ಸಹಕಾರ ಸಂಘದಲ್ಲಿ ರಾಜಕೀಯ ಬೇಡ

| Published : Apr 21 2025, 12:57 AM IST

ಸಾರಾಂಶ

ಸಹಕಾರ ಸಂಘದಲ್ಲಿ ಯಾವುದೇ ರಾಜಕೀಯವನ್ನು ಮಾಡದೆ ಸಂಘದ ಅಭಿವೃದ್ಧಿಗೆ ತಾವೆಲ್ಲರೂ ಕೆಲಸ ಮಾಡಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಸಹಕಾರ ಸಂಘದಲ್ಲಿ ಯಾವುದೇ ರಾಜಕೀಯವನ್ನು ಮಾಡದೆ ಸಂಘದ ಅಭಿವೃದ್ಧಿಗೆ ತಾವೆಲ್ಲರೂ ಕೆಲಸ ಮಾಡಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಸಿ ಎಸ್ ಪುರ ಹೋಬಳಿಯ ವೆಂಕಟೇಗೌಡನ ಪಾಳ್ಯ ಗ್ರಾಮದಲ್ಲಿ ನೂತನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಅಧಿಕಾರಕ್ಕೆ ಬಂದು ಮೂರು ತಿಂಗಳಿನ ಅವಧಿಯಲ್ಲಿ ಈಗಾಗಲೇ ಒಂಬತ್ತು ಹೊಸ ಸಂಘಗಳನ್ನು ಮಾಡಲಾಗಿದೆ. ಈ ವರ್ಷದಲ್ಲಿ 40 ಸಂಘಗಳ ಗುರಿಯನ್ನು ಹೊಂದಿದ್ದೇವೆ. ಅದರಲ್ಲೂ ಮಹಿಳಾ ಸಂಘಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಅವರ ಆರ್ಥಿಕ ಸಬಲೀಕರಣಕ್ಕೂ ಕೂಡ ಯೋಜನೆಯನ್ನು ರೂಪಿಸಲಾಗಿದೆ. ಇನ್ನು ಸಿ ಎಸ್ ಪುರ ಭಾಗದಲ್ಲಿ ಅತ್ಯಂತ ಹೆಚ್ಚು ಹಾಲು ಹಾಕುವಂತಹ ರೈತರು ಇದ್ದು ಗುಬ್ಬಿ ತಾಲೂಕಿನ ಅರ್ಧಭಾಗದಷ್ಟು ಹಾಲು ಈ ಹೋಬಳಿಯಿಂದಲೇ ಬರುತ್ತಿದ್ದರು. ಸಹ ಈ ಭಾಗದಲ್ಲಿ ಕೇವಲ ಒಂಬತ್ತು ಸಂಘಗಳು ಮಾತ್ರ ಇತ್ತು, ಹಾಗಾಗಿ ಈ ಭಾಗದಲ್ಲಿ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘ ಮಾಡುವುದಾಗಿ ಅವರು ತಿಳಿಸಿದರು. ಮುಖಂಡರಾದ ನಂಜೇಗೌಡ ಮಾತನಾಡಿ ಖಂಡಿತವಾಗಿಯೂ, ಈ ಭಾಗದಲ್ಲಿ ಅತ್ಯಂತ ಹೆಚ್ಚು ಹಾಲಿನ ಕೇಂದ್ರಗಳು ಅವಶ್ಯಕತೆ ಇದ್ದು ನೂತನ ನಿರ್ದೇಶಕರು ಅವೆಲ್ಲವನ್ನು ಮಾಡಿದರೆ ಖಂಡಿತವಾಗಿ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮುಖಂಡ ಮದುವೆ ಮನೆ ಕುಮಾರ್ ಮಾತನಾಡಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಮಾಡಲು ನಾವೆಲ್ಲರೂ ಹೋರಾಟ ಮಾಡಿದ್ದೇವು. ಆದರೆ ಅದು ಆಗಿರಲಿಲ್ಲ ಈಗ ಅದಕ್ಕಿಂತ ಉತ್ತಮವಾದ ಸ್ಥಾನಮಾನ ಸಿಕ್ಕಿರುವುದು ಅತ್ಯಂತ ಹೆಚ್ಚು ಖುಷಿ ನೀಡಿದೆ ಎಂದು ತಿಳಿಸಿದರು. ಮುಖಂಡ ಚನ್ನೇನಳ್ಳಿ ಮೂರ್ತಿ, ಮಾತನಾಡಿ 40 ವರ್ಷಗಳಿಂದಲೂ ಒಂದೇ ಕುಟುಂಬದಲ್ಲಿದ್ದ ಈ ನಿರ್ದೇಶಕ ಸ್ಥಾನ ಬದಲಾವಣೆ ಆಗಿರುವುದು ನಿಜಕ್ಕೂ ಆಶ್ಚರ್ಯ ತದ್ದಿದ್ದು ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಭಾರತೀ ಶ್ರೀನಿವಾಸ್ ಅವರಿಂದ ನೆರವೇರಲಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ಪಹೇಮಲತಾ ಮುಖಂಡರಾದ ಗೋವಿಂದರಾಜು, ತಾಲೂಕು ಘಟಕದ ವ್ಯವಸ್ಥಾಪಕ ಶಂಕರ್ ನಾಗ್, ರಾಜು, ಮಹೇಶ್, ಸೇರಿದಂತೆ ನೂತನ ನಿರ್ದೇಶಕರು ಸದಸ್ಯರುಗಳು ಗ್ರಾಮಸ್ಥರು ಹಾಜರಿದ್ದರು.