ಸಾರಾಂಶ
ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ವರ್ಷದ ಅಂಗವಾಗಿ ಡಾ.ಮಹೇಶ ಎಸ್. ಹಂಚಾಟೆ ಅವರು ಶಾಲೆ ಮಕ್ಕಳಿಗೆ ಪೆನ್, ನೋಟಬುಕ್ ವಿತರಣೆ ಮಾಡಿದರು.
ಇಳಕಲ್ಲ:
ಲಿಂ.ಡಾ.ಸೋಮನಾಥ ಎನ್.ಹಂಚಾಟೆ ಅವರ ನೆನಪಿನಲ್ಲಿ ಇಳಕಲ್ಲಿನ ಬಸವೇಶ್ವರ ಶಿಕ್ಷಣ ಸಂಸ್ಥೆಯವರು ನಡೆಸುತ್ತಿರುವ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ವರ್ಷದ ಅಂಗವಾಗಿ ಡಾ.ಮಹೇಶ ಎಸ್. ಹಂಚಾಟೆ ಅವರು ಶಾಲೆ ಮಕ್ಕಳಿಗೆ ಪೆನ್, ನೋಟಬುಕ್ ವಿತರಣೆ ಮಾಡಿದರು. ಈ ವೇಳೆ ನಿವೃತ್ತ ಪ್ರಾಚಾರ್ಯ ಎಂ.ಸಿ .ಅಕ್ಕಿ, ಬಸವೇಶ್ವರ ಶಿಕ್ಷಣ ಸಮಿತಿ ಸದಸ್ಯ ಮಹಾಂತೇಶ ಗೊರಜನಾಳ, ಮುಖ್ಯಗುರು ಸಿದ್ದು ಕೊಪ್ಪದ, ಸಹಶಿಕ್ಷಕಿ ಜ್ಯೋತಿ ಚಲವಾದಿ ಮಾತನಾಡಿದರು. ಬಸವೇಶ್ವರ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರಾಜೇಶ್ವರಿ ಎಮ್.ಹಂಚಾಟೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಡಾ.ಮಹೇಶ ಹಂಚಾಟೆ, ಗಣೇಶ ಮಹೇಂದ್ರಕರ, ಗಿರೀಶ ಪಾಟೀಲ ಮೊದಲಾದವರು ವೇದಿಕೆಯಲ್ಲಿದ್ದರು. ಸಿಂಚನ ಮತ್ತು ಸವಿತಾ ಅವರು ಪ್ರಾರ್ಥಿಸಿದರು. ರತ್ನಾ ಕನಸಾವಿ ಸ್ವಾಗತಿಸಿದರು. ಲಕ್ಷ್ಮಿಬಾಯಿ ಬಿಂಜವಾಡಿಗಿ ಪರಿಚಯಿಸಿದರು .ಶೋಭಾ ಮುಳ್ಳೂರು ನಿರೂಪಿಸಿದರು. ರಂಜಾನಬಿ ನದಾಫ ವಂದಿಸಿದರು.