ಸ್ಲಂ ನಿವಾಸಿಗಳಿಗೆ ಕ್ರಯಪತ್ರ ನೀಡದಕ್ಕೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್

| Published : Nov 30 2024, 01:32 AM IST / Updated: Nov 30 2024, 10:12 AM IST

Highcourt
ಸ್ಲಂ ನಿವಾಸಿಗಳಿಗೆ ಕ್ರಯಪತ್ರ ನೀಡದಕ್ಕೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್
Share this Article
  • FB
  • TW
  • Linkdin
  • Email

ಸಾರಾಂಶ

ಹೊಂಬೇಗೌಡ ನಗರ ಮಾಧವನ್ ಪಾರ್ಕ್ ಕೊಳಗೇರಿ ಪ್ರದೇಶದದಿಂದ ಕೊರಮಂಗಲ 3ನೇ ಹಂತದ ಕೊಳಗೇರಿ ಪ್ರದೇಶಕ್ಕೆ ಸ್ಥಳಾಂತರಿಸಲಾದ 951 ಕುಟುಂಬಗಳಿಗೆ ಕ್ರಯ ಪತ್ರ ವಿತರಿಸದ ವಿಚಾರ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

 ಬೆಂಗಳೂರು : ಹೊಂಬೇಗೌಡ ನಗರ ಮಾಧವನ್ ಪಾರ್ಕ್ ಕೊಳಗೇರಿ ಪ್ರದೇಶದದಿಂದ ಕೊರಮಂಗಲ 3ನೇ ಹಂತದ ಕೊಳಗೇರಿ ಪ್ರದೇಶಕ್ಕೆ ಸ್ಥಳಾಂತರಿಸಲಾದ 951 ಕುಟುಂಬಗಳಿಗೆ ಕ್ರಯ ಪತ್ರ ವಿತರಿಸದ ವಿಚಾರ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. 

ಈ ಕುರಿತಂತೆ ಕರ್ನಾಟಕ ಹರಿಜನ ಕೊಳಗೇರಿ ನಿವಾಸಿಗಳ ಸಂಘ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್ ಅವರ ಪೀಠ, ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 951 ಕುಟುಂಬಗಳನ್ನು ಅನೇಕ ದಶಕಗಳಿಂದ ಮಾಧವನ್ ಪಾರ್ಕ್ ಕೊಳಗೇರಿ ಪ್ರದೇಶದಲ್ಲಿ ವಾಸವಾಗಿದ್ದವು. ಆ ಕುಟುಂಬಗಳನ್ನು ಸರ್ಕಾರವು 1998ರಲ್ಲಿ ಕೋರಮಂಗಲ 3ನೇ ಹಂತಕ್ಕೆ ಸ್ಥಳಾಂತರಿಸಿತ್ತು. ಬಳಿಕ ಹಂಚಿಕೆ ಪತ್ರ ಹಕ್ಕುಪತ್ರ ಸಹ ನೀಡಲಾಗಿತ್ತು. ಆದರೆ, ಈವರೆಗೂ ಕ್ರಯ ಪತ್ರ ನೀಡಿಲ್ಲ. ಇದರಿಂದ ಆ ಜಾಗಕ್ಕೆ ಖಾತಾ ಸಿಗದೆ ಹಾಗೂ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗದೆ ಕೊಳಗೇರಿ ನಿವಾಸಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿದರು. ಅಲ್ಲದೆ, ಕೊಳಗೇರಿ ನಿವಾಸಿಗಳಿಗೆ ಕ್ರಯಪತ್ರ ನೀಡಬೇಕು ಹಾಗೂ ಅರ್ಜಿದಾರ ಸಂಘದ ನೆರವಿನೊಂದಿಗೆ ತನಿಖೆ ನಡೆಸಿ ಮೂಲ ನಿವಾಸಿಗಳನ್ನು ಗುರುತಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದರು.