ಸಾರಾಂಶ
ಗಂಗಾವತಿ: ಇಲ್ಲಿಯ ಬೇತೆಲ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು.ಮುಖ್ಯಅತಿಥಿಗಳಾಗಿ ಆಗಮಿಸಿದ ರಾ.ಸೇ.ಯೋ. ಜಿಲ್ಲಾ ನೋಡೆಲ್ ಅಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಾಗರಾಜ ಹೀರಾ ಭಾಗವಹಿಸಿ ಮಾತನಾಡಿ, ಎನ್ಎಸ್ಎಸ್ ಎಂದರೆ ಶ್ರದ್ಧೆ, ಸ್ವಚ್ಛತೆ, ಸೇವೆಯಾಗಿದೆ. ಅಹಂಕಾರವನ್ನು ಕಿತ್ತೊಗೆದು ಮನುಷ್ಯತ್ವ ಬೆಳೆಸುವುದು ಎನ್ಎಸ್ಎಸ್ ಶಿಬಿರದ ಉದ್ದೇಶವಾಗಿದ ಎಂದರು.ಸ.ಪ್ರೌ.ಶಾಲೆ ಹಿರೇಜಂತಕಲ್ ಶಾಲೆಯ ಮುಖೋಪಾದ್ಯಯ ವಿ.ವಿ. ಗೊಂಡಬಾಳ ಮಾತನಾಡಿ, ಏಕಾಗ್ರತೆಯಿಂದ ಯಶಸ್ಸು ಸಾಧ್ಯ. ಪ್ರಯತ್ನವೆಂಬ ತಾಯಿ ಅವಕಾಶವೆಂಬ ತಂದೆಗೆ ಜನಿಸಿದ ಮಗುವೇ ಅದೃಷ್ಟ ಎಂದು ತಿಳಿಸಿದರು. ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡುವಂತೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಡಳಿತ ಮಂಡಳಿಯ ಸದಸ್ಯೆ ಹೇಮಾ ಸುಧಾಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ರಾ.ಸೇ.ಯೋ ಶಿಬಿರದ ದಿನಗಳಲ್ಲಿ ಮಾತ್ರ ಸೀಮಿತವಾಗದೇ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಮಹೋದಯರು ಮತ್ತು ಆಡಳಿತ ಮಂಡಳಿಯ ಕಾರ್ಯದರ್ಶಿ ಮತ್ತು ಸದಸ್ಯರು ಎನ್ ಎಸ್ ಎಸ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿದರು.ಎನ್ಎಸ್ಎಸ್ ಅಧಿಕಾರಿ ಹನುಮಂತಪ್ಪ ಶಿಬಿರದ ವರದಿ ವಾಚಿಸಿದರು. 7 ದಿನಗಳ ಕಾರ್ಯಕ್ರಮದ ಕುರಿತು ವಿವರಿಸಿದರು.ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಬಿಂಗಿ ವೆಂಕಟೇಶ, ಗೀತಾ ಅಂಗಡಿ, ಶ್ರೀದೇವಿ ತಟ್ಟಿ, ಸುಜಾತ ರಾಜು, ಶಿಲ್ಪಾ ಆರ್, ಸೈಯದಾ ಸಲೀಮಾ, ಪ್ರತಿಭಾಶ್ರೀ ಹಿರೇಮಠ, ವಿರುಪಾಕ್ಷಪ್ಪ ಮತ್ತು ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಬಿರಾರ್ಥಿ ರಾಜೇಶ್ವರಿ ನಿರೂಪಿಸಿದರು. ರೇಣುಕಾ ಸ್ವಾಗತಿಸಿದರು. ವಿನಾಯಕ ವಂದಿಸಿದರು.