ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ-2024ರ ಚುನಾವಣೆ ಸಂಬಂಧವಾಗಿ ಪದವೀಧರರಿಗೆ ಉಪಯುಕ್ತ ಮಾಹಿತಿ ನೀಡಲು ಚುನಾವಣಾ ಆಯೋಗದ ನಿರ್ದೇಶನದಂತೆ 24*7 ಸಹಾಯವಾಣಿ ಪ್ರಾರಂಭಿಸಲಾಗಿದೆ ಎಂದು ಸುರಪೂರ ತಹಸೀಲ್ದಾರರು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಕಾವ್ಯಾರಾಣಿ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ-2024ರ ದ್ವೈವಾರ್ಷಿಕ ಚುನಾವಣೆ ಘೋಷಣೆ ಮಾಡಿ ವೇಳಪಟ್ಟಿ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲಾ ನಿಬಂಧನೆಗಳು ವಿಧಾನ ಪರಿಷತ್ತಿನ ಚುನಾವಣೆಗೆ ಅನ್ವಯವಾಗುತ್ತವೆ. ಜೊತೆಗೆ ಭಾರತ ಚುನಾವಣಾ ಆಯೋಗವು ಕೆಲವು ನಿಬಂಧನೆಗಳನ್ನು ನೀಡಿದ್ದು, ಇವುಗಳ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.ಸೂಚನೆ: ಭಾಗ ಸಂಖ್ಯೆ 142 ರಲ್ಲಿ 1400 ಕ್ಕಿಂತ ಹೆಚ್ಚಿನ ಮತದಾರರಿವುದರಿಂದ ಒಂದು ಹೆಚ್ಚಿನ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ), ಸುರಪೂರ ತಹಸೀಲ್ ಕಚೇರಿ ಮಸ್ಟರಿಂಗ್, ಹಾಗೂ ಡಿ ಮಸ್ಟರಿಂಗ್ ನಡೆಯಲಿದೆ.
ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಭಾಜಪೇಯಿ ಕಲಬುರಗಿ ವಿಭಾಗ ಅವರು ಚುನಾವಣಾಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಕಾರ್ಯನಿರ್ವಹಿಸುವರು ಹಾಗೂ ಸಹಾಯಕ ಆಯುಕ್ತರು/ತಹಸೀಲ್ದಾರರು ಸಹಾಯಕ ಮತದಾರರ ನೊಂದಣಾದಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.ಮೆ 17 ಇಂದು ಕಲಬುರಗಿ ಮಿನಿ ವಿಧಾನಸೌಧ ಕಾನ್‌ಫರೆನ್ಸ್ ಹಾಲ್‌ನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯ ಭಾಸ್ಕರ್ ಹಾಲ್ ಪಕ್ಕದಲ್ಲಿರುವ ಜ್ಯೂಲಾಜಿ ಕಟ್ಟಡದ ಆಡಿಟೋರಿಯಂದಲ್ಲಿ ಮತ ಏಣಿಕೆ ಕೇಂದ್ರ ಸ್ಥಾಪಿಸಲಾಗಿದೆ.
ಚುನಾವಣೆಯಲ್ಲಿ ಕರ್ತವ್ಯ ನಿರತವಾಗಿರುವ ಅಧಿಕಾರಿ, ಸಿಬ್ಬಂದಿಗಳು ಅಂಚೆ ಮತಪತ್ರದ ಅರ್ಜಿ ಪಡೆಯುವುದು ಕಡ್ಡಾಯ. ಈ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣೆ ವೆಚ್ಚದ ಮಿತಿಗೆ ಯಾವುದೇ ನಿರ್ಭಂದವಿರುವುದಿಲ್ಲ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಅನ್ವಯಿಸುವ ಎಲ್ಲಾ ನಿಯಮಗಳು ಸಹ ಈ ಚುನಾವಣೆಗೆ ಅನ್ವಯಿಸುತ್ತದೆ. ಸಾರ್ವಜನಿಕರು ದೂ.ಸಂ.08443 256043ಗೆ ಕರೆಮಾಡಿ ತಮ್ಮ ಅಹವಾಲು ಹಾಗೂ ದೂರುಗಳನ್ನು ವ್ಯಕ್ತಪಡಿಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.ಚುನಾವಣೆ ವೇಳಾಪಟ್ಟಿ: ಭಾರತ ಚುನಾವಣಾ ಆಯೋಗದ ಚುನಾವಣಾ ವೇಳಾಪಟ್ಟಿ ಪ್ರಕಟ ಮಾಡಿದ್ದು, ಮೇ 17ರ ಶುಕ್ರವಾರ( ಇಂದು) ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 20 ಕ್ಕೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಜೂ.3ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಕಾರ್ಯ ಜೂ. 6 ರಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ.
ಮತಗಟ್ಟೆಗಳ ವಿವರ: ಮತಗಟ್ಟೆ ಸಂಖ್ಯೆ 139 ಕಕ್ಕೇರಾ ಸರಕಾರಿ ಪದವಿ ಪೂರ್ವ ಕಾಲೇಜು
ಮತಗಟ್ಟೆ ಸಂಖ್ಯೆ 140 ಕೆಂಭಾವಿ ಸರಕಾರಿ ಪದವಿ ಪೂರ್ವ ಕಾಲೇಜು
ಮತಗಟ್ಟೆ ಸಂಖ್ಯೆ 142 ಸುರಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ (ಎಡಭಾಗ ಪೊಲೀಸ್) ಕಾಲೋನಿಮತಗಟ್ಟೆ ಸಂಖ್ಯೆ 142/ಎ ಸುರಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ (ಎಡಭಾಗ) ಪೊಲೀಸ್ ಕಾಲೋನಿ