ಜಿಎಸ್‌ಟಿ ಇಳಿಕೆಗೆ ರಾಜಕೀಯ ದೃಷ್ಟಿಕೋನ ಬೇಡ: ಕ್ಯಾ.ಚೌಟ

| Published : Nov 05 2025, 12:45 AM IST

ಜಿಎಸ್‌ಟಿ ಇಳಿಕೆಗೆ ರಾಜಕೀಯ ದೃಷ್ಟಿಕೋನ ಬೇಡ: ಕ್ಯಾ.ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಬಿಜೆಪಿ ದ.ಕ. ಜಿಲ್ಲಾ ಆರ್ಥಿಕ ಪ್ರಕೋಷ್ಠ ವತಿಯಿಂದ ಇತ್ತೀಚೆಗೆ, ನವಪೀಳಿಗೆಯ ಜಿಎಸ್‌ಟಿ ವಿಚಾರದ ಕುರಿತ ವಿಶೇಷ ವಿಚಾರ ಸಂಕಿರಣ ನಡೆಯಿತು.

ಮಂಗಳೂರು: ಜಿಎಸ್‌ಟಿ ಇಳಿಕೆ ವಿಚಾರವನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಜಿಎಸ್‌ಟಿ ಇಳಿಕೆಯಿಂದ ದೇಶದ ಜನರಿಗೆ ಉಪಯೋಗವಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಬಿಜೆಪಿ ದ.ಕ. ಜಿಲ್ಲಾ ಆರ್ಥಿಕ ಪ್ರಕೋಷ್ಠ ವತಿಯಿಂದ ಇತ್ತೀಚೆಗೆ, ನವಪೀಳಿಗೆಯ ಜಿಎಸ್‌ಟಿ ವಿಚಾರದ ಕುರಿತ ವಿಶೇಷ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ಆರ್ಥಿಕವಾಗಿ ತನ್ನ ಛಾಪು ಮೂಡಿಸಿದೆ. ಹಿಂದಿನ ಕಾಲದಲ್ಲಿ ಇಲ್ಲಿನ ಅನೇಕ ಹಿರಿಯರು ಇತರೆಡೆಗಳಿಗೆ ಹೋಗಿ ಉದ್ಯಮ ಕ್ಷೇತ್ರದಲ್ಲಿ ಮಿಂಚಿದ್ದಾರೆ‌. ಈಗ ಮತ್ತೆ ಕರಾವಳಿಗೆ ಬಂದು ಉದ್ಯಮ ಕ್ಷೇತ್ರವನ್ನು ವಿಸ್ತರಿಸುತ್ತಿದ್ದಾರೆ. ಇದು ಸಂತೋಷದ ವಿಷಯ ಎಂದರು.ದಿನದಿಂದ ದಿನಕ್ಕೆ ಮಂಗಳೂರು ನಗರ ಬೆಳೆಯುತ್ತಿದೆ. ರಾಜ್ಯದಲ್ಲಿ ಮಂಗಳೂರನ್ನು ಆರ್ಥಿಕ ನಗರವಾಗಿ ರೂಪಿಸುವ ಮಹೋನ್ನತ ಜವಾಬ್ದಾರಿ ನಮ್ಮ ಮುಂದಿದೆ, ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕ್ಯಾ. ಬ್ರಿಜೇಶ್ ಚೌಟ ಕರೆ ನೀಡಿದರು.ಬಿಜೆಪಿ ರಾಜ್ಯ ಆರ್ಥಿಕ ಪ್ರಕೋಷ್ಠದ ಪ್ರಮುಖ ವಿಶ್ವನಾಥ್ ಭಟ್ ಮಾತನಾಡಿ, ಜಿಎಸ್‌ಟಿ ಇಳಿಕೆಯಿಂದಾಗಿ ಶೇ.99ರಷ್ಟು ಸರಕುಗಳ ಮೇಲಿನ ತೆರಿಗೆ ಶೇ.12ರಿಂದ ಶೇ.5ಕ್ಕೆ ಇಳಿದಿದೆ. ಶೇ.92ರಷ್ಟು ಸರಕುಗಳ ಜಿಎಸ್‌ಟಿ ಶೇ.28ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗಿದೆ ಎಂದರು.

ಬಿಜೆಪಿ ಆರ್ಥಿಕ ಪ್ರಕೋಷ್ಠದ ದ.ಕ. ಜಿಲ್ಲಾ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ ಸ್ವಾಗತಿಸಿದರು. ಬಿಜೆಪಿ ಆರ್ಥಿಕ ಪ್ರಕೋಷ್ಟದ ದ.ಕ. ಜಿಲ್ಲಾಸಹ ಸಂಚಾಲಕ ಸಿಎ ಎಸ್.ಎಸ್. ನಾಯಕ್, ಪ್ರಮುಖರಾದ ಪ್ರಸನ್ನ ಮತ್ತಿತರರು ಇದ್ದರು.