ಹಲವು ಪ್ರದೇಶಗಳಲ್ಲಿ ಗೌಳಿ ಸಮಾಜದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮಕ್ಕಳು ಸ್ಥಳೀಯ ಶಾಲೆಯ ನಂತರ ಕೂಲಿಗೆ ಹೋಗುತ್ತಿದ್ದರು. ಇಂದು ಅವರೆಲ್ಲ ಪಟ್ಟಣದ ಶಾಲಾ-ಕಾಲೇಜುಗಳಿಗೆ ಬರುತ್ತಿದ್ದಾರೆ. ಅವರಿಗಾಗಿಯೇ ಬಸ್ ಬಿಡುವಂತೆ ಮಾಡಿದ್ದೇನೆ.
ದೇಶಪಾಂಡೆ ನಗರದಿಂದ ನೂತನ ಬಸ್ ವ್ಯವಸ್ಥೆಗೆ ಚಾಲನೆ ನೀಡಿದ ಶಾಸಕ
ಕನ್ನಡಪ್ರಭ ವಾರ್ತೆ ಯಲ್ಲಾಪುರಹಲವು ಪ್ರದೇಶಗಳಲ್ಲಿ ಗೌಳಿ ಸಮಾಜದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮಕ್ಕಳು ಸ್ಥಳೀಯ ಶಾಲೆಯ ನಂತರ ಕೂಲಿಗೆ ಹೋಗುತ್ತಿದ್ದರು. ಇಂದು ಅವರೆಲ್ಲ ಪಟ್ಟಣದ ಶಾಲಾ-ಕಾಲೇಜುಗಳಿಗೆ ಬರುತ್ತಿದ್ದಾರೆ. ಅವರಿಗಾಗಿಯೇ ಬಸ್ ಬಿಡುವಂತೆ ಮಾಡಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಸೋಮವಾರ ತಾಲೂಕಿನ ಕಣ್ಣಿಗೇರಿ ಗ್ರಾಪಂನ ದೇಶಪಾಂಡೆ ನಗರದಿಂದ ಬೆಳಗ್ಗೆ ೮.೩೦ಕ್ಕೆ ಮತ್ತು ಸಂಜೆ ೪.೪೫ ಕ್ಕೆ ಮಕ್ಕಳಿಗಾಗಿಯೇ ಆರಂಭಿಸಲಾದ ವಿಶೇಷ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು.ಈಗಾಗಲೇ ತಾಲೂಕಿನ ಕರಡೊಳ್ಳಿ, ತೆಂಗಿನಗೆರೆ, ಹೊಸಳ್ಳಿ ಸೇರಿದಂತೆ ಹಲವು ಕಡೆ ಬಸ್‌ಗಳನ್ನು ಮಕ್ಕಳಿಗಾಗಿಯೇ ಬಿಡಲಾಗುತ್ತಿದೆ. ಇದು ಸಾರ್ವಜನಿಕರಿಗೂ ಅನುಕೂಲವಾಗಿದೆ. ಸ್ಥಳೀಯ ಬಸ್‌ಗಳಿಲ್ಲದೇ ಮಕ್ಕಳು ತೊಂದರೆ ಅನುಭವಿಸುತ್ತಿದ್ದರು. ಅದನ್ನು ಗಮನಿಸಿ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಗೌಳಿ ಜನಾಂಗದವರಿಗೆ ಈ ವ್ಯವಸ್ಥೆ ಕಲ್ಪಿಸಿರುವುದರಿಂದ ನನಗೆ ಸಮಾಧಾನ ತಂದಿದೆ. ಇಲಾಖೆಯನ್ನು ನಾನು ಅಭಿನಂದಿಸಲೇಬೇಕು. ಯಾವ ವ್ಯಕ್ತಿಯೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದೇ ನನ್ನ ಉದ್ದೇಶ. ಕೇವಲ ಭಾಷಣದಿಂದ ಜನರ ಕಷ್ಟ ನಿವಾರಣೆಯಾಗದು. ಬಡವರ ಬಗ್ಗೆ ಕಾಳಜಿಯಿಂದ ಸ್ಪಂದಿಸಿದರೆ ಮಾತ್ರ ಜನರ ವಿಶ್ವಾಸ ಗಳಿಸಬಹುದು ಎಂದರು.
ಈ ಸಂದರ್ಭ ಗ್ಯಾರಂಟಿ ಸಮಿತಿ ಅಧ್ಯಕ್ಷ ದೇವಿದಾಸ ಶಾನಭಾಗ, ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ಸಂತೋಷ ವೆರ್ಣೇಕರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗೇಶ ಗಾವಡೆ, ನಾಗರಾಜ ಕೈಟ್ಕರ್, ಪ್ರಮುಖರಾದ ಲಾರೆನ್ಸ್ ಸಿದ್ದಿ, ಅಣ್ಣಪ್ಪ ನಾಯ್ಕ, ಗಂಗಾ ಕೊಕರೆ, ಮಾಕು ಕೊಕರೆ, ರೇಖು ಕೊಕರೆ, ಗಂಗು ಕೊಕರೆ, ಮಾಲು ಕೊಕರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.