ಸಾರಾಂಶ
NSS is helpful for all-round development of students
ಸಿಂಧನೂರು: ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸುವುದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅಭಿಪ್ರಾಯಪಟ್ಟರು. ತಾಲೂಕಿನ ದಿದ್ದಗಿ ಗ್ರಾಮದಲ್ಲಿ ಅನಿಕೇತನ ಪದವಿ ಕಾಲೇಜಿನಿಂದ ಹಮ್ಮಿಕೊಂಡಿದ್ದ ಎನ್.ಎಸ್.ಎಸ್. ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ನಾಡಿನ ಭವಿಷ್ಯದ ನಾಗರಿಕರಾಗುವುದರಿಂದ ಅವರಲ್ಲಿ ನಾಯಕತ್ವದ ಗುಣ, ಸಂಸ್ಕೃತಿ ಕುರಿತಾದ ತಿಳಿವಳಿಕೆ, ಪರಸ್ಪರ ಹೊಂದಾಣಿಕೆ ಸ್ವಭಾವ ಮತ್ತು ಸಮಾಜದಲ್ಲಿ ಬಾಳಬೇಕಾದ ವಿಧಾನವನ್ನು ಎನ್.ಎಸ್.ಎಸ್. ನಲ್ಲಿ ಕಲಿಯುತ್ತಾರೆ ಎಂದರು.
ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ತಿಮ್ಮಣ್ಣ ರಾಮತ್ನಾಳ ಮಾತನಾಡಿದರು. ರಾಮತ್ನಾಳ ಗ್ರಾಪಂ ಉಪಾಧ್ಯಕ್ಷ ಮೌನೇಶ, ಸದಸ್ಯರು, ಶಾಲೆ ಶಿಕ್ಷಕರು, ಆಡಳಿತ ಮಂಡಳಿಯವರು, ಗ್ರಾಮಸ್ಥರು ಇದ್ದರು.-----