ನೀರಾವರಿ ಯೋಜನೆಗಳ ಕುರಿತು ತಿಳಿದುಕೊಳ್ಳದೆ, ಸುಳ್ಳು ಭಾಷಣ ಮಾಡುವುದು ಬಿಡಲಿ. ನೀರಾವರಿ ಬಗ್ಗೆ ಸದನದಲ್ಲಿ ವಿವರವಾದ ಭಾಷಣ ಮಾಡಿದ್ದೇನೆ

ಯಲಬುರ್ಗಾ: ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಯಾವಾಗಲೂ ಜನಪರ ಕೆಲಸ ಮಾಡಬೇಕು. ಜನರ ಪ್ರೀತಿ ಗೌರವದ ಮುಂದೆ ಯಾವುದೂ ಇಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಜೂಲಕಟ್ಟಿ ಗ್ರಾಮದಿಂದ ಮಾಟರಂಗಿ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ರಾಜಕೀಯ ಅನುಭವ ಇಲ್ಲದವರನ್ನು, ಸುಳ್ಳು ಭಾಷಣ ಮಾಡುವವರನ್ನು ಜನರು ಚುನಾವಣೆಯಲ್ಲಿ ಆರಿಸಿ ತರುತ್ತಾರೆ. ರಾಜಕಾರಣಿಗಳು ಅಭಿವೃದ್ಧಿ ಕೆಲಸ ಮಾಡಬೇಕು. ಇಲ್ಲವಾದರೆ ಆ ಸ್ಥಾನಕ್ಕೆ ಬರಬಾರದು ಎಂದರು.

ಪ್ರತಿ ಪಕ್ಷದವರು ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆ ಟೀಕಿಸಿದರು. ಶಕ್ತಿ ಯೋಜನೆಯಡಿ ಕೋಟಿಗಟ್ಟಲೆ ಜನರು ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದು ವಿಶ್ವದಾಖಲೆ ಬರೆದಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ದೂರದೃಷ್ಟಿ ಯೋಜನೆ ರೂಪಿಸಬೇಕಿದೆ. ಮುಂದಿನ ಸಲ ಕ್ಷೇತ್ರದ ೧೦ ಸಾವಿರ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುವುದು. ಬಂಜಾರ ಸಮಾಜದ ಮಕ್ಕಳಿಗೆ ಪ್ರತ್ಯೇಕವಾಗಿ ವಸತಿ ಶಾಲೆ ಸ್ಥಾಪಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಲಾಗಿದೆ. ಈ

ಸಲ ಮಂಡನೆಯಾಗಲಿರುವ ಬಜೆಟ್ ₹೪ ಲಕ್ಷ ೩೬ ಸಾವಿರ ಕೋಟಿ ಗಾತ್ರದ್ದಾಗಲಿದೆ. ಇನ್ನಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಇಷ್ಟು ಅನುದಾನವನ್ನು ಬೇರೆ ಯಾವ ರಾಜ್ಯ ಸರ್ಕಾರಗಳು ಕೊಡುವುದಿಲ್ಲ. ನೀರಾವರಿ ಬಗ್ಗೆ ಭಾಷಣ ಮಾಡುವವರು ಮೊದಲು ತಮ್ಮ ಊರಿಗೆ ಮಾಡಿಕೊಳ್ಳಲಿ. ನೀರಾವರಿ

ಯೋಜನೆಗಳ ಕುರಿತು ತಿಳಿದುಕೊಳ್ಳದೆ, ಸುಳ್ಳು ಭಾಷಣ ಮಾಡುವುದು ಬಿಡಲಿ. ನೀರಾವರಿ ಬಗ್ಗೆ ಸದನದಲ್ಲಿ ವಿವರವಾದ ಭಾಷಣ ಮಾಡಿದ್ದೇನೆ. ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಶಿಕ್ಷಣ, ಆರೋಗ್ಯ, ಅನ್ನಭಾಗ್ಯ ಸೇರಿದಂತೆ ಅನೇಕ ಜನಪರ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಶಾಲ್ಯವಾಗಿದೆ.

ತಾಲೂಕಿನಲ್ಲಿ ೨೩,೧೨೧ ಜನರಿಗೆ ಮಾಸಾಶನ ಪಡೆಯುತ್ತಿದ್ದಾರೆ. ಇದರ ಜತೆಗೆ ಬೇರೆ ಬೇರೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು.

ಇದೆ ವೇಳೆ ಬಂಡಿ, ಕಡಬಲಕಟ್ಟಿ, ಜೂಲಕಟ್ಟಿ, ಬಳೂಟಗಿ ತಾಂಡಾ, ಬಸಾಪುರ, ದಮ್ಮೂರು, ಮಾರನಾಳ, ಹಗೇದಾಳ, ಬಳೂಟಗಿ, ಬೂನಕೊಪ್ಪ, ತುಮ್ಮರಗುದ್ದಿ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಪಿಆರ್‌ಇಡಿ ಎಇಇ ರಾಜಶೇಖರ ಮಳಿಮಠ ಮಾತನಾಡಿದರು.

ಈ ಸಂದರ್ಭ ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ನೀಲಗಂಗಾ ಬಬಲಾದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಎ.ಜಿ. ಭಾವಿಮನಿ,

ವೀರನಗೌಡ ಪಾಟೀಲ್, ಶೇಖರಗೌಡ ಉಳ್ಳಾಗಡ್ಡಿ, ರಾಮಣ್ಣ ಸಾಲಭಾವಿ, ಡಾ. ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಎಂ.ಎಫ್. ನದಾಫ್, ಸಂಗಣ್ಣ ತೆಂಗಿನಕಾಯಿ, ಶರಣಪ್ಪ ಗಾಂಜಿ, ರೇವಣಪ್ಪ ಹಿರೇಕುರುಬರ, ಸುಧೀರ ಕೊರ್ಲಹಳ್ಳಿ, ಎಂ.ಎಫ್. ನದಾಫ್, ಶರಣಗೌಡ ಬಸಾಪುರ, ನಿಂಗಪ್ಪ ಕಮತರ, ಪುನೀತ ಕೊಪ್ಪಳ,

ಸಿದ್ದು ಪಾಟೀಲ್, ಕಳಕೇಶ ಸೂಡಿ, ಪಿಡಿಒಗಳಾದ ಎಂ.ಡಿ. ಫಯಾಜ್, ಗೊಣೆಪ್ಪ ಜಿರ್ಲಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.