ಸಹಕಾರ ಸಂಘಗಳ ಬೆಳವಣಿಗೆಗೆ ಪಕ್ಷಾತೀತವಾಗಿ ಸಹಕರಿಸಿ: ದರ್ಶನ್ ಪುಟ್ಟಣ್ಣಯ್ಯ

| Published : Dec 17 2024, 12:47 AM IST

ಸಹಕಾರ ಸಂಘಗಳ ಬೆಳವಣಿಗೆಗೆ ಪಕ್ಷಾತೀತವಾಗಿ ಸಹಕರಿಸಿ: ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಸಂಘಗಳಲ್ಲಿ ರಾಜಕಾರಣ ಬೆರೆಯದಂತೆ ಆಯಾಯ ಗ್ರಾಮದ ಗ್ರಾಮಸ್ಥರು ಒಗ್ಗೂಡಿ ಕೆಲಸ ಮಾಡಬೇಕು. ಸಂಘದ ಆಡಳಿತ ಮಂಡಳಿ ಸದಸ್ಯರು ಹೊಣೆಗಾರಿಕೆಯನ್ನು ಸಂಘವನ್ನು ಮೇಲೆತ್ತುವ ಕೆಲಸ ಮಾಡಬೇಕು. ಸಂಘದ ಆದಾಯದಲ್ಲಿ ಕಾಪೌಂಡ್ ನಿರ್ಮಿಸುತ್ತಿರುವುದು ಒಳ್ಳೆಯ ಬೆಳವಣಿಗೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಹಕಾರ ಸಂಘಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಪ್ರತಿಯೊಬ್ಬರು ಪಕ್ಷಾತೀತವಾಗಿ ಸಹಕಾರ ಸಂಘಗಳ ಬೆಳವಣಿಗೆಗೆ ಸಹಕರಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಬಳೆಅತ್ತಿಗುಪ್ಪೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ಸುತ್ತಲು ಡೇರಿ ಉಳಿತಾಯ ಮೊತ್ತ ಮತ್ತು ಕೆಎಂಎಫ್ ಅನುದಾನ ಸೇರಿದಂತೆ 9.5 ಲಕ್ಷ ರು.ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಸಹಕಾರ ಸಂಘಗಳು ಅಭಿವೃದ್ಧಿಯಾದರೆ ಜನರ ಆರ್ಥಿಕ ಮಟ್ಟ ಸುಧಾರಣೆಯಾಗುತ್ತದೆ. ಸಹಕಾರಿ ಕ್ಷೇತ್ರ ದೇಶದ ಆರ್ಥಿಕ ವಹಿವಾಟಿನ ಒಂದು ಭಾಗವಾಗಿದೆ. ಸಹಕಾರಿ ಕ್ಷೇತ್ರಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಹಕಾರ ಸಂಘಗಳಲ್ಲಿ ರಾಜಕಾರಣ ಬೆರೆಯದಂತೆ ಆಯಾಯ ಗ್ರಾಮದ ಗ್ರಾಮಸ್ಥರು ಒಗ್ಗೂಡಿ ಕೆಲಸ ಮಾಡಬೇಕು. ಸಂಘದ ಆಡಳಿತ ಮಂಡಳಿ ಸದಸ್ಯರು ಹೊಣೆಗಾರಿಕೆಯನ್ನು ಸಂಘವನ್ನು ಮೇಲೆತ್ತುವ ಕೆಲಸ ಮಾಡಬೇಕು. ಸಂಘದ ಆದಾಯದಲ್ಲಿ ಕಾಪೌಂಡ್ ನಿರ್ಮಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಇದೇ ವೇಳೆ ಡೇರಿ ಆಡಳಿತ ಮಂಡಳಿ ಸದಸ್ಯರು ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹಾಗೂ ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಸಂಘದ ಅಧ್ಯಕ್ಷೆ ಸರ್ವಮ್ಮ ಶಿವಣ್ಣ, ಉಪಾಧ್ಯಕ್ಷೆ ಆಶಾರಾಣಿ ರೇವಣ್ಣರಾಧ್ಯ, ಸದಸ್ಯರಾದ ಪುಟ್ಟಮ್ಮಣಿ ಶಿವಕುಮಾರ್, ವಸಂತ ನಾಗರಾಜು, ನಾಗಮ್ಮ, ಪ್ರಮೀಳಾ, ಶೋಭಾ, ಪ್ರೇಮ, ಕಾರ್ಯದರ್ಶಿ ಹೇಮಾಕ್ಷಿ, ಪರೀಕ್ಷಕಿ ಲಲಿತಮ್ಮ, ಮಹದೇವಪ್ಪ, ಗ್ರಾಪಂ ಸದಸ್ಯರಾದ ರೇವಣ್ಣ, ಪ್ರಕಾಶ್, ಮಹದೇವಮ್ಮ, ಮುಖಂಡರಾದ ಅಮೃತಿ ರಾಜಶೇಖರ್, ಕೈಲಾಸ್, ವಿಜಯಕುಮಾರ್ ಯಜಮಾನರಾದ ಪರಶಿವಮೂರ್ತಿ, ಪುಟ್ಟಮಾದಪ್ಪ, ಈರಾಜು, ಲೋಕೇಶ್, ಬಿ.ಲೋಕೇಶ್, ಬಸವಣ್ಣ, ಮಹದೇವು, ಚಿಕ್ಕಯ್ಯ, ಇಂಗಲಗುಪ್ಪೆ ಲೊಕೇಶ್ ಇತರರು ಇದ್ದರು.