ಜೀವನ್ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

| Published : Dec 14 2023, 01:30 AM IST

ಸಾರಾಂಶ

ಪಿಂಚಣಿದಾರರು 3 ವರ್ಷಗಳಿಗಿಂತ ಹೆಚ್ಚು ಕಾಲ ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ವಿಫಲರಾದರೆ ನಂತರ ಪಿಪಿಒ ರದ್ದತಿಗೆ ಅವಕಾಶವಿದೆ. ಆದ್ದರಿಂದ ಇದುವರೆಗೆ ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸದಿರುವ ಪಿಂಚಣಿದಾರರು/ ಫಲಾನುಭವಿಗಳು ಆದ್ಯತೆ ಮೇರೆಗೆ ಅದನ್ನು ಸಲ್ಲಿಸುವಂತೆ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಮನವಿ ಮಾಡಿದ್ದಾರೆ.

ಶಿವಮೊಗ್ಗ: ಇಪಿಎಸ್ 1995ರ ಪಿಂಚಣಿದಾರರು/ ಫಲಾನುಭವಿಗಳು ಪ್ರತಿ 12 ತಿಂಗಳಿಗೊಮ್ಮೆ ಜೀವನ್ ಪ್ರಮಾಣ್ ಪತ್ರವನ್ನು ಸಲ್ಲಿಸಬೇಕಾಗಿದ್ದು, ಇದುವರೆಗೆ ಸಲ್ಲಿಸದೇ ಇರುವವರು ತಕ್ಷಣ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಈ ಹಿಂದೆ ಪಿಂಚಣಿದಾರರು ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿತ್ತು. ಆದರೆ, ಈಗ ಪಿಂಚಣಿದಾರರು ಕಳೆದ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಿದ ದಿನಾಂಕದಿಂದ 12 ತಿಂಗಳಿಗೊಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ಜೀವನ್ ಪ್ರಮಾಣ ಪತ್ರದ ಸಲ್ಲಿಕೆಯಲ್ಲಿನ ವಿಳಂಬವು ಪಿಂಚಣಿಯನ್ನು ನಿಲ್ಲಿಸಲು ಕಾರಣವಾಗುತ್ತದೆ. ಜೀವನ್ ಪ್ರಮಾಣ ಪತ್ರವನ್ನು ಫೇಸ್ ದೃಢೀಕರಣ ತಂತ್ರಜ್ಞಾನದ ಮೂಲಕ ಸಲ್ಲಿಸಬಹುದು (http://jeevanpranaam.gov.in/package/download) ಹಾಗೂ ಯೂಟೂಬ್ ವಿಡಿಯೋ ಲಿಂಕ್: https://youtube/dobsgqk421Q?si=cVEKWUCJToELdFoUFAT ತಂತ್ರಜ್ಞಾನ ಹೇಗೆ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂಬುದನ್ನು ವಿವರಿಸುತ್ತದೆ. ಇದನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಅಥವಾ ಪಿಂಚಣಿ ವಿತರಿಸುವ ಬ್ಯಾಂಕ್ ಶಾಖೆಗಳಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಪಿಂಚಣಿದಾರರು 3 ವರ್ಷಗಳಿಗಿಂತ ಹೆಚ್ಚು ಕಾಲ ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ವಿಫಲರಾದರೆ ನಂತರ ಪಿಪಿಒ ರದ್ದತಿಗೆ ಅವಕಾಶವಿದೆ. ಆದ್ದರಿಂದ ಇದುವರೆಗೆ ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸದಿರುವ ಪಿಂಚಣಿದಾರರು/ ಫಲಾನುಭವಿಗಳು ಆದ್ಯತೆ ಮೇರೆಗೆ ಅದನ್ನು ಸಲ್ಲಿಸುವಂತೆ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು II ಮನವಿ ಮಾಡಿದ್ದಾರೆ.

- - -

(** ಇಂಗ್ಲಿಷ್‌ ಪದಗಳಿವೆ, ಗಮನಿಸಿ...)