ದಾಖಲೆ ಇಲ್ಲದೆ ಸಾಗಿಸುತ್ತಿಲ್ಲ ₹50 ಲಕ್ಷ ನಗದು ವಶ

| Published : Apr 22 2024, 02:16 AM IST

ದಾಖಲೆ ಇಲ್ಲದೆ ಸಾಗಿಸುತ್ತಿಲ್ಲ ₹50 ಲಕ್ಷ ನಗದು ವಶ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹತ್ತಿರದ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಭಾನುವಾರ ಯಾವುದೇ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹ 50 ಲಕ್ಷ ನಗದು ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹತ್ತಿರದ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಭಾನುವಾರ ಯಾವುದೇ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹ 50 ಲಕ್ಷ ನಗದು ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಮನಗೂಳಿ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಕಾಂತ ಕಾಂಬಳೆ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆ ವಿಜಯಪುರದಿಂದ ಚಿಕ್ಕಮಗಳೂರಿನ ಹತ್ತಿರದ ಅಜ್ಜಂಪುರಕ್ಕೆ ಹೋಗುತ್ತಿದ್ದ ಕಾರು ಬಂದಿದೆ. ಈ ವೇಳೆ ಅನುಮಾನ ಬಂದು ಪಿಎಸ್‌ಐ ಪರಿಶೀಲಿಸಿದಾಗ ಕಾರ್‌ ಹಿಂಬದಿಯಲ್ಲಿ ₹ 50 ಲಕ್ಷ ಹಣ ಸಿಕ್ಕಿದೆ. ಬಳಿಕ, ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಹಣದ ಕುರಿತು ಸಹಾಯಕ ಚುನಾವಣಾಧಿಕಾರಿಗಳಿಗೆ, ತಹಸೀಲ್ದಾರರಿಗೆ ಮಾಹಿತಿ ನೀಡಿದ್ದು, ನಂತರ ಸ್ಥಳಕ್ಕೆ ಸಹಾಯಕ ಚುನಾವಣಾಧಿಕಾರಿ ಗಂಗಪ್ಪ.ಎಂ, ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ, ಸಿಪಿಐ ಆನಂದರಾವ, ಎಫ್‌ಎಸ್‌ಟಿ ತಂಡದ ಮುಖ್ಯಸ್ಥ ದಾವಲಸಾಬ ನದಾಫ ಭೇಟಿ ನೀಡಿ ಕಾರಿನಲ್ಲಿ ದಾಖಲೆಯಿಲ್ಲದ ಇಲ್ಲದ ನಗದು ಹಣ ಎಣಿಕೆ ಮಾಡಿದಾಗ ₹ 50 ಲಕ್ಷ ಇರುವುದು ಗೊತ್ತಾಗಿದೆ. ದಾಖಲೆಯಿಲ್ಲದ ಈ ಹಣವನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಮೂವರು ವ್ಯಕ್ತಿಗಳಿದ್ದು, ಇವರು ಚಿಕ್ಕಮಗಳೂರು ತಾಲೂಕು ಕಡೂರು ತಾಲೂಕಿನ ಅಡಗೇರಿಯ ರಕ್ಷಿತ್, ತರಿಕೇರಿ ತಾಲೂಕಿನ ಸೊಖೆಯ ಪ್ರಭು, ತರಿಕೇರಿಯ ತಾಲೂಕಿನ ಸೊಖೆಯ ಗೋಪಾಲ ಇದ್ದರು ಎಂದು ತಿಳಿದುಬಂದಿದೆ. ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಯನ್ನು ಮುಂದುವರಿಸಿದ್ದಾರೆ. ಸ್ಥಳಕ್ಕೆ ಐಟಿ ಇಲಾಖೆ ಅಧಿಕಾರಿಗಳನ್ನು ಕರೆಸಿ ಇದರ ಬಗ್ಗೆ ಮಾಹಿತಿ ನೀಡಲಾಗಿದೆ.