ದೇಶದ್ರೋಹ ಹೇಳಿಕೆ ನೀಡೋರ ಕೊಲ್ಲುವ ಕಾಯ್ದೆ ತನ್ನಿ ಎಂದಿದ್ದಕ್ಕೆ ನೋಟಿಸ್‌: ಈಶ್ವರಪ್ಪ ಕಿಡಿ

| Published : Feb 11 2024, 01:46 AM IST

ದೇಶದ್ರೋಹ ಹೇಳಿಕೆ ನೀಡೋರ ಕೊಲ್ಲುವ ಕಾಯ್ದೆ ತನ್ನಿ ಎಂದಿದ್ದಕ್ಕೆ ನೋಟಿಸ್‌: ಈಶ್ವರಪ್ಪ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ವಿಭಜನೆ ಮಾಡಿ ಎಂದು ದ್ರೇಶದ್ರೋಹದ ಹೇಳಿಕೆ ಕೊಡುವವರ ವಿರುದ್ಧ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ರಾಷ್ಟ್ರದ್ರೋಹಿ ಹೇಳಿಕೆ ನೀಡುವವರಿಗೆ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು ಎಂದು ಹೇಳಿದ ನನಗೆ ನೋಟಿಸ್ ಬಂದಿದೆ. ಅನುದಾನ ಕೊಡಲಿಲ್ಲ ಎಂಬ ಕಾರಣಕ್ಕೆ ದಕ್ಷಿಣ ಪ್ರತ್ಯೇಕ ರಾಷ್ಟ್ರ ಕೊಡಿ ಎಂದು ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದರು. ನಾನು ದೇಶದ್ರೋಹದ ಹೇಳಿಕೆ ನೀಡುವವರನ್ನು ಕೊಲ್ಲುವ ಕಾಯ್ದೆ ತನ್ನಿ ಎಂದು ಹೇಳಿದ್ದೆ. ಅದಕ್ಕೆ ನನಗೆ ನೋಟಿಸ್‌ ಕೊಟ್ಟಿದ್ದಾರೆ. ಇದಕ್ಕೆಲ್ಲ ಹೆದರಿ ಕೂರುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೇಶದ ವಿಭಜನೆ ಮಾಡಿ ಎಂದು ದ್ರೇಶದ್ರೋಹದ ಹೇಳಿಕೆ ಕೊಡುವವರ ವಿರುದ್ಧ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ರಾಷ್ಟ್ರದ್ರೋಹಿ ಹೇಳಿಕೆ ನೀಡುವವರಿಗೆ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು ಎಂದು ಹೇಳಿದ ನನಗೆ ನೋಟಿಸ್ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅನುದಾನ ಕೊಡಲಿಲ್ಲ ಎಂಬ ಕಾರಣಕ್ಕೆ ದಕ್ಷಿಣ ಪ್ರತ್ಯೇಕ ರಾಷ್ಟ್ರ ಕೊಡಿ ಎಂದು ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಹೇಳಿದರು. ದೇಶ ವಿಭಜನೆ ಬಗ್ಗೆ ಮಾತನಾಡಿದ ಅವರ ವಿರುದ್ಧ ಈವರೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ನೋಟಿಸ್, ಕೇಸ್ ಇಲ್ಲ. ನಾನು ದೇಶದ್ರೋಹದ ಹೇಳಿಕೆ ನೀಡುವವರನ್ನು ಕೊಲ್ಲುವ ಕಾಯ್ದೆ ತನ್ನಿ ಎಂದು ಹೇಳಿದ್ದೆ. ಅದಕ್ಕೆ ನನಗೆ ನೋಟಿಸ್‌ ಕೊಟ್ಟಿದ್ದಾರೆ. ಇದಕ್ಕೆಲ್ಲ ಹೆದರಿ ಕೂರುವುದಿಲ್ಲ ಎಂದು ತಿರುಗೇಟು ನೀಡಿದರು.

