ನಿಗದಿತ ಸಮಯದಲ್ಲಿ ಕಾಮಗಾರಿಗೆ ಸೂಚನೆ: ಶಾಸಕ ವೆಂಕಟೇಶ್‌

| Published : Dec 08 2024, 01:15 AM IST

ಸಾರಾಂಶ

ಪಾವಗಡದಲ್ಲಿ ಸರ್ಕಾರದ ವಿವಿಧ ಯೋಜನೆ ಅಡಿಯ 14.50 ಕೋಟಿಗಿಂತ ಹೆಚ್ಚಿನ ಅನುದಾನದಲ್ಲಿ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಾಸಕ ಎಚ್‌.ವಿ.ವೆಂಕಟೇಶ್‌ ಗುದ್ದಲಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ತಿರುಮಣಿ ಮತ್ತು ವಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲಾ ಕೊಠಡಿಗಳ ಉದ್ಘಾಟನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆ ಅಡಿಯ 14.50 ಕೋಟಿಗಿಂತ ಹೆಚ್ಚಿನ ಅನುದಾನದಲ್ಲಿ ರಸ್ತೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಾಸಕ ಎಚ್‌.ವಿ.ವೆಂಕಟೇಶ್‌ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿ ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ತಾಲೂಕಿನ ತಿರುಮಣಿ ಹಾಗೂ ವಳ್ಳೂರು ಗ್ರಾಪಂ ವ್ಯಾಪ್ತಿಯ ಶಾಲಾ ಕಾಲೇಜುಗಳ ನೂತನ ಕೊಠಡಿ ನಿರ್ಮಾಣ ಸೇರಿದಂತೆ ಗ್ರಾಮೀಣ ಸಂಪರ್ಕದ ಮುಖ್ಯ ರಸ್ತೆ ಹಾಗೂ ಸಿಸಿರಸ್ತೆಯ ಪ್ರಗತಿಗೆ ಹೆಚ್ಚು ಅದ್ಯತೆ ನೀಡಲಾಗಿದೆ.ಸೋಲಾರ್‌ ವಿಶೇಷ ನಿಧಿ ಸೇರಿದಂತೆ ಜಿಪಂ ಹಾಗೂ ಲೋಕೋಪಯೋಗಿ ಇಲಾಖೆಯ 14.50ಕೋಟಿ ರುಗಳ ಅನುದಾನದಲ್ಲಿ ಮುಖ್ಯ ರಸ್ತೆ ಹಾಗೂ ಸಿಸಿ ಮತ್ತು ಚರಂಡಿಗಳ ನಿರ್ಮಾಣದ ಕಾಮಗಾರಿಗೆ ಗುದ್ದಲಿಪೂಜೆ ನೆರೆವೇರಿಸಲಾಗಿದೆ. ನನ್ನ ಶಾಸಕರ ಅವಧಿಯಲ್ಲಿ ಸರ್ಕಾರದ ವಿವಿಧ ಯೋಜನೆಯಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಪ್ರಗತಿ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರಗತಿಯಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಸ್ಥಳೀಯ ಮುಖಂಡ ಹಾಗೂ ಸಾರ್ವಜನಿಕರ ಇಚ್ಚೆಯಂತೆ ಪ್ರಗತಿಗೆ ಅದ್ಯತೆ ನೀಡಲಾಗಿದೆ ಎಂದರು.

ತಾಲೂಕಿದ್ಯಂತ ಕಾಮಗಾರಿಗಳು ಪ್ರಗತಿಯಲ್ಲಿವೆ. ಟೆಂಡರ್‌ ಪ್ರಕ್ರಿಯೆ ನಿಯಮನುಸಾರ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರೈಸಿ ಜನತೆಗೆ ಅನುಕೂಲ ಕಲ್ಪಿಸುವಂತೆ ಈಗಾಗಲೇ ಕಾಮಗಾರಿಯ ನಿರ್ವಹಣೆ ಹೊತ್ತ ಗುತ್ತಿಗೆದಾರರಿಗೆ ಆದೇಶಿಸಲಾಗಿದೆ ಎಂದರು. ಈ ವೇಳೆ ಸಮಾಜ ಸೇವಕರಾದ ಬತ್ತಿನೇನಿ ನಾಗೇಂದ್ರ ರಾವ್ , ಪುರಸಭಾ ಅಧ್ಯಕ್ಷರಾದ ರಾಜೇಶ್,ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ ,ಇಲ್ಲಿನ ಸೋಲಾರ್‌ ಅಭಿವೃದ್ಧಿ ಪ್ರಾಧಿಕಾರ ನಿಗಮದ ಎಇಇ ಪ್ರಕಾಶ್‌ ,ಸಹಾಯಕ ಅಭಿಯಂತರಾದ ಮಹೇಶ್‌,ತಿರುಮಣಿ ಗ್ರಾಪಂ ಅಧ್ಯಕ್ಷರಾದ ತಿರುಪತಯ್ಯ,ವಳ್ಳೂರು ಗ್ರಾಪಂ ಅಧ್ಯಕ್ಷ ಮುತ್ಯಾಲಪ್ಪ,ಮುಖಂಡ ರಾಮಚಂದ್ರ ರೆಡ್ಡಿ,ಆರ್‌.ಪಿ.ಸಾಂಬಸದಾಶಿವರೆಡ್ಡಿ,ಮಲಿನೇನಿ ಜಯರಾಮ್ ಮಾಜಿ ಗ್ರಾಪಂ ಅಧ್ಯಕ್ಷ , ಚನ್ನಕೇಶವ,ಎವಿಎಂ ಅಶೋಕ್ ,ಇಂಟೂರಾಯನಹಳ್ಳಿಯ ಮುತ್ಯಾಲಪ್ಪ, ಮುಖಂಡರಾದ ರಾಜಗೋಪಾಲ್ ಮಾಜಿ ತಾಪಂ ಅಧ್ಯಕ್ಷ ಲಕ್ಷ್ಮಿ ನಾರಾಯಣಪ್ಪ,ಬಳಸಮುದ್ರ ಗೋವಿಂದಪ್ಪ, ಚಕ್ರಪ್ಪ ,ಪರಿಟಾಲ ರವಿ, ಪುರಸಭಾ ಸದಸ್ಯ ಎನ್ ರವಿ, ಸಂಜೀವ್ ರೆಡ್ಡಿ ,ಗಂಗೋತ್ರಿ ವೆಂಕಟೇಶ್, ಶರತ್ ಬಾಬು, ರಾಮಲಿಂಗ, ಸುಬ್ರಹ್ಮಣ್ಯ,ಇಇ ಹನುಮಂತಯ್ಯ,ಲೋಕೋಪಯೋಗಿ ಇಲಾಖೆಯ ಎಇಇ ಅನಿಲ್ ,ಜಿಪಂ ಎಇಇ ಸುರೇಶ್‌,ನಿರ್ಮಿತಿ ಕೇಂದ್ರ ಸುಬ್ರಹ್ಮಣ್ಯಂ ಸೇರಿ ಪಕ್ಷದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರಿದ್ದರು.