ಪಿಯುಸಿ ಫಲಿತಾಂಶದಲ್ಲಿ ಸಾಧನೆಗೆ ಶ್ರಮಿಸಲು ಸೂಚನೆ

| Published : Sep 27 2024, 01:19 AM IST

ಸಾರಾಂಶ

ತುಮಕೂರು: ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿಯಿಂದ ಅರ್ಧ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹಾಗೂ ವಿಷಯವಾರು ಪಠ್ಯಯೋಜನೆ ಕಾರ್ಯಾಗಾರ ನಗರದ ಎಂಪ್ರೆಸ್ ಪದವಿ ಪರ್ವಿ ಕಾಲೇಜಿನಲ್ಲಿ ನಡೆಯಿತು.

ತುಮಕೂರು: ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿಯಿಂದ ಅರ್ಧ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹಾಗೂ ವಿಷಯವಾರು ಪಠ್ಯಯೋಜನೆ ಕಾರ್ಯಾಗಾರ ನಗರದ ಎಂಪ್ರೆಸ್ ಪದವಿ ಪರ್ವಿ ಕಾಲೇಜಿನಲ್ಲಿ ನಡೆಯಿತು.ಶಾಲಾ ಶಿಕ್ಷಣ ಇಲಾಖೆ ತುಮಕೂರು ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ವಿವಿಧ ವಿಷಯಗಳ ವೇದಿಕೆಗಳ ಮೂಲಕ ಸಿದ್ಧಪಡಿಸಿರುವ 2024-25 ನೇ ಸಾಲಿನ ಪ್ರಯೋಗ ರಹಿತ ವಿಷಯಗಳ ಯೋಜಿತ ಕಾರ್ಯಗಳ ಶೀರ್ಷಿಕೆಗಳ ಕೈಪಿಡಿ ಬಿಡುಗಡೆಮಾಡಿ ಜಿಲ್ಲೆಯ ಫಲಿತಾಂಶ ಹೆಚ್ಚಿಸಲೂ ನಿಮ್ಮ ಸಹಕಾರ ಅಗತ್ಯವಿದೆ ಎಂದರು.ಯಾವುದೇ ಲೋಪವಾಗದೆ ಇಲಾಖೆಯ ನಿಯಮದಂತೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ. ಈ ಶೈಕ್ಷಣಿಕ ವರ್ಷದಲ್ಲಿ ದ್ವೈಮಾಸಿಕ ಸಂಚಿಕೆಯನ್ನೂ ಹೊರತರಲಾಗುವುದು. ಉಪನ್ಯಾಸಕರಿಗೂ ಅವಕಾಶ ಇರುವುದರಿಂದ ನೀವು ಹೆಚ್ಚು ವೈಜ್ಞಾನಿಕ ಚಿಂತನೆ ಬರಹಗಳಿಗೆ ಹಾಗೂ ಉತ್ತಮ ಶೀರ್ಷಿಕೆ ನೀಡಲು ತಿಳಿಸಿದರು.ಎಲ್ಲಾ ಕಾಲೇಜಿನ ಮಕ್ಕಳು ನಮ್ಮ ಮಕ್ಕಳೇ ಎಂದು ತಿಳಿದು ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು. ತುಮಕೂರು ಜಿಲ್ಲೆ ಕಳೆದ ವರ್ಷ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 24 ನೇ ಸ್ಥಾನದಲ್ಲಿದ್ದು ಈ ಶೈಕ್ಷಣಿಕ ಸಾಲಿನಲ್ಲಿ ಅತ್ಯುನ್ನತ ಸ್ಥಾನ ಪಡೆಯಲು ನಾವು ನೀವು ಒಟ್ಟಾಗಿ ಶ್ರಮಿಸೋಣ ಎಂದರು. ಪ್ರಾಂಶುಪಾಲ ಸಂಘದ ಅಧ್ಯಕ್ಷ ಪ್ರಭಾಕರ್ ರೆಡ್ಡಿ ಮಾತನಾಡಿ ಪ್ರಥಮ ದ್ವಿತೀಯ ಪಿಯುಸಿ ಪಠ್ಯಯೋಜನೆ, ಯೋಜಿತ ಕಾರ್ಯ ಗಳ ಶೀರ್ಷಿಕೆ ಗಳ ಬಗ್ಗೆ ಹಾಗೂ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಬಗ್ಗೆ ತಿಳಿಸಿಕೊಟ್ಟರು. ಎರಡನೇ ಕಿರುಪರೀಕ್ಷೆ ಹಾಗೂ ಪೂರ್ವಸಿದ್ಧತೆಯ ಪರೀಕ್ಷೆ ನಡೆಸಲು ಇದೆ ರೀತಿಯ ಕಾರ್ಯಾ ಗಾರ ಮಾಡಲಾಗುವುದು. ಎಲ್ಲಾ ಕಾಲೇಜಿನ ಪ್ರಾಚಾರ್ಯಾರ ಸಹಕಾರದಿಂದ ಸಂಘದ ಪದಾಧಿಕಾರಿಗಳಿಂದ ಈ ರೀತಿಯ ಉತ್ತಮ ಕಾರ್ಯಾಗಾರ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಮಲ್ಲಯ್ಯ, ಜಗದೀಶ್, ಪ್ರಸಾದ್, ಓಬಳೇಶಪ್ಪ, ಸಿದ್ದಗಂಗಾ ಚಂದ್ರಶೇಖರ್,ಮಂಜುನಾಥ್ ಬಿ ಆರ್, ಸಂಘದ ಪದಾಧಿಕಾರಿಗಳು ಪರೀಕ್ಷಾ ಸಮಿತಿಯ ಸದಸ್ಯರು ಹಾಗೂ ವಿಷಯವಾರು ಐವತ್ತನಾಲ್ಕಕ್ಕೂ ಹೆಚ್ಚು ವಿಷಯಸಂಪನ್ಮೂಲ ಉಪನ್ಯಾಸಕರು ಉಪಸ್ಥಿತರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಆರಾಧ್ಯ ಎಚ್. ವಿ. ಸ್ವಾಗತಿಸಿದರು. ಪ್ರಾಂಶುಪಾಲರಾದ ತ್ರಿವೇಣಿ ನಿರೂಪಿಸಿದರು.