ಪೈಪ್‌ಲೈನ್ ಕಾಮಗಾರಿ ತ್ವರಿತವಾಗಿ ಪೂರೈಸಲು ಸೂಚನೆ

| Published : Jan 06 2024, 02:00 AM IST

ಸಾರಾಂಶ

ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಭದ್ರಾ ಜಲಾಶಯದಿಂದ ಈ ಗ್ರಾಮಗಳಿಗೆ ಪೈಪ್‌ಲೈನ್ ಮುಖಾಂತರ ನೀರು ಹರಿಸಲಾಗುವುದು. ಅದ್ದರಿಂದ ಕಾಮಗಾರಿ ಗುಣಮಟ್ಟದಿಂದ ಕೂಡಿರುವ ಜೊತೆಗೆ ತ್ವರಿತವಾಗಿ ಪೂರೈಸಬೇಕು ಎಂದು ಶಾಸಕಿ ನಯನಾ ಮೋಟಮ್ಮ ಸೂಚಿಸಿದರು.

- ಕುಡಿಯುವ ನೀರಿನ ಕಾಮಗಾರಿಗೆ ಮಾಗಡಿ ಗ್ರಾಮದಲ್ಲಿ ನಯನಾ ಮೋಟಮ್ಮ ಗುದ್ದಲಿಪೂಜೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಾಲೂಕಿನ ಮಾಗಡಿ ಕೈಮರ ಹಾಗೂ ರಾಮೇದೇವರಹಳ್ಳಿಯ ಗ್ರಾಮಸ್ಥರಿಗೆ ಭದ್ರಾ ಜಲಜೀವನ್ ಯೋಜನೆಯಡಿ 29 ಲಕ್ಷ ರು. ಅನುದಾನದಲ್ಲಿ ಮಂಜೂರಾಗಿರುವ ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಮಾಗಡಿ ಗ್ರಾಮದಲ್ಲಿ ಶಾಸಕಿ ನಯನಾ ಮೋಟಮ್ಮ ಗುದ್ದಲಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕಿ ನಯನ ಮೋಟಮ್ಮ, ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಭದ್ರಾ ಜಲಾಶಯದಿಂದ ಈ ಗ್ರಾಮಗಳಿಗೆ ಪೈಪ್‌ಲೈನ್ ಮುಖಾಂತರ ನೀರು ಹರಿಸಲಾಗುವುದು. ಅದ್ದರಿಂದ ಕಾಮಗಾರಿ ಗುಣಮಟ್ಟದಿಂದ ಕೂಡಿರುವ ಜೊತೆಗೆ ತ್ವರಿತವಾಗಿ ಪೂರೈಸಬೇಕು ಎಂದು ಸೂಚಿಸಿದರು.

ಬಯಲುಸೀಮೆ ಪ್ರದೇಶವಾಗಿರುವ ಈ ಭಾಗದಲ್ಲಿ ಕುಡಿಯುವ ನೀರು ಅತ್ಯಂತ ಮಹತ್ವ ಪಡೆದುಕೊಳ್ಳಲಿದೆ. ಆ ನಿಟ್ಟಿನಲ್ಲಿ ಗ್ರಾಮಸ್ಥರು ಕುಡಿಯುವ ನೀರು ಕಾಮಗಾರಿ ಪೂರ್ಣಗೊಂಡ ಬಳಿಕ ಹೆಚ್ಚು ವ್ಯರ್ಥಗೊಳಿಸ ದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ಮಾಗಡಿ ಗ್ರಾಮದಲ್ಲಿ 12 ಎಕರೆ ಸರ್ಕಾರಿ ಜಾಗವಿರುವ ಹಿನ್ನೆಲೆಯಲ್ಲಿ ನಿವೇಶನವನ್ನಾಗಿ ಮಾರ್ಪಡಿಸಿ ಅರ್ಹ ನಿವೇಶನ ರಹಿತರಿಗೆ ಹಂಚುವ ಗುರಿ ಹೊಂದಿದ್ದು ಆ ನಿಟ್ಟಿನಲ್ಲಿ ಜಾಗ ಮಟ್ಟಗೊಳಿಸುವ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದು ನಿವೇಶನ ಹಂಚುವ ಸಂಬಂಧ ಜಾಗಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರು. ಮೀಸಲಿಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ.ವಿ.ಮಂಜುನಾಥ್, ಮುಗುಳುವಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯ, ಸದಸ್ಯರಾದ ಕಲಾವತಿ, ರಘುನಾಥನ್, ಮಲ್ಲೇಶ್, ವನಿತಾ, ಮಾಜಿ ಅಧ್ಯಕ್ಷ ಕೆ.ಎಸ್.ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಮುದಪೀರ್, ಎಂ.ವಿಜಯ್‌ಕುಮಾರ್, ಗ್ರಾಪಂ ಮಾಜಿ ಸದಸ್ಯ ಕೆ.ವಿ.ವಿರೂಪಾಕ್ಷಪ್ಪ ಹಾಜರಿದ್ದರು. 5 ಕೆಸಿಕೆಎಂ 6

ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮಾಗಡಿ ಗ್ರಾಮದಲ್ಲಿ ಗುದ್ದಲಿಪೂಜೆ ನೆರವೇರಿಸಿದರು.