ಪ್ರಾಕೃತಿಕ ವೈದ್ಯ ಚಿಕಿತ್ಸೆಯಿಂದ ಅಡ್ಡ ಪರಿಣಾಮ ಇಲ್ಲ: ಶಾಸಕ ಡಾ. ಚಂದ್ರು ಲಮಾಣಿ

| Published : Nov 17 2025, 01:30 AM IST

ಪ್ರಾಕೃತಿಕ ವೈದ್ಯ ಚಿಕಿತ್ಸೆಯಿಂದ ಅಡ್ಡ ಪರಿಣಾಮ ಇಲ್ಲ: ಶಾಸಕ ಡಾ. ಚಂದ್ರು ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ದತಿಯಿಂದ ಅನೇಕ ರೋಗಗಳು ಪ್ರತಿನಿತ್ಯ ಕಂಡುಬರುತ್ತಿವೆ. ನಿಯಮಿತ ಆರೋಗ್ಯ ತಪಾಸಣೆ ಹಾಗೂ ವ್ಯಾಯಾಮದಿಂದ ಹಲವು ರೋಗಗಳು ನಮ್ಮಿಂದ ದೂರ ಇರಲು ಸಾಧ್ಯ.

ಲಕ್ಷ್ಮೇಶ್ವರ: ಆಧುನಿಕ ಆಹಾರ ಪದ್ಧತಿಯಿಂದ ಹೆಚ್ಚಿನ ರೋಗಿಗಳು ಬರುವ ಸಾಧ್ಯತೆ ಹೆಚ್ಚು. ಪ್ರತಿದಿನ ಎರಡು ಹೊತ್ತು ಊಟ ಮಾಡಬೇಕು. ಉಪವಾಸ ಪದ್ಧತಿಯಿಂದ ಆರೋಗ್ಯ ಸುಧಾರಣೆ ಸಾಧ್ಯ ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.

ಭಾನುವಾರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ, ಹುಲಕೋಟಿಯ ಕೆ.ಎಚ್. ಪಾಟೀಲ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಮತ್ತು ಇನ್ನರ್ ವ್ಹೀಲ್ ಕ್ಲಬ್, ಹಿರಿಯ ನಾಗರಿಕರ ಮತ್ತು ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ನಡೆದ ಪ್ರಕೃತಿ ಚಿಕಿತ್ಸೆ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ದತಿಯಿಂದ ಅನೇಕ ರೋಗಗಳು ಪ್ರತಿನಿತ್ಯ ಕಂಡುಬರುತ್ತಿವೆ. ನಿಯಮಿತ ಆರೋಗ್ಯ ತಪಾಸಣೆ ಹಾಗೂ ವ್ಯಾಯಾಮದಿಂದ ಹಲವು ರೋಗಗಳು ನಮ್ಮಿಂದ ದೂರ ಇರಲು ಸಾಧ್ಯ ಎಂದರು.

ಹುಲಕೋಟಿ ಪ್ರಕೃತಿ ಚಿಕಿತ್ಸೆ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ವೈದ್ಯ ಡಾ. ಸತೀಶ್ ಹೊಂಬಾಳಿ ಮಾತನಾಡಿ, ಅನಿಯಮಿತ ಜೀವನಶೈಲಿಯಿಂದ ಮಧುಮೇಹ, ಅಧಿಕ ರಕ್ತದೊತ್ತಡ ಬರಬಹುದು. ಜಂಕ್ ಫುಡ್ ತಿನ್ನುವುದು, ದೈಹಿಕ ಶ್ರಮ ಇಲ್ಲದಿರುವುದು. ಮಾನಸಿಕ ಒತ್ತಡ, ದುಶ್ಚಟಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿ. ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಕಡಿಮೆ ತಿನ್ನುವುದು ಆರೋಗ್ಯದ ಗುಣಲಕ್ಷಣಗಳಾಗಿವೆ ಎಂದರು.

ಡಾ. ಶೃತಿ ಹೂವಿನ ಮಾತನಾಡಿ, ಪ್ರಕೃತಿ ಚಿಕಿತ್ಸೆಯಲ್ಲಿ ಮಣ್ಣಿನ ಚಿಕಿತ್ಸೆ, ಜಲ ಚಿಕಿತ್ಸೆ, ನೈಸರ್ಗಿಕ ಚಿಕಿತ್ಸೆ, ಹೈಡ್ರೋ ಥೆರಪಿ, ಆಕ್ಯುಪಂಚರ್ ಚಿಕಿತ್ಸೆ, ಎಲಕ್ಟ್ರೋ ಥೆರಪಿ, ಫಿಸಿಯೋ ಥೆರಪಿ, ಪ್ರಕೃತಿ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ ಎಂದರು. ಸಭೆಯಲ್ಲಿ ಬಸವೇಶ ಮಹಾಂತಶೆಟ್ಟರ, ಸಿ.ಆರ್. ಲಕ್ಕುಂಡಿಮಠ, ಮಾಲಾದೇವಿ ದಂದರಗಿ, ಸುನೀಲ ಮಹಾಂತಶೆಟ್ಟರ ಇದ್ದರು. ಈ ವೇಳೆ ಲಕ್ಷ್ಮೇಶ್ವರ ತಾಲೂಕಿನ ನೂತನ ಪತ್ರಕರ್ತರ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು.