ಮೂರು ತಿಂಗಳೊಳಗೆ ಅರ್ಜಿ ವಿಲೇವಾರಿಗೆ ಸೂಚನೆ

| Published : Dec 01 2024, 01:31 AM IST

ಮೂರು ತಿಂಗಳೊಳಗೆ ಅರ್ಜಿ ವಿಲೇವಾರಿಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಇನ್ನು ಮೂರು ತಿಂಗಳ ಒಳಗಾಗಿ ಫಾರಂ ನಂ.50, 53ರ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಖಾತೆ ಮಾಡಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಮಾಗಡಿ: ಇನ್ನು ಮೂರು ತಿಂಗಳ ಒಳಗಾಗಿ ಫಾರಂ ನಂ.50, 53ರ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಖಾತೆ ಮಾಡಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಭೂ ಮಂಜೂರಾತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಜಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪನವರು ಹಿಂದಿನ ಸರ್ಕಾರದ ಅವಧಿಯಲ್ಲಿ 50, 53ರಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಒಂದು ಬಾರಿ ಮಂಜೂರಾತಿ ನೀಡುವಂತೆ ಆದೇಶ ನೀಡಿ, ಕಡತದಲ್ಲಿರುವ ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ಮಂಜೂರಾತಿ ನೀಡಬಾರದು ಎಂದು ಹೇಳಿದರು.

ಹಲವು ವರ್ಷಗಳಿಂದಲೂ ತಾಲೂಕು ಕಚೇರಿಯಲ್ಲಿ ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಕೆಲವು ದಾಖಲಾತಿಗಳು ಕಳ್ಳತನವಾಗಿದೆ ಮತ್ತು ನಕಲನ್ನು ಮಾಡಿರುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಪ್ರತಿ ಬಾರಿ ರೈತರು ಈ ವಿಚಾರವಾಗಿ ತಾಲೂಕು ಕಚೇರಿಗೆ ಅಲೆದಾಡುತ್ತಿದ್ದು, ಸರಿಯಾದ ದಾಖಲಾತಿ ಇಲ್ಲದಿರುವುದು ನಮಗೂ ಸಮಸ್ಯೆಯಾಗುತ್ತಿದೆ. 63 ಅರ್ಜಿಗಳ ದಾಖಲಾತಿಗಳನ್ನು ತಿದ್ದಿ ನಕಲು ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಹಸೀಲ್ದಾರ್‌ಗೆ ತಿಳಿಸಲಾಗಿದೆ ಎಂದು ಬಾಲಕೃಷ್ಣ ಹೇಳಿದರು.

450 ಅರ್ಜಿಗಳಿಗೆ ಹಕ್ಕುಪತ್ರ, ಖಾತೆ ವಿತರಣೆ:

50, 53 ರಲ್ಲಿ ಅರ್ಜಿ ಸಲ್ಲಿಸಿದ ನೈಜ ಫಲಾನುಭವಿಗಳು 450 ಫಲಾನುಭವಿಗಳಿಗೆ ಜನವರಿ 15ರ ಒಳಗೆ ಅರ್ಜಿ ವಿಲೇವಾರಿ ಮಾಡುವಂತೆ ತಹಸೀಲ್ದಾರ್ ಶರತ್ ಕುಮಾರ್‌ಗೆ ಸೂಚನೆ ನೀಡಲಾಗಿದೆ. ಕಡತದಲ್ಲಿ ಹೆಚ್ಚು ಹೆಸರುಗಳಿದ್ದು ಇದನ್ನು ಸರ್ಕಾರದ ಮುಂದಿನ ಆದೇಶ ಬರುವವರೆಗೂ ವಿಲೇವಾರಿ ಮಾಡಲು ಆಗುವುದಿಲ್ಲ. 450 ಫಲಾನುಭವಿಗಳಿಗೆ ಮೂರು ತಿಂಗಳಲ್ಲಿ ಅರ್ಜಿಗಳನ್ನು ಸಂಪೂರ್ಣ ವಿಲೇವಾರಿ ಮಾಡುವಂತೆ ಬಾಲಕೃಷ್ಣ ಹೇಳಿದರು.

ಹಿಂದೆ ಭೂ ಮಂಜೂರಾತಿ ಸಭೆಯಲ್ಲಿ ಅನುಮೋದನೆ ಪಡೆದಿರುವ ಫಲಾನುಭವಿ ರೈತರು ಇನ್ನು ಖಾತೆ ಆಗದೆ ಇರುವ ಫಲನುಭವಿಗಳು ಮಂಜೂರಾತಿ ಆದೇಶ ದಾಖಲಾತಿಗಳೊಂದಿಗೆ ಉಪ ತಹಸೀಲ್ದಾರ್‌ಗೆ ಅರ್ಜಿ ನೀಡಿದರೆ ಅಂತಹ ಅರ್ಜಿಗಳನ್ನು ಪರಿಶೀಲಿಸಿ ಕಾನೂನು ಬದ್ಧವಾಗಿ ಖಾತೆ ಮಾಡಲಾಗುತ್ತದೆ. ಪ್ರಮುಖವಾಗಿ ಒಎಂ, ಪಹಣಿ, ಹಕ್ಕು ಪತ್ರ ಇದ್ದವರಿಗೆ ಖಾತೆ ಮಾಡಿಸಲಾಗುತ್ತದೆ. ರೈತರು ಕೂಡಲೇ ದಾಖಲಾತಿಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಶರತ್ ಕುಮಾರ್, ಭೂ ಮಂಜೂರಾತಿ ಸಮಿತಿ ಸದಸ್ಯರಾದ ಪುರುಷೋತ್ತಮ್ ಕುಮಾರ್, ಚಂದ್ರಕಲಾ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

29ಮಾಗಡಿ2 :

ಮಾಗಡಿಯ ತಾಲೂಕು ಕಚೇರಿಯಲ್ಲಿ ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಭೂ ಮಂಜೂರಾತಿ ಸಮಿತಿ ಸಭೆ ನಡೆಯಿತು. ತಹಸೀಲ್ದಾರ್ ಶರತ್ ಕುಮಾರ್, ಭೂ ಮಂಜೂರಾತಿ ಸಮಿತಿ ಸದಸ್ಯರಾದ ಪುರುಷೋತ್ತಮ್ ಕುಮಾರ್, ಚಂದ್ರಕಲಾ ಇತರರಿದ್ದರು.