ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಗವಿಯಪ್ಪ

| Published : Sep 25 2024, 12:50 AM IST

ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಗವಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಮನೆ ಕಡೆ, ವ್ಯವಹಾರ, ಹಣದ ಕಡೆ ಎಂದಿಗೂ ಗಮನ ಕೊಟ್ಟವರಲ್ಲ. ಅವರು ಸಮಾಜ ಸೇವೆ, ಜನರ ಕೆಲಸ ಅಂತ ಇದ್ದು, ಕೆಲಸ ಮಾಡಿದವರು ಎಂದು ಶಾಸಕ ಎಚ್. ಆರ್‌. ಗವಿಯಪ್ಪ ಹೇಳಿದರು.

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕಪ್ಪು ಚುಕ್ಕೆ ಇಡುವ ಕೆಲಸ ಮಾಡಲಾಗುತ್ತಿದೆ. ಅವರು ಎಂದೂ ಹಣ, ವ್ಯವಹಾರ ಅಂತ ಓಡಾಡಿದವರಲ್ಲ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇನ್ಮನವಿ ಸಲ್ಲಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವೆ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎಚ್. ಆರ್‌. ಗವಿಯಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಮನೆ ಕಡೆ, ವ್ಯವಹಾರ, ಹಣದ ಕಡೆ ಎಂದಿಗೂ ಗಮನ ಕೊಟ್ಟವರಲ್ಲ. ಅವರು ಸಮಾಜ ಸೇವೆ, ಜನರ ಕೆಲಸ ಅಂತ ಇದ್ದು, ಕೆಲಸ ಮಾಡಿದವರು. ಬಹಳ ವರ್ಷಗಳಿಂದಲೂ ನಾನು ಕೂಡ ನೋಡುತ್ತಿರುವೆ. ಅವರ ಒಡನಾಟ ಇರುವ ಹಿನ್ನೆಲೆ ನಾನು ಹತ್ತಿರದಿಂದ ಬಲ್ಲೆ. ನಿನ್ನ ಕ್ಷೇತ್ರಕ್ಕೆ ಎಷ್ಟು ಅನುದಾನ ಬೇಕು ಅಂತ ಅನುದಾನ ಮಂಜೂರು ಮಾಡ್ತಾರೆ ಅಷ್ಟೆ. ಬೇರೆ ಯಾವ ವಿಚಾರವೂ ಎಂದಿಗೂ ಚರ್ಚೆ ಮಾಡಿದವರಲ್ಲ ಎಂದರು.

ಮುಡಾದಲ್ಲಿ ಸಣ್ಣಪುಟ್ಟ ತಪ್ಪುಗಳು ಆಗಿರಬಹುದು. ಹಾಗಂತ ಸಿಎಂ ಅವರೇ ತಪ್ಪು ಮಾಡಿಲ್ಲ. ಅದು ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿದ್ದು, ಬಿಜೆಪಿಯ ಕೆಲವರು ಷಡ್ಯಂತ್ರ ಮಾಡಿದ್ದಾರೆ. ನಾವು ಕೂಡ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇನ್ಮವಿ ಹೋಗುತ್ತೇವೆ ಎಂದರು.

ಮುಖ್ಯಮಂತ್ರಿ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ತನಿಖೆ ಸಮಯದಲ್ಲಿ ರಾಜೀನಾಮೆ ಕೊಡಬೇಕಿತ್ತು ಎನ್ನುವ ಮಾತಿದೆ. ಅರವಿಂದ ಕ್ರೇಜಿವಾಲ್ ಪ್ರಕರಣ ನೋಡಿದ್ದೇವೆ. ಅವರು ರಾಜೀನಾಮೆ ಕೊಟ್ಟಿರಲಿಲ್ಲ. ಬೇರೆಯವರು ಸಿಎಂ ಆಗ್ತಾರೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.