ಮಾರಸಿಂಗನಹಳ್ಳಿ ಸರ್ಕಾರಿ ಶಾಲೆಯಲ್ಲಿ ಅಹಿಂಸಾ ದಿನ ಆಚರಣೆ

| Published : Oct 03 2024, 01:32 AM IST

ಸಾರಾಂಶ

ಸರಳ ತತ್ವ-ಸಿದ್ಧಾಂತಗಳಿಂದ ಬದುಕಿದ ಗಾಂಧೀಜಿಯವರು ಭಾರತದ ಸಮಸ್ಯೆಗಳ ಮೂಲ ಕಾರಣವನ್ನು ಪರಿಹರಿಸಲು ಸಪ್ತ ಪಾತಕಗಳಿಂದ ದೂರ ಉಳಿಯಬೇಕು ಪ್ರತಿಪಾದಿಸಿದರು. ಸ್ವಾತಂತ್ರ್ಯ೫ ಪೂರ್ವದಲ್ಲಿ ಇವರ ಹೋರಾಟದ ಹಾದಿ ಮತ್ತು ಅಹಿಂಸಾ ಮಾರ್ಗ ವಿಶ್ವವನ್ನೇ ನಿಬ್ಬೆರಗಾಗಿಸಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಾತ್ಮ ಗಾಂಧೀಜಿ ಅವರ ಜೀವನ-ತತ್ವ, ಸಿದ್ಧಾಂತಗಳು ವಿಶ್ವಕ್ಕೆ ಮಹಾ ಮಾರ್ಗದರ್ಶನ ಎಂದು ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಫಾತೀಮಾ ರಾಣಿ ಹೇಳಿದರು.

ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಹಾಗೂ ಅಹಿಂಸಾ ದಿನಾಚರಣೆ-ಜಾಗೃತಿ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರಳ ತತ್ವ-ಸಿದ್ಧಾಂತಗಳಿಂದ ಬದುಕಿದ ಗಾಂಧೀಜಿಯವರು ಭಾರತದ ಸಮಸ್ಯೆಗಳ ಮೂಲ ಕಾರಣವನ್ನು ಪರಿಹರಿಸಲು ಸಪ್ತ ಪಾತಕಗಳಿಂದ ದೂರ ಉಳಿಯಬೇಕು ಪ್ರತಿಪಾದಿಸಿದರು. ಸ್ವಾತಂತ್ರ್ಯ೫ ಪೂರ್ವದಲ್ಲಿ ಇವರ ಹೋರಾಟದ ಹಾದಿ ಮತ್ತು ಅಹಿಂಸಾ ಮಾರ್ಗ ವಿಶ್ವವನ್ನೇ ನಿಬ್ಬೆರಗಾಗಿಸಿತು ಎಂದು ನುಡಿದರು.

ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಹಾತ್ಮಗಾಂಧಿ- ಲಾಲಾಬಹದ್ದೂರ್ ಶಾಸ್ತಿ ಭಾವಚಿತ್ರಗಳೊಂದಿಗೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾಭಿವೃದ್ದಿ ಸಮಿತಿ ಸದಸ್ಯರು ಜಾಗೃತಿ ಜಾಥಾ ನಡೆಸಿದರು. ಮಕ್ಕಳಿಗೆ ಸಿಹಿ ವಿತರಿಸಿ ದಸರಾ ರಜೆ ಘೋಷಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಶಾಂತ್, ಶಾಲಾ ಶಿಕ್ಷಕಿ ಸಭಾನಾ, ಅಂಗನವಾಡಿ ಶಿಕ್ಷಕಿ ಎಂ.ಕವಿತಾ, ಯುವಮುಖಂಡ ಕೃಷ್ಣೇಗೌಡ, ಸಮಿತಿ ಸದಸ್ಯ ಮಂಜುನಾಥ್ ಮತ್ತಿತರರಿದ್ದರು.ಗಾಂಧಿ ಜಯಂತಿ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

ಭಾರತೀನಗರ:ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತೆ ಹಾಗೂ ಗಿಡ ನೆಡುವ ಕಾರ್ಯಕ್ರಮ ಜರುಗಿತು.

ರೋಟರಿ ಸೆಂಟ್ರಲ್, ಸಮುದಾಯ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತೆ ಹಾಗೂ 100 ಅರಣ್ಯ ಮಹಾಘನಿ, ತ್ಯಾಗ, ರಕ್ತಚಂದನ, ಹೊನ್ನೆ ಮತ್ತು ನೇರಳೆ ಸಸಿ ನೆಡುವ ಜೊತೆಗೆ ರೈತರಿಗೆ 200 ಸಿಸಿಗಳನ್ನು ವಿತರಿಸಲಾಯಿತು.ಈ ವೇಳೆ ರೋಟರಿ ಭಾರತೀನಗರ ಸೆಂಟ್ರಲ್‌ನ ಅಧ್ಯಕ್ಷ ಶಶಿಕುಮಾರ್, ಗೌರವಾಧ್ಯಕ್ಷ ಕುಮಾರ್‌ ರಾಜು, ಕಾರ್ಯದರ್ಶಿ ಮರಿಸ್ವಾಮಿ, ಸದಸ್ಯರಾದ ತೈಲಪ್ಪ, ನಂದೀಶ್, ಜಗದೀಶ್, ಮರಿಚನ್ನೇಗೌಡ, ತೈಲಪ್ಪ, ಶಿವಲಿಂಗೇಗೌಡ ಹಾಗೂ ಪದಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರದ ಆರೊಗ್ಯ ರಕ್ಷಾ ಸಮಿತಿ ಸದಸ್ಯರು, ವೈದ್ಯರುಗಳು ಸಿಬ್ಬಂದಿ ಮತ್ತು ಗ್ರಾಪಂ ಸದಸ್ಯರು, ಅಭಿವೃದ್ಧಿ ಅಧಿಕಾರಿ ಎನ್.ಸುಧಾ ಭಾಗವಹಿಸಿದ್ದರು.