ಸಾರಾಂಶ
ಕಡೂರು, ಸೆಪ್ಟೆಂಬರ್ 1ರಂದು ಕಡೂರು ತಾಲೂಕಿನ ನೊಳಂಬ ಲಿಂಗಾಯಿತ ಸಮಾಜದಿಂದ ಹಾಸನ ಸಂಸದ ಶ್ರೇಯಸ್ ಪಟೇಲ್ ಮತ್ತು ಕಡೂರು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಅವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಜಿ.ಅಶೋಕ್ ಮಾಹಿತಿ
ಕನ್ನಡ ಪ್ರಭ ವಾರ್ತೆ, ಕಡೂರುಸೆಪ್ಟೆಂಬರ್ 1ರಂದು ಕಡೂರು ತಾಲೂಕಿನ ನೊಳಂಬ ಲಿಂಗಾಯಿತ ಸಮಾಜದಿಂದ ಹಾಸನ ಸಂಸದ ಶ್ರೇಯಸ್ ಪಟೇಲ್ ಮತ್ತು ಕಡೂರು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಅವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸನ್ಮಾನ ಸಮಿತಿ ಕಾರ್ಯದರ್ಶಿ ಜಿ.ಅಶೋಕ್ ಈ ಕುರಿತು ಪಟ್ಟಣದ ನೊಳಂಬ ವೀರಶೈವ ಸಮಾಜದ ಕಚೇರಿಯಲ್ಲಿ ನಡೆದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.ಸೆ.1 ರ ಭಾನುವಾರ ಬೆಳಿಗ್ಗೆ 10.30 ಕ್ಕೆ ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ದಾರಿಯಲ್ಲಿರುವ ತಾಲೂಕಿನ ಗೆದ್ಲೇಹಳ್ಳಿಯ ಶ್ರೀ ಬಯಲು ಬಸವೇಶ್ವರ ಸಮುದಾಯ ಭವನದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಬೇಲೂರಿನ ಶ್ರೀ ಪುಷ್ಪಗಿರಿ ಕ್ಷೇತ್ರದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.
ಸನ್ಮಾನ ಸಮಿತಿ ಅಧ್ಯಕ್ಷ ಕೆ.ಎಸ್ . ಪಂಚಾಕ್ಷರಿ ಮಾತನಾಡಿ, ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿ ಶಾಸಕರು ಮತ್ತು ಸಂಸದರಿಗೆ ಗೌರವ ಸಮರ್ಪಣೆ ಸೇರಿದಂತೆ ವಿವಿಧ ಸಮುದಾಯಗಳ ಅಧ್ಯಕ್ಷರಿಗೂ ಗೌರವಿಸುವ ಮೂಲಕ ಸನ್ಮಾನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ತಾಲೂಕಿನ ಸಮಾಜದ ಮತ್ತು ಎಲ್ಲ ಸಮಾಜಗಳ ಬಾಂಧವರು, ಮುಖಂಡರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು.ಮುಖಂಡರಾದ ಬಿಸಲೆರೆ ಕೆಂಪರಾಜು, ಬಿ.ಎಸ್. ವಿಶ್ವನಾಥ್, ಎಸ್ .ವಿ.ನಾಗರಾಜ್, ಬಸವರಾಜು, ನಂದೀಶ್ ಬಾಬು, ಓಂಕಾರಪ್ಪ, ಸೋಮಶೇಖರ್. ಸುಮಿತ್ರ ಸೇರಿದಂತೆ ಇತರರು ಇದ್ದರು.
29 ಕೆಕೆಡಿಯು3. ಕಡೂರಿನ ನೊಳಂಬ ವೀರಶೈವ ಸಮಾಜದ ಕಚೇರಿಯಲ್ಲಿ ಶಾಸಕರು ಮತ್ತು ಸಂಸದರ ಸನ್ಮಾನ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.