ಬ್ರಹ್ಮಶ್ರಿ ನಾರಾಯಣಗುರು ಹಾಗೂ ನುಲಿಯ ಚಂದಯ್ಯನವರ ಜಯಂತಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆ ಹೋಗಲಾಡಿಸಲು ತಮ್ಮ ಜೀವನವನ್ನೆ ಮುಡಿಪಾಗಿಟ್ಟದ್ದ ಮಹತ್ಮಾ, ನುಲುಗೆ ಚಂದಯ್ಯ ೧೨ ನೇ ಶತಮಾನದಲ್ಲಿ ಸಾಮಾಜಿಕ ಹರಿಕಾರ ಬಸವಣ್ಣನವರ ಸಹವರ್ತಿಯಾಗಿ ತಮ್ಮ ನೇಯ್ಗೆಯಲ್ಲಿ ಬರುತ್ತಿದ್ದ ಸಣ್ಣ ಮೊತ್ತದಲ್ಲಿ ನಿರ್ಗತಿಕರಿಗೆ ಅನ್ನದಾಸೋಹ ಮಾಡುವ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದರೆ, ಮೇಲ್ವರ್ಗದ ಜಾತಿ ವ್ಯವಸ್ಥೆಯನ್ನು ಖಂಡಿಸಿ ಹಿಂದುಳಿದವರಿಗೆ ತಮ್ಮದೆ ಅಸ್ತಿತ್ವ ಕಟ್ಟಿಕೊಟ್ಟ ಬ್ರಹ್ಮಗುರು ನಾರಾಯಣಗುರುಗಳು ಭೂಮಿ ಇರುವವರಗೆ ಇವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.
ಸಕಲೇಶಪುರ: ಸಮಾನತೆ ಕಲ್ಪಿಸಲು ತಮ್