ಸಾರಾಂಶ
ಇಳಕಲ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ನಗರದ ಅನಾಥ ವೃದ್ಧರ ಸೇವಾ ಸಂಸ್ಥೆ ಆದ ಅಮ್ಮಾ ಸೇವಾ ಸಂಸ್ಥೆಯ ಆವರಣ ಹಾಗೂ ಅವರ ಮೂರ್ತಿಯನ್ನು ಸ್ವಚ್ಛ ಮಾಡಿ ಅನಾಥರ ಸೇವೆ ಮಾಡಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ನಗರದ ಅನಾಥ ವೃದ್ಧರ ಸೇವಾ ಸಂಸ್ಥೆ ಆದ ಅಮ್ಮಾ ಸೇವಾ ಸಂಸ್ಥೆಯ ಆವರಣ ಹಾಗೂ ಅವರ ಮೂರ್ತಿಯನ್ನು ಸ್ವಚ್ಛ ಮಾಡಿ ಅನಾಥರ ಸೇವೆ ಮಾಡಿದರು.ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಶ್ರೀದೇವಿ ಕಡಿವಾಲ, ಕಾರ್ಯಕಾರಿ ಸಮಿತಿಯ ನಿರ್ದೇಶಕರಾದ ಮಲ್ಲಿಕಾರ್ಜುನ ಪಾಟೀಲ ಅವರನ್ನು ಭೇಟಿ ಮಾಡಿ ಅವರ ಸಹಕಾರದೊಂದಿಗೆ ಮಕ್ಕಳು ವೃದ್ಧರು ವಾಸಿಸುವ ಕೋಣೆ, ಊಟದ ಕೋಣೆ, ಹೋರಾಂಗಣ ಮತ್ತು ಒಳಾಂಗಣ ಸ್ವಚ್ಛಗೊಳಿಸಿದರು. ಸುಮಾರು ೨೮ ವೃದ್ಧರಿಗೆ ಊಟ ಬಡಿಸಿ ಬಳಿಕ ತಾವೂ ಊಟ ಮಾಡಿ ವೃದ್ಧರೊಂದಿಗೆ ಕುಶಲೋಪರಿ ವಿಚಾರಿಸಿ ಕೋಣೆಗೆ ವಿಶ್ರಾಂತಿಗೆ ಕಳಿಸಿದರು.
ಕಾಲೇಜಿನ ವತಿಯಿಂದ ಎರಡು ಚೀಲ ಗೋದಿಯನ್ನು ವೃದ್ಧಾಶ್ರಮಕ್ಕೆ ದೇಣಿಗೆಯಾಗಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು ಕೊಟ್ಟರು. ಅಮ್ಮಾ ಸೇವಾ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯರಾದ ವೆಂಕಟೇಶ ಸಾಕಾ, ಮಲ್ಲಿಕಾರ್ಜುನ ಪಾಟೀಲ ಶಿಬಿರಾರ್ಥಿಗಳ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು.ಪ್ರಾಂಶುಪಾಲರಾದ ಆರೀಫ್ ರಾಜ ಮತ್ತು ಪ್ರಾಧ್ಯಾಪಕರಾದ ಗಾಯತ್ರಿ ದಾದ್ಮಿ , ಜ್ಯೋತಿ ಇಂಜಗನೇರಿ, ಅಜೀಂ ಜಮಾದಾರ, ಮಾಹಾಂತೇಶ ಜಿವಣ್ಣನವರ, ಜಂಬಯ್ಯ ನಾಯಕ ಪಾಲ್ಗೊಂಡಿದ್ದರು. ಶ್ರೀದೇವಿ ಕಡಿವಾಲ ವಂದಿಸಿದರು.