ಈ ಬಾರಿ ಗೌರಿ ಗಣೇಶ ಹಬ್ಬದ ವೇಳೆ ಡಿಜೆಗೆ ಅವಕಾಶ ಒದಗಿಸುವುದಿಲ್ಲ ಎಂದು ಸೋಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್ ಹೇಳಿದರು.

ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಈ ಬಾರಿ ಗೌರಿ ಗಣೇಶ ಹಬ್ಬದ ವೇಳೆ ಡಿಜೆಗೆ ಅವಕಾಶ ಒದಗಿಸುವುದಿಲ್ಲ ಎಂದು ಸೋಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್ ಹೇಳಿದರು.

ಬುಧವಾರ ಸುಂಟಿಕೊಪ್ಪ ಪೊಲೀಸ್ ಠಾಣಾ ಆವರಣದಲ್ಲಿ ಆಯೋಜಿಸಲಾದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀಗೌರಿ ಗಣೇಶ ಆಚರಣಾ ಸಮಿತಿಗಳ ಪೂರ್ವನಿಯೋಜಿತ ಸಭೆಯಲ್ಲಿ ಡಿವೈಎಸ್‌ಪಿ ಮಾತನಾಡಿದರು.

ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಬಾರೀ ೨೪ ಶ್ರೀ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು ಕಾನೂನು ಪಾಲನೆಯೊಂದಿಗೆ ಶಿಸ್ತುಬದ್ಧವಾಗಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಶ್ರೀ ಗೌರಿ ಗಣೇಶ ಆಚರಣಾ ಸಮಿತಿಯವರು ಮುನ್ನಡೆಸಿರುವುದು ಶ್ಲಾಘನೀಯ ವಿಚಾರ ಎಂದರು.

ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಗ್ರಾಮಗಳಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯೋಜಕ ಸಮಿತಿಗಳವರು ಪೊಲೀಸ್‌ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದುಕೊಂಡಿರಬೇಕು. ಮುಂಜಾಗ್ರತಾ ಕ್ರಮವಾಗಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದರಿಂದ ಅಹಿತಕರ ಘಟನೆ ತಡೆಗೆ ಸಹಕರಿ ಎಂದರು. ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಮಿತಿಯ ಇರ್ವರು ಪದಾಧಿಕಾರಿಗಳು ಕಾವಲು ಇರಿಸುವಂತೆ ಸೂಚಿಸಿದರು. ಸ್ಥಳದ ಪೂರ್ವಪರ ಮಾಹಿತಿ ಪಡೆದಿರಬೇಕು ವಿಸರ್ಜನೆಯ ವೇಳೆ ನುರಿತ ಈಜು ಬಲ್ಲವರು ಇರಬೇಕು. ಮೂರ್ತಿಗಳ ವಿಸರ್ಜಿನೆಯ ವೇಳೆ ಅಲಂಕೃತ ಮಂಟಪ ಮೆರವಣಿಗೆ ತೆರಳುವ ಮಾರ್ಗಗಳ ಮಾಹಿತಿ ನಿಗದಿಗೊಂಡಿರುವ ಸಮಯವನ್ನು ಪೊಲೀಸ್ ಠಾಣೆಗೆ ತಿಳಿಸುವಂತೆ ತಿಳಿಸಿದರು.

ಈ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಸರ್ಕಾರದಿಂದ ಹೊರಡಿಸಿರುವ ಕಾನೂನು ಅನುಮತಿ ಪತ್ರಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.