ಸಾರಾಂಶ
ನಮಗೆ ಯಾವ ರಾಜಕಾರಣಿಗಳ ಒತ್ತಡ ಇಲ್ಲ. ನಮಗೆ ನ್ಯಾಯ ಬೇಕು. ಪರಿಹಾರ ಬೇಡ ಎಂದು ಮೃತ ಸಚಿನ ಸಹೋದರಿ ಸುರೇಖಾ ಸ್ಪಷ್ಟಪಡಿಸಿದರು.ಅವರು ಗುರುವಾರ ಪತ್ರಿಕಾ ಭವನದಲ್ಲಿ ಮಾತನಾಡಿ, ಸಹೋದರ ಸಚಿನ ಸಾವನ್ನಪ್ಪಿ 8 ದಿನಗಳು ಕಳೆದಿವೆ. ಹೀಗೆಯೇ ದಿನಗಳು ಕಳೆದರೆ ಸಾಕ್ಷಿ ನಾಶ ಆಗುವ ಸಾಧ್ಯತೆ ಇದೆ ಎಂದ ಅವರು ಇಲ್ಲಿಯವರೆಗೆ ಡೆತ್‌ನೋಟ್‌ನಲ್ಲಿ ಹೆಸರಿದ್ದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಾವು ದೂರು ನೀಡಲು ಹೋದಾಗ ಅದನ್ನು ಸ್ವೀಕರಿಸಿ, ಡೆತ್ ನೋಟ್ ಪ್ರಕಾರ ಹುಡುಕಾಟ ನಡೆಸಿದ್ದರೆ ನನ್ನ ಸಹೋದರನ ಜೀವ ಉಳಿಸಬಹುದಿತ್ತು. ಆದರೆ, ಅದಾಗಲಿಲ್ಲ ಎಂದು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿ, ಹೆಸರಿಗೆ ಮಾತ್ರ ಅಮಾಯಕ ಸಿಬ್ಬಂದಿ ಅಮಾನತ್ತು ಮಾಡಲಾಗಿದೆ. ಸಿಬ್ಬಂದಿ ಅಧಿಕಾರಿಗಳು ಹೇಳಿದ್ದನ್ನೇ ಮಾಡಿದ್ದಾರೆ. ಹೀಗಾಗಿ, ಗಾಂಧಿಗಂಜ್ ಹಾಗೂ ಧನ್ನೂರ ಠಾಣೆಯ ಮೇಲಾಧಿಕಾರಿಗಳು ಅಮಾನತ್ತು ಆಗಬೇಕು ಎಂದು ಆಗ್ರಹಿಸಿದರು. ಸಚಿನ ಮೋಸಗಾರ ಎಂದು ಯಾರೂ ನನ್ನ ಸಹೋದರನ ಬಗ್ಗೆ ಮಾತಾಡಬೇಡಿ ಅಥವಾ ಬರೆಯಬೇಡಿ ಎಂದು ಮನವಿ ಮಾಡಿದ ಅವರು ಎಲ್ಲವೂ ಮುಂದಿನ ದಿನಗಳಲ್ಲಿ ಬಹಿರಂಗ ಆಗುತ್ತದೆ. ನಮಗೆ ನ್ಯಾಯ ಸಿಗದೆ ಇದ್ದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ದೂರು ನೀಡುತ್ತೇವೆ ಎಂದು ಸುರೇಖಾ ತುಳಿಸಿದರು.
----ಫೈಲ್ 2ಬಿಡಿ3