ ಸೂಚನೆ ನೀಡಿದರು.
ಕೆಲವರು ವಿರೋಧ ವ್ಯಕ್ತಪಡಿಸಿ ಎರಡು ಅಥವಾ ನಾಲ್ಕು ಬಾಕ್ಸ್ ಡಿಜೆ ಅನುಮತಿ ಕೊಡಿ ಎಂದು ಒತ್ತಾಯಿಸಿದರು.ಇಳಕಲ್ಲ ನಗರ ಪಿಎಸ್‌ಐ ನಾಗರಾಜ ಗಡಾದ ಮಾತನಾಡಿ, ಗಣೇಶ ನಮ್ಮ ದೇವರು ಆತನ ಆಗಮನವನ್ನು ನಾವು ಸ್ವಾಗತಿಸುತ್ತೆವೆ. ಆದರೆ ಗಣೇಶನ ಹೆಸರಿನಲ್ಲಿ ದುಶ್ಚಟಗಳನ್ನು ಮಾಡಬಾರದು ಎಂದು ತಿಳಿಸಿ ಪ್ರತಿ ಒಳ್ಳೆಯ ಕಾರ್ಯದಲ್ಲಿ ಗಣೇಶನ ಪೂಜೆ ಇರುತ್ತದೆ. ಇಳಕಲ್ಲ ನಗರ ಇಬ್ಬರು ಮಹಾ ಶರಣರ ನಾಡು ಇಲ್ಲಿ ಸದಾ ಶಾಂತತೆ ಇರಲಿ. ನಿಮ್ಮಗಳ ಸಹಕಾರ ನಮಗೆ ಸದಾ ಇರಲಿ. ಸಾರ್ವಜನಿಕವಾಗಿ ಗಣೇಶ ಪ್ರತಿಷ್ಟಾಪಿಸುವವರು ಪೊಲೀಸರು, ನಗರ ಸಭೆ ಕಿಇಬಿ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಿಎಸ್‌ಐಗಳಾದ ಮಲ್ಲು ಸತ್ತಿಗೌಡರ, ಕಿರಶಾಳ, ಹಾಗು ನಗರಸಭೆಯ ಬಸವರಾಜ ಕಿರಗಿ ಹಾಗು ಇತರರು ಉಪರ್ಸಥಿತರಿದ್ದರು. ಬಸವರಾಜ ಮಠದ, ಸಿ.ಸಿ.ಚಂದ್ರಾಪಟ್ಟಣ, ಉಮೇಶ ಪೂಜಾರ, ಯಲ್ಲಪ್ಪ ಪೂಜಾರಿ, ಸಯ್ಯದ ಶಿರಾಜ, ಪರುಶರಾಮ ಬಿಸಲದಿನ್ನಿ, ಪ್ರದಿಪ ಅಮರಣ್ಣನವರ, ಮಹೇಶ ಪಾಟೀಲ ಹಾಗು ಇತರರು ಮಾತನಾಡಿದರು.