ದೇಶದ್ರೋಹ ಹೇಳಿಕೆ ನೀಡುವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದೆ. ಇದನ್ನು ರಾಜ್ಯ ಸರ್ಕಾರ ತಪ್ಪು ಎಂದು ಹೇಳುತ್ತಿದೆ. ಇದು ತಪ್ಪೋ, ಸರಿನೋ ರಾಜ್ಯದ ಜನರು ತೀರ್ಮಾನ ಮಾಡ್ತಾರೆ. ಇದರಲ್ಲಿ ವಿನಾ ಕಾರಣ ಆರ್‌ಎಸ್‌ಎಸ್‌ ಅನ್ನು ಕೂಡ ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿದರು.

ಈಗಲೂ ಸಮಯ ಮಿಂಚಿಲ್ಲ. ದೇಶದ್ರೋಹಿ ಡಿ.ಕೆ.ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಎಂ, ಡಿಸಿಎಂಗೆ ಒತ್ತಾಯ ಮಾಡುತ್ತೇನೆ. ಗೃಹ ಸಚಿವ ಪರಮೇಶ್ವರ್ ಹೇಳಿದ್ದನ್ನು ನಾನು ಸ್ವಾಗತ ಮಾಡ್ತೇನೆ. ನಾಳೆಯೇ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದರು.

- - - ಬಾಕ್ಸ್‌ ಈಶ್ವರಪ್ಪ ವಿರುದ್ಧ ಕೇಸ್ ಮುಖೇನ ಕಾನೂನಿದೆ ಎಂಬುದು ಸಾಬೀತು ಶಿವಮೊಗ್ಗ: ಈಶ್ವರಪ್ಪ ವಿರುದ್ಧ ಕೇಸ್ ದಾಖಲಾಗಿರುವುದು ಬಹಳ ಸಂತೋಷದ ವಿಚಾರ. ಈ ಮೂಲಕ ದೇಶದಲ್ಲಿ ಕಾನೂನಿದೆ ಎಂಬುದು ಸಾಬೀತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. ಶನಿವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಕಾನೂನು ಇದೆ ಎಂಬುದು ನಮ್ಮ ಸರ್ಕಾರ ತೋರಿಸಿದೆ. ಯಾರ್ಯಾರು ಈ ತರ ಮಾತಾಡುತ್ತಾರರೋ, ಅವರ ಮೇಲೆ ‌ಮುಂದೆ ಇದೇ ರೀತಿ ಕೇಸ್ ದಾಖಲಾಗಬೇಕು. ಅಂಬೇಡ್ಕರ್ ಸಂವಿಧಾನ ಕೊಟ್ಟಿರೋದು ಈ ತರಹ ಹೇಳಿಕೆ ನೀಡೋಕೆ ಅಲ್ಲ. ಈಶ್ವರಪ್ಪನವರು ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ನಮ್ಮ ಮುಂದೆ ಹೇಳಿದ್ರೆ ಆಗೋಲ್ಲ. ಅವರು ಕೋರ್ಟ್ ಮುಂದೆ ಹೇಳಬೇಕು. ಕೋರ್ಟ್‌ನಲ್ಲಿ ಉತ್ತರ ಕೊಡಲಿ. ಸರಿ ಇತ್ತು ಅಂದ್ರೆ ಕೋರ್ಟ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಕುಟುಕಿದರು. ಡಿ.ಕೆ.ಸುರೇಶ್ ದೇಶ ಒಡೆಯೋ ಹೇಳಿಕೆ ನೀಡಿಲ್ಲ. ಜನರ ಕೂಗನ್ನು ಡಿ.ಕೆ.ಸುರೇಶ್ ಹೇಳಿದ್ದಾರೆ. ನಾನು ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳೋದಿಲ್ಲ. ಆದರೆ, ಬಿಜೆಪಿಯವರು ಸುರೇಶ್ ಮೇಲೆ ಕೇಸು ಹಾಕಲಿ, ಕಾನೂನು ನೋಡಿಕೊಳ್ಳುತ್ತೆ ಎಂದು ಗುಡುಗಿದರು. - - -

-ಫೋಟೋ: ಕೆ.ಎಸ್‌. ಈಶ್ವರಪ್ಪ(-ಫೋಟೋ: ಮಧು ಬಂಗಾರಪ್ಪ)