ಸ್ವಚ್ಛತೆ ಅರಿವು ಮೂಡಿಸುವುದು ಎನ್ನೆಸ್ಸೆಸ್ ಶಿಬಿರದ ಉದ್ದೇಶವಾಗಿದೆ-ಎಚ್‌. ಶಿವಾನಂದ

| Published : May 29 2024, 12:55 AM IST

ಸ್ವಚ್ಛತೆ ಅರಿವು ಮೂಡಿಸುವುದು ಎನ್ನೆಸ್ಸೆಸ್ ಶಿಬಿರದ ಉದ್ದೇಶವಾಗಿದೆ-ಎಚ್‌. ಶಿವಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಎನ್ನೆಸ್ಸೆಸ್ ಶಿಬಿರದ ಉದ್ದೇಶ ಸ್ವಚ್ಛತೆ ಜೊತೆಗೆ ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದ್ದು, ಶಿಬಿರಾರ್ಥಿಗಳು ಸಂಕುಚಿತ ಮನೋಭಾವದಿಂದ ಸೇವೆ ಮಾಡಬಾರದು ಎಂದು ಎನ್ನೆಸ್ಸೆಸ್ ಜಿಲ್ಲಾ ನೋಡಲ್ ಅಧಿಕಾರಿ ಎಚ್. ಶಿವಾನಂದ ಹೇಳಿದರು.

ರಾಣಿಬೆನ್ನೂರು: ಎನ್ನೆಸ್ಸೆಸ್ ಶಿಬಿರದ ಉದ್ದೇಶ ಸ್ವಚ್ಛತೆ ಜೊತೆಗೆ ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದ್ದು, ಶಿಬಿರಾರ್ಥಿಗಳು ಸಂಕುಚಿತ ಮನೋಭಾವದಿಂದ ಸೇವೆ ಮಾಡಬಾರದು ಎಂದು ಎನ್ನೆಸ್ಸೆಸ್ ಜಿಲ್ಲಾ ನೋಡಲ್ ಅಧಿಕಾರಿ ಎಚ್. ಶಿವಾನಂದ ಹೇಳಿದರು. ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಸುಣಕಲ್ಲಬಿದರಿ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.

ಎನ್ನೆಸ್ಸೆಸ್ ದೇಶದಲ್ಲಿ ಅತ್ಯಂತ ದೊಡ್ಡ ಯುವ ಪಡೆಯನ್ನು ಹೊಂದಿರುವ ಏಕೈಕ ಯೋಜನೆಯಾಗಿದೆ. ಇದರ ಮೂಲಕ ಸ್ನೇಹ, ಸಹಕಾರ, ಮತ್ತು ನಿಸ್ವಾರ್ಥತೆಯನ್ನು ಧ್ಯೇಯವಾಗಿಸಿಕೊಂಡು ದೇಶ ಪ್ರೇಮ, ಏಕತೆ, ಪ್ರಜಾಪ್ರಭುತ್ವ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತಿಳಿಸಲು ಸಹಕಾರಿಯಾಗಿದೆ ಎಂದರು. ರಾಣಿಬೆನ್ನೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ವೆಂಕಟೇಶ ಮಾತನಾಡಿ, ಹಳ್ಳಿಗಳೇ ನಗರದ ಜೀವಾಳವಾಗಿದ್ದು ಈಗಲೂ ಹಳ್ಳಿಗಳಲ್ಲಿ ಪ್ರೀತಿ, ಅನುಕಂಪ, ಮಮತೆ, ಸಹಕಾರವಿದೆ. ಇವುಗಳನ್ನು ಅರ್ಥಮಾಡಿಕೊಂಡು ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಬೇಕು ಎಂದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸೋಮಪ್ಪ ಅಣ್ಣಪ್ಪಳವರ ಅಧ್ಯಕ್ಷತೆ ವಹಿಸಿದ್ದರು. ಡಾ. ಕಾಂತೇಶ ಗೋಡಿಹಾಳ, ಡಾ. ಹನುಮಂತರಾಜ್, ಲೋಹಿಯ ಕೆ. ಜೆ., ಆರ್. ಮಂಜುನಾಥ, ಎಸ್.ಐ. ಮಲ್ಲಿಗಾರ, ಗ್ರಾಮಸ್ಥರಾದ ರೇಷ್ಮಾ ಕಣದಾಳ, ನೀಲಪ್ಪ ಗೊಣೇರ, ಬಸವರಾಜ ಅಂಗಡಿ, ಸೋಮಪ್ಪ ಕರಡಿ, ಗಣೇಶ ಬಿ.ಎಸ್., ಕರಬಸಪ್ಪ ಡಿ, ಮಂಜುನಾಥ ನಿಟ್ಟೂರ, ವಿರೂಪಾಕ್ಷಪ್ಪ ಕೆ. ಕೆ. ಮತ್ತಿತರರು ಉಪಸ್ಥಿತರಿದ್ದರು.