ಸಾರಾಂಶ
ಹುಲಿಗಿ ಹಾಗೂ ಸುತ್ತಮುತ್ತ ಶುಕ್ರವಾರ ಸಂಜೆ ಹಾಗೂ ಶನಿವಾರವೂ ಎರಡು ಗಂಟೆಗೂ ಅಧಿಕ ಕಾಲ ಭಾರಿ ಮಳೆ ಸುರಿಯಿತು. ಇದೆಲ್ಲವನ್ನು ಲೆಕ್ಕಿಸದೆ ಭಕ್ತರು ಅಮ್ಮನ ದರ್ಶನಕ್ಕಾಗಿ ಹುಲಿಗಿಗೆ ಆಗಮಿಸಿದ್ದರು .ಕೆಲವು ಭಕ್ತರು ಮಳೆ ನೀರಿನಲ್ಲಿ ನೆನೆದುಕೊಂಡು ಅಮ್ಮನವರ ದರ್ಶನ ಮಾಡಿದರು.
ಮುನಿರಾಬಾದ್:
ನೂಲು ಹುಣ್ಣಿಮೆ ಪ್ರಯುಕ್ತ ಶನಿವಾರ ಹುಲಿಗೆಮ್ಮ ದೇವಸ್ಥಾನಕ್ಕೆ 1.5 ಲಕ್ಷ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.ಹುಲಿಗಿ ಹಾಗೂ ಸುತ್ತಮುತ್ತ ಶುಕ್ರವಾರ ಸಂಜೆ ಹಾಗೂ ಶನಿವಾರವೂ ಎರಡು ಗಂಟೆಗೂ ಅಧಿಕ ಕಾಲ ಭಾರಿ ಮಳೆ ಸುರಿಯಿತು. ಇದೆಲ್ಲವನ್ನು ಲೆಕ್ಕಿಸದೆ ಭಕ್ತರು ಅಮ್ಮನ ದರ್ಶನಕ್ಕಾಗಿ ಹುಲಿಗಿಗೆ ಆಗಮಿಸಿದ್ದರು .ಕೆಲವು ಭಕ್ತರು ಮಳೆ ನೀರಿನಲ್ಲಿ ನೆನೆದುಕೊಂಡು ಅಮ್ಮನವರ ದರ್ಶನ ಮಾಡಿದರು.ಜುಲೈನಲ್ಲಿ ಕಾರು ಹುಣ್ಣಿಮೆ ಪ್ರಯುಕ್ತ 1.5 ಲಕ್ಷ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವಿ ದರ್ಶನ ಪಡೆದಿದ್ದರು. ಈ ಬಾರಿಯೂ ಸಹ ಅಷ್ಟೇ ಜನರು ಭಕ್ತರು ಅಮ್ಮನ ದರ್ಶನ ಪಡೆದಿದರು.ರಕ್ಷಾ ಬಂಧನದ ಅಂಗವಾಗಿ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಇಳಿಮುಖವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶರಾವ್ ತಿಳಿಸಿದ್ದಾರೆ. ದೇವಸ್ಥಾನಕ್ಕೆ ಅಮ್ಮನ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ರೈಲ್ವೆ ಗೇಟ್ ಹಾಕಿದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಬೇಕಾಯಿತು. ರೈಲ್ವೆ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗಿದ್ದು ಇನ್ನೂ ಒಂದು ವರ್ಷದಲ್ಲಿ ಇದು ಪೂರ್ಣಗೊಳ್ಳಲಿದ್ದು ಇದು ಪೂರ್ಣಗೊಂಡ ನಂತರ ಭಕ್ತರಿಗೆ ಟ್ರಾಫಿಕ್ ಜಾಮ್‌ನ ಗೋಳು ತಪ್ಪಲಿದೆ.