ಗುಣಮಟ್ಟದ ಬಿತ್ತನೆ ಬೀಜ ಮಾರಾಟಕ್ಕೆ ವರ್ತಕರಿಗೆ ಸೂಚನೆ: ಡಿಸಿ ಮೀನಾ ನಾಗರಾಜ್‌

| Published : Jun 25 2024, 12:31 AM IST

ಗುಣಮಟ್ಟದ ಬಿತ್ತನೆ ಬೀಜ ಮಾರಾಟಕ್ಕೆ ವರ್ತಕರಿಗೆ ಸೂಚನೆ: ಡಿಸಿ ಮೀನಾ ನಾಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುರೈತರಿಗೆ ಗುಣ್ಣಮಟ್ಟದ ಬಿತ್ತನೆ ಬೀಜ ನೀಡಬೇಕೆಂದು ಏಜೆನ್ಸಿಗಳ ವರ್ತಕರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಬಿತ್ತನೆಗೂ ಮುನ್ನ ಸರಿಯಾದ ಕ್ರಮದಲ್ಲಿ ಬಿಜೋಪಚಾರ ಮಾಡಬೇಕೆಂದು ರೈತರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ವರ್ತಕರ ಹಾಗೂ ರೈತ ಮುಖಂಡರ ಸಭೆ । ಬಿತ್ತನೆ ಸಂದರ್ಭದಲ್ಲಿ ರೈತರು ಎಚ್ಚರಿಕೆ ವಹಿಸಬೇಕು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರೈತರಿಗೆ ಗುಣ್ಣಮಟ್ಟದ ಬಿತ್ತನೆ ಬೀಜ ನೀಡಬೇಕೆಂದು ಏಜೆನ್ಸಿಗಳ ವರ್ತಕರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಬಿತ್ತನೆಗೂ ಮುನ್ನ ಸರಿಯಾದ ಕ್ರಮದಲ್ಲಿ ಬಿಜೋಪಚಾರ ಮಾಡಬೇಕೆಂದು ರೈತರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಬಿತ್ತನೆ ಬೀಜ ಖರೀದಿ ಮಾಡಿದ ತಕ್ಷಣ ಬಿತ್ತನೆ ಮಾಡುವುದು ಸರಿಯಲ್ಲ, ಮುಂದಿನ ದಿನಗಳಲ್ಲಿ ಗಿಡಗಳಿಗೆ ಯಾವುದೇ ರೀತಿ ರೋಗಗಳು ಬರದಂತೆ ಹಾಗೆಯೇ ನೆಲವನ್ನು ಹದಗೊಳಿಸುವ, ಬಿತ್ತನೆ ಮಾಡುವ ಕ್ರಮವನ್ನು ಸರಿಯಾದ ರೀತಿ ಯಲ್ಲಿ ನಿರ್ವಹಣೆ ಮಾಡಿದರೆ ಮಾತ್ರ ಅದು ಸಸಿಯಾಗಿ ಹುಟ್ಟಲು ಸಾಧ್ಯ, ಕೃಷಿ ವಿಜ್ಞಾನಿಗಳು ನೀಡಿರುವ ಈ ಸಲಹೆ ಗಳನ್ನು ರೈತರಿಗೆ ತಿಳಿಸಿಕೊಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವರ್ತಕರು, ಬಿತ್ತನೆ ಬೀಜ ಖರೀದಿ ಸಂದರ್ಭದಲ್ಲಿ ರೈತರಿಗೆ ಬಿಲ್‌ ಕೊಡಬೇಕು, ಯಾವ ಕಂಪನಿಗೆ ಸೇರಿದೆ ಎಂಬ ಲೇಬಲ್‌ ಹಾಕಿರಬೇಕು ಎಂದು ವರ್ತಕರ ಹಾಗೂ ರೈತ ಮುಖಂಡರ ಸಭೆಯಲ್ಲಿ ರೈತರು ಆಗ್ರಹಿಸಿದರು.

ಉತ್ತರ ಭಾರತದ ವಾತಾವರಣಕ್ಕೆ ಹೊಂದಿಕೆಯಾಗುವ ಬಿತ್ತನೆ ಬೀಜವನ್ನು ಕಂಪನಿಗಳು ಸಿದ್ಧಪಡಿಸಿ ಕಳುಹಿಸುತ್ತಿದೆ. ಆದರೆ, ಮಲೆನಾಡಿನ ವಾತಾವರಣವೇ ಬೇರೆಯಾಗಿರುತ್ತದೆ. ಇದು, ಕೂಡ ಬಿತ್ತನೆ ಬೀಜ ಮೊಳಕೆಯಾಗದಿರುವುದಕ್ಕೆ ಕಾರಣ ಇರಬಹುದು ಎಂದು ಏಜೆನ್ಸಿ ಮಾಲೀಕರು ಹೇಳಿದ್ದಾರೆ. ಹಾಗಾಗಿ ಜಮೀನಿನ ಮಣ್ಣು ಪರೀಕ್ಷೆ ಹಾಗೂ ಬಿತ್ತನೆ ಬೀಜ ಬಿತ್ತುವುದರ ಬಗ್ಗೆ ರೈತರಿಗೆ ಕೃಷಿ ವಿಜ್ಞಾನಿಗಳಿಂದ ಮಾಹಿತಿ ನೀಡಲಾಗುವುದು ಎಂದು ಹೇಳಿದರು.--- ಬಾಕ್ಸ್‌ ---

ಕೆಂಪೇಗೌಡರ ಜಯಂತಿ- ಇಂದು, ನಾಳೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಜೂ. 27 ರಂದು ಕೆಂಪೇಗೌಡರ ಜಯಂತಿ ಆಚರಿಸಲಾಗುತ್ತಿದ್ದು, ಅವರ ವ್ಯಕ್ತಿತ್ವ, ಕಾರ್ಯ ಸಾಧನೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. 8ನೇ ತರಗತಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, 9ನೇ ತರಗತಿಯವರಿಗೆ ರಂಗೋಲಿ ಸ್ಪರ್ಧೆ, 10ನೇ ತರಗತಿಯವರಿಗೆ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಜೂ.25 ಮತ್ತು 26 ರಂದು ಸ್ಪರ್ಧೆಗಳು ನಡೆಯಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು. ಪ್ರಥಮ ಬಹುಮಾನ 3 ಸಾವಿರ, ದ್ವಿತೀಯ ಬಹುಮಾನ 2 ಸಾವಿರ ರು., ತೃತೀಯ ಬಹುಮಾನ ಒಂದು ಸಾವಿರ ರು. ನಗದು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ ಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದರು.

ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರತಿ ತಾಲೂಕಿಗೆ ಒಂದು ಲಕ್ಷ ರು. ಬಿಡುಗಡೆಮಾಡಲಾಗಿದೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗ್ಗೆ ಹೆಚ್ಚು ಮಾಹಿತಿ ನೀಡಲು ಈಗಾಗಲೇ ನಿರ್ದೇಶನ ನೀಡಲಾಗಿದೆ. ಜಯಂತಿ ಕುರಿತು ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. ಜೂ. 27 ರಂದು ಬೆಳಿಗ್ಗೆ 11 ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕೆಂಪೇಗೌಡರ ಕುರಿತು ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆಂದು ಹೇಳಿದರು.

ಕೆಂಪೇಗೌಡರು ಮುಂದಾಲೋಚನೆಯಿಂದ ರಾಜಧಾನಿಯನ್ನು ನಿರ್ಮಿಸಿದ್ದಾರೆ. ನೀರಾವರಿ ಮತ್ತು ಪರಿಸರಕ್ಕೂ ಹೆಚ್ಚಿನ ಒತ್ತು ನೀಡಿದ್ದಾರೆ. ನಾವುಗಳು ಸ್ಥಳೀಯವಾಗಿ ಪರಸರಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಿಕೊಳ್ಳಲು ಸಾಧ್ಯ ವಿದೆ. ಕಳೆದ ವರ್ಷ ಬರ ಪರಿಸ್ಥಿತಿಯನ್ನು ನೋಡಿದ್ದೇವೆ. ಹಾಗಾಗಿ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಚಿತ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್ ಇದ್ದರು.24 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸಿ ದಲ್ಜಿತ್‌ಕುಮಾರ್‌ ಇದ್ದರು.