ಕೃಷಿ ಪಂಪ್‌ಸೆಟ್‌ಗಳಿಗೆ 7 ತಾಸು ತ್ರಿಫೇಸ್ ಕರೆಂಟ್ ನೀಡಲು ಸೂಚನೆ

| Published : Jan 30 2025, 12:35 AM IST

ಕೃಷಿ ಪಂಪ್‌ಸೆಟ್‌ಗಳಿಗೆ 7 ತಾಸು ತ್ರಿಫೇಸ್ ಕರೆಂಟ್ ನೀಡಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಪಂಪ್‌ಸೆಟ್‌ಗಳಿಗೆ ಏಳು ತಾಸು ತ್ರಿಫೇಸ್ ವಿದ್ಯುತ್ ನೀಡಬೇಕು. ಕಡಿಮೆ ಅವಧಿ ವಿದ್ಯುತ್ ನೀಡದಂತೆ ಹೆಸ್ಕಾಂ ಅಧಿಕಾರಿಗಳಿಗೆ ಶಾಸಕ ಯು.ಬಿ. ಬಣಕಾರ ಸೂಚನೆ ನೀಡಿದರು.

ಹಿರೇಕೆರೂರು: ರೈತರ ಪಂಪ್‌ಸೆಟ್‌ಗಳಿಗೆ ಏಳು ತಾಸು ತ್ರಿಫೇಸ್ ವಿದ್ಯುತ್ ನೀಡಬೇಕು. ಕಡಿಮೆ ಅವಧಿ ವಿದ್ಯುತ್ ನೀಡದಂತೆ ಹೆಸ್ಕಾಂ ಅಧಿಕಾರಿಗಳಿಗೆ ಶಾಸಕ ಯು.ಬಿ. ಬಣಕಾರ ಸೂಚನೆ ನೀಡಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕಾರ್ಯಕ್ರಮಗಳನ್ನು ಜವಾಬ್ದಾರಿಯಿಂದ ಸಮರ್ಪಕವಾಗಿ ನಿಗದಿಯಂತೆ ಅನುಷ್ಠಾನಗೊಳಿಸುವ ಜತೆಗೆ ಪ್ರಸ್ತಕ ಆರ್ಥಿಕ ವರ್ಷದ ಸಾಧನೆಯನ್ನು ಪೂರ್ಣಗೊಳಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು.ಪಂಪ್‌ಸೆಟ್‌ಗಳ ಕಾರ್ಯ ಒತ್ತಡ ಅಧಿಕವಾಗಿದ್ದರಿಂದ ವಿದ್ಯುತ್ ಪರಿವರ್ತಕಗಳು ಹೆಚ್ಚು ದುರಸ್ತಿಗೆ ಬರುತ್ತಿದ್ದು ತ್ವರಿತಗತಿಯಲ್ಲಿ ಅವುಗಳನ್ನು ದುರಸ್ತಿಗೊಳಿಸಲು ಕ್ರಮವಹಿಸಲಾತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.ರೈತ ಆತ್ಮಹತ್ಯೆ ಪ್ರಕರಣಗಳು ಕಂಡುಬಂದರೆ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಮೃತ ರೈತ ಕುಟುಂಬದವರಿಂದ ಅರ್ಜಿ ಪಡೆಯುವ ಕಾರ್ಯ ಮಾಡಬೇಕು. ಅರ್ಜಿ ಸಲ್ಲಿಕೆ ತಡವಾದರೆ ಪ್ರಕರಣಗಳು ವಿಳಂಬವಾಗುತ್ತವೆ. ರೈತರು ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.ಕೆರೆ ತುಂಬಿಸುವ ಯೋಜನೆಯಡಿ ತುಂಬಿಸಿರುವ ಕೆರೆಗಳ ಸಂಪೂರ್ಣ ಮಹಿತಿಯನ್ನು ಸಮಗ್ರವಾಗಿವಾಗಿ ಸಭೆಗೆ ನೀಡಬೇಕು, ಕೆರೆ ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರೆ ಸಾಲದು. ಅದು ಅನುಷ್ಠಾನಗೊಳ್ಳಬೇಕು. ಮಳೆಗಾಲ ಆರಂಭವಾಗುವ ಮುನ್ನವೇ ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಂಡು ಕೆರೆಗಳಿಗೆ ನೀರು ಹರಿಸುವ ಕಾರ್ಯ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಸರ್ವಜ್ಙ ಏತ ನೀರಾವರಿ ಮುಕ್ತಾಯಗೊಳಿಸುವಲ್ಲಿ ಬಹಳಷ್ಟು ವಿಳಂಬವಾಗಿದ್ದು ಕರಾರಿನ ಪ್ರಕಾರ ಗುತ್ತಿಗೆದಾರರು ಮೇಲೆ ಕ್ರಮ ಕೈಗೊಳ್ಳಲು ಶಾಸಕರು ಸೂಚನೆ ನೀಡಿದರು.ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಜಾಗ ನೀಡಲು.ಸರ್ಕಾರಿ ಜಾಗೆಗಳನ್ನು ಗುರುತಿಸಿ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಹಸೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಾಸೂರು ಗ್ರಾಮದ ಕೊಪ್ಪದ ಕರೆ ಜಾತ್ರೆ ಹಾಗೂ ಹಂಸಭಾವಿ ಗ್ರಾಮದ ಜಾತ್ರಾ ಮಹೋತ್ಸವವಿದ್ದು ಭಕ್ತಾಧಿಗಳಿಗೆ ಬರುವ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಸಮರ್ಪಕ ಬಸ್ ವ್ಯವಸ್ಥೆ ಮಾಡಬೇಕು. ತಾತ್ಕಾಲಿಕ ನಿಯಂತ್ರಣ ಘಟಕ ಸ್ಥಾಪಿಸಿ ಪ್ರಯಾಣಿಕರಿಗೆ ಅನುಕುಲ ಮಾಡಬೇಕು. ಬಸ್ ಸಂಖ್ಯೆ ಕಡಿಮೆ ಅದರೆ ಬೇರೆ ಘಟಕಗಳಿಂದ ಬಸ್ ವ್ಯವಸ್ಥೆ ಮಾಡಿಕೊಳ್ಳಲು ವಾಯವ್ಯ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಶಾಸಕರು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಎಚ್‌. ಪ್ರಭಾಕರಗೌಡ, ರಟ್ಟಿಹಳ್ಳಿ ತಹಸೀಲ್ದಾರ್‌ ಕೆ. ಗುರುಬಸವರಾಜ, ಆಡಳಿತಾಧಿಕಾರಿ ಎಚ್.ವೈ. ಮೀಸೆ, ತಾಪಂ ಇಒ ಮಲ್ಲಿಕಾರ್ಜುನ ಕೆ.ಎಂ. ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಬುರಡಿಕಟ್ಟಿ, ನಾರಾಯಣಪ್ಪ ಗೌರಕ್ಕನವರ, ಕ್ಷೇತ್ರ ಶಿಕ್ಷಾಣಾಧಿಕಾರಿ ಎನ್. ಶ್ರೀಧರ್, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ, ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ್, ಪ್ರಧಾನ ಮಂತ್ರಿ ಪೋಷಣಾ ಅಭಿಯಾನದ ಸಹಾಯಕ ನಿರ್ದೇಶಕ ಎಚ್‌. ಎಚ್‌. ಜಾಡರ ಹಾಗೂ ವಿವಿದ ಇಲಾಖೆ ಅಧಿಕಾರಿಗಳು ಹಾಜರಿದ್ದರು.