ಸಾರಾಂಶ
ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ, ಸಿದ್ದರಾಮಯ್ಯನವರು ಜನ ಮೆಚ್ಚಿದ ಮುಖ್ಯಮಂತ್ರಿಯಾಗಿದ್ದಾರೆಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ, ಸಿದ್ದರಾಮಯ್ಯನವರು ಜನ ಮೆಚ್ಚಿದ ಮುಖ್ಯಮಂತ್ರಿಯಾಗಿದ್ದಾರೆಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದ್ದಾರೆ.ಕಲಬುರಗಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ನಮ್ಮಲ್ಲಿ ಯವುದೇ ಬಣ ರಾಜಕೀಯ ಇಲ್ಲ. ನಾವೆಲ್ಲಾ ಒಂದಾಗಿದ್ದೆವೆ ಎಂದರು.
ಸಿಎಂ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗೇ ಹೈಕಮಾಂಡ್ ಅವರಿಗೆ ಮತ್ತೊಂದು ಅವಕಾಶ ನೀಡಿದೆ. ಸಿದ್ದರಾಮಯ್ಯ ಅವರು ಶಾಸಕರು ಕೇಳುವ, ಸೂಚಿಸುವ, ಹೇಳಿದ ಅಭಿವೃದ್ಧಿಪರ ಎಲ್ಲಾ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಡಿಸಿಎಂ ಅವರು ಹೇಳಿದಂತೆ ನಾವು ಶಿಸ್ತಿನಿಂದ ಇರಬೇಕು ಎಂದರು.ಕಾಂಗ್ರೆಸ್ ಹೈಕಮಾಂಡ್ ಬಲಿಷ್ಟವಾಗಿದೆ, ಬದಲಾವಣೆ ಇದ್ರೆ ಹೈಕಮಾಂಡ್ ಮಾಡುತ್ತದೆ. ಅವರೇ ಎಲ್ಲವನ್ನು ಗಮನಿಸುತ್ತಾರೆ. ಹೈಕಮಾಂಡ್ ನಿರ್ಣಯಕ್ಕೆ ನಾವು ಬದ್ದರಾಗಿದ್ದೆವೆ ಎಂದರು.
ಈ ವರ್ಷ ಸಂಪುಟ ವಿಸ್ತರಣೆ ಆಗಬಹುದು, ಸಂಪುಟ ವಿಸ್ತರಣೆ ಆಗುತ್ತೆ ಎನ್ನೋ ನಂಬಿಕೆಯಿದೆ. ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆನೆ. ಹೈಕಮಾಂಡ್ ನೀಡಿದಂತಹ ಜವಾಬ್ದಾರಿಗಳನ್ನೆಲ್ಲ ಚಾಚೂ ತಪ್ಪದಂತೆ ಪಾಲಿಸಿಕೊಂಡು ಬಂದಿರುವೆ. ಸಚಿವನಾಗಬೇಕು ಎಂಬ ಆಕಾಂಕ್ಷಿ ಬಲವಾಗಿದೆ. ನನಗೂ ಮಂತ್ರಿಯಾಗುವ ಅವಕಾಶ ಹೈಕಮಾಂಡ್ ನೀಡುತ್ತದೆ ಎಂಬ ಬಲವಾದ ನಂಬಿಕೆ ನನಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದರು.ಗ್ಯಾರಂಟಿ ಯೋಜನೆಗಳಿಂದ ಜನ ಸೋಮಾರಿಯಾಗ್ತಿದ್ದಾರೆ ಎನ್ನುವ ರಂಭಾಪುರಿ ಜಗದ್ಗುರುಗಳ ಹೇಳಿಕೆ ವಿಚಾರವಾಗಿ ಏನನ್ನೂ ಹೇಳದ ಡಾ. ಅಜಯ್ ಸಿಂಗ್, ಅದು ರಂಭಾಪುರಿ ಜಗದ್ಗುರುಗಳವರ ವಯಕ್ತಿಕ ಹೇಳಿಕೆ. ನಾವು ಜನರಿಗೆ ಅನೂಕುಲ ಆಗಲಿ ಅಂತ ಗ್ಯಾರೆಂಟಿ ಯೋಜನೆ ನೀಡಿದ್ದೆವೆ ಎಂದರು.