ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಆದರ್ಶ ಮತ್ತು ಸದ್ಗುಣ ವ್ಯಕ್ತಿಯಾಗಲು ಎನ್.ಎಸ್.ಎಸ್. ಸಹಕಾರಿಯಾಗಿದ್ದು ಎನ್.ಎಸ್.ಎಸ್. ಕೇವಲ ಸ್ವಚ್ಚತೆ ಮಾತ್ರವಲ್ಲ ಶಿಸ್ತು, ಸಂಯಮ, ಸಚ್ಛಾರಿತ್ರ್ಯ. ಸದ್ಗುಣ, ನಾಯಕತ್ವ ಗುಣಗಳನ್ನು ಬೆಳೆಸುವ ಜೊತಗೆ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ದುಡಿಯುವುದಾಗಿದೆ ಎಂದು ಪ್ರಾಧ್ಯಾಪಕ ಡಾ.ಎಲ್.ಎಂ. ವೆಂಕಟೇಶ್ ತಿಳಿಸಿದರು.ನಗರದ ಕೆಎಎಲ್ ಕಾನೂನು ಪದವಿ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆಯು ಸೇವೆಗಷ್ಟೆ ಸೀಮಿತವಾಗದೆ ಉತ್ತರದಾಯಿತ್ವ, ಮಾನವೀಯತೆ, ನಾಯಕತ್ವ ಮೊದಲಾದ ಗುಣಗಳನ್ನು ಶಿಬಿರಾರ್ಥಿಗಳಿಗೆ ಕಲಿಸಿಕೊಡುತ್ತದೆ. ಬದುಕಿನಲ್ಲಿ ಬದಲಾವಣೆಯಾಗಬೇಕೆಂದರೆ ದೊಡ್ಡ ಕೆಲಸ ಬೇಕಿಲ್ಲ ಸಣ್ಣ ಕಾರಣವೂ ಸಾಕು. ಮುಂದಿನ ಜಗತ್ತಿಗೆ ಶಿಕ್ಷಿತ ಯುವಕರು ಮಾತ್ರವಲ್ಲದೆ ಸಂವೇದನಾಶೀಲ ಮನಸಿರುವ ಯುವಕರು ಬೇಕಿರುತ್ತದೆ. ಸ್ವಾರ್ಥ ಪ್ರಪಂಚಕ್ಕಿಂತ ನಿಸ್ವಾರ್ಥ ಪ್ರಪಂಚವು ಬಹಳಷ್ಟು ವಿಶಾಲವಾಗಿರುತ್ತದೆ. ವಿದ್ಯಾರ್ಥಿಗಳಾದ ಸೇವೆಯ ಮೂಲಕ ಇನ್ನೊಬ್ಬರಿಗೆ ಬೆಳಕಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಉಪನ್ಯಾಸಕ ಪ್ರೊ. ಅನುಪ್ರಸಾದ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗಿಯಾಗುವುದರಿಂದ ನಮ್ಮ ಜವಾಬ್ದಾರಿ, ಆತ್ಮವಿಶ್ವಾಸ, ಸಂವಹನ ಗುಣ ಸಮಾಜಸೇವೆ ಮಾಡುವಂತ ಭಾಗ್ಯ ನಮ್ಮದಾಗುತ್ತದೆ. ಹತ್ತಾರು ಸಮುದಾಯಗಳೊಂದಿಗೆ ಗಟ್ಟಿಯಾದ ಸಂಬಂಧಗಳನ್ನು ಬಲಗೊಳಿಸಲು ಎನ್‌ಎಸ್‌ಎಸ್ ಸಹಕಾರಿಯಾಗುತ್ತದೆ. ಶಿಸ್ತು, ಸಮಯ ಪಾಲನೆ, ಸಹಕಾರ ಮನೋಭಾವ, ಕಡ್ಡಾಯ ಹಾಜರಾತಿ ಮೊದಲಾದ ವಿಚಾರಗಳನ್ನು ಬದುಕಿಗೆ ಅಳವಡಿಸಿಕೊಳ್ಳಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಪ್ರಸನ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳಲ್ಲಿ ಹಾಗೂ ತರಬೇತಿ ಶಿಬಿರಗಳಲ್ಲಿ ಭಾಗಿಯಾಗುವುದರಿಂದ ಸದೃಢವಾದ ಇಚ್ಛಾಶಕ್ತಿಯನ್ನು, ಮನೋಜ್ ಧೈರ್ಯವನ್ನು ಬೆಳೆಸಿಕೊಳ್ಳಬಹುದು ಎಂದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಕೆಂಪರಾಜು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))