ಸಾರಾಂಶ
ಕಾಂಗ್ರೆಸ್ ವರಿಷ್ಠರು ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಕೊಟ್ಟಿದ್ದು, ದೊಡ್ಮನೆ ಸೊಸೆಯನ್ನು ಗೆಲ್ಲಿಸಿ, ಸಂಸತ್ತಿಗೆ ಸದಸ್ಯರಾಗಿ ಆಯ್ಕೆ ಮಾಡಿ ಕಳಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಹಿರಿಯ ಮುಖಂಡ ಶಿವಕುಮಾರ ಒಡೆಯರ್ ದಾವಣಗೆರೆಯಲ್ಲಿ ಹೇಳಿದ್ದಾರೆ.
ದಾವಣಗೆರೆ: ಕಾಂಗ್ರೆಸ್ ವರಿಷ್ಠರು ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಕೊಟ್ಟಿದ್ದು, ದೊಡ್ಮನೆ ಸೊಸೆಯನ್ನು ಗೆಲ್ಲಿಸಿ, ಸಂಸತ್ತಿಗೆ ಸದಸ್ಯರಾಗಿ ಆಯ್ಕೆ ಮಾಡಿ ಕಳಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಹಿರಿಯ ಮುಖಂಡ ಶಿವಕುಮಾರ ಒಡೆಯರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಕ್ಷೇತ್ರಕ್ಕೆ ನಾನೂ ಆಕಾಂಕ್ಷಿಯಾಗಿದ್ದೆ. ಕ್ಷೇತ್ರಾದ್ಯಂತ 300ಕ್ಕೂ ಹೆಚ್ಚು ಗ್ರಾಮಗಳಿಗೆ ತಾವು ಸಹ ಸುತ್ತಾಡಿ, ಮತದಾರರ ಬಳಿ ಮತಯಾಚಿಸಿದ್ದೆ. ಆದರೆ, ವರಿಷ್ಠರ ಸೂಚನೆಯಂತೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಬದಲಾಗಿ ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಗೆಲುವಿಗೆ ಶ್ರಮಿಸುವೆ ಎಂದರು.ಹೈಕಮಾಂಡ್ ತೀರ್ಮಾನದಂತೆ ಡಾ.ಪ್ರಭಾ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಬಿಡುವಿಲ್ಲದೇ ಪ್ರಚಾರ ಕೈಗೊಂಡಿದ್ದಾರೆ. ಅಹಿಂದ ವರ್ಗವು ಈ ಚುನಾವಣೆಯಲ್ಲಿ ದೊಡ್ಡಣ್ಣನಂತೆ ಕೆಲಸ ಮಾಡುತ್ತಿದೆ. 3 ಲಕ್ಷಕ್ಕೂ ಅಧಿಕ ಮತಗಳು ಕ್ಷೇತ್ರದಲ್ಲಿವೆ. ಅಲ್ಲದೇ, ಮುಂದುವರಿದ ಸಮುದಾಯಗಳು ಸಹ ಡಾ.ಪ್ರಭಾ ಅವರೊಂದಿಗೆ ಮತಯಾಚನೆಗೆ ಕ್ಷೇತ್ರಾದ್ಯಂತ ಶ್ರಮಿಸುತ್ತಿವೆ. ಈ ಸಲ ಡಾ.ಪ್ರಭಾ ಮಲ್ಲಿಕಾರ್ಜುನ ಗೆದ್ದು, ಸಂಸದರಾಗುವ ಮೂಲಕ ಹೊಸ ಇತಿಹಾಸ ಬರೆಯಲಿದ್ದಾರೆ ಎಂದು ಹೇಳಿದರು.
ಮುಖಂಡರಾದ ಬಿ.ಎಚ್.ಪರಶುರಾಮ, ಎಸ್.ಎಸ್.ಗಿರೀಶ, ನವೀನ ನಿಬಗೂರು, ಶಿವಕುಮಾರ ಹನುಮಂತಾಪುರ, ಮಹಾಸ್ವಾಮಿ ನಿಬಗೂರು, ಬೂದಾಳ ಮಂಜಪ್ಪ, ಪಿ.ಬಿ.ಚಂದ್ರಪ್ಪ ಇತರರು ಇದ್ದರು.- - - -8ಕೆಡಿವಿಜಿ2: