ಎನ್ಎಸ್ಎಸ್‌ ಶಿಬಿರ ಸಮಾರೋಪ ಸಮಾರಂಭ

| Published : Sep 28 2025, 02:00 AM IST

ಸಾರಾಂಶ

ವಾರ್ಷಿಕ ಶಿಬಿರದ ಮುಕ್ತಾಯ ಸಮಾರಂಭ ಎನ್‌. ಎನ್‌. ಶಂಭುಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸುರು

ಇಲ್ಲಿನ ಬಸವನಹಳ್ಳಿಯ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಕುಶಾಲನಗರದ ವಿವೇಕನಂದ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಶಿಬಿರದ ಮುಕ್ತಾಯ ಸಮಾರಂಭ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್.ಎನ್‌. ಶಂಭುಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ವೇದಿಕೆಯಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸೌಮ್ಯ, ಉಪಾಧ್ಯಕ್ಷರಾದ ಪ್ರವೀಣ್‌, ಸದಸ್ಯೆ ಸುಮಾ, ರಾಷ್ಟ್ರೀಯ ಸೇವಾ ಯೋಜನೆಯ

ಶಿಬಿರಾಧಿಕಾರಿ ಮಂಜೇಶ್‌ ಕೆ.ಆರ್‌, ಕಚೇರಿ ಅಧೀಕ್ಷಕ ಮಹೇಶ್‌ ಅಮಿನ್‌ ಮತ್ತು ಪತ್ರಕರ್ತ ಕುಡೆಕ್ಕಲ್‌ ಗಣೇಶ್‌ ಹಾಜರಿದ್ದರು.

ಈ ಸಂದರ್ಭ ಅಧ್ಯಕ್ಷರಾದ ಶಂಭುಲಿಂಗಪ್ಪ ಮಾತನಾಡಿದರು. ಮಹೇಶ್‌ ವಿವರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕಿ ದಿಪ್ತಿ ಡಿಸೋಜ ನಡೆಸಿದರು. ಮಂಜುಶ್ರೀ ಸ್ವಾಗತಿಸಿದರು. ಉಪನ್ಯಾಸಕ ದೇವೇಂದ್ರ ವಂದಿಸಿದರು.