ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ಅಂಕಿತ ಹಾಕದೆ ಕಾಯ್ದೆಯಾಗಿ ಜಾರಿಯಾಗದಿದ್ದರೂ ಪೊಲೀಸ್ ಇಲಾಖೆಯು ಬಿಜೆಪಿ ಮುಖಂಡರಾದ ವಿಕಾಸ್ ಪುತ್ತೂರು ರವರಿಗೆ ನೋಟೀಸ್‌ ನೀಡಿರುವ ಪ್ರಕರಣದ ಹಿಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರ ದುರುಪಯೋಗದ ಕೈವಾಡವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಮಂಗಳೂರು: ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರ ಅಂಕಿತ ಹಾಕದೆ ಕಾಯ್ದೆಯಾಗಿ ಜಾರಿಯಾಗದಿದ್ದರೂ ಪೊಲೀಸ್ ಇಲಾಖೆಯು ಬಿಜೆಪಿ ಮುಖಂಡರಾದ ವಿಕಾಸ್ ಪುತ್ತೂರು ರವರಿಗೆ ನೋಟೀಸ್‌ ನೀಡಿರುವ ಪ್ರಕರಣದ ಹಿಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರ ದುರುಪಯೋಗದ ಕೈವಾಡವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.

ಈ ಘಟನೆಯನ್ನು ಅವಲೋಕಿಸಿದರೆ ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ಪ್ರತಿಬಂಧಕ ಕಾನೂನುನನ್ನು ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ತರಾತುರಿಯಲ್ಲಿ ಮಂಡಿಸಿರುವುದು ಬಿಜೆಪಿ ಮತ್ತು ಹಿಂದು ಮುಖಂಡರನ್ನು ಹಣಿಯಲುಎನ್ನುವುದು ಸ್ಪಷ್ಟವಾಗಿದೆ ಎಂದು ಸತೀಶ್‌ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಉಸ್ತುವಾರಿ ಹೇಳಿಕೆ ಬಾಲಿಶ: ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ರವರು ಕೇಂದ್ರ ಸರ್ಕಾರದ ಕಪಿಮುಷ್ಠಿ‌ಯಲ್ಲಿದ್ದಾರೆ ಎಂಬ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಬಾಲಿಶವಾದುದು ಮತ್ತು ಸಾಂವಿಧಾನಿಕ ಸ್ಥಾನದ ಹುದ್ದೆಗೆ ಮಾಡಿದ ಅಗೌರವವಾಗಿದೆ ಎಂದು ಸತೀಶ್‌ ಕುಂಪಲ ಹೇಳಿದ್ದಾರೆ.

ರಾಜ್ಯಪಾಲರ ಮೂಲಕ ಸುಳ್ಳನ್ನು ಹೇಳಿಸುವ ಕಾಂಗ್ರೆಸ್ ಸರ್ಕಾರದ ತಂತ್ರವು ವಿಫಲವಾಗಿರುವುದರಿಂದ ಕಸಿವಿಸಿಯಾಗಿರುವುದು ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಕೇಂದ್ರದಲ್ಲಿ‌ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ರವರು ಯಾವ ರೀತಿ ತಮ್ಮ ಹುದ್ದೆಯನ್ನು ನಿರ್ವಹಿಸಿದ್ದರು ಎನ್ನುವುದನ್ನು ನೆನಪು ಮಾಡಲಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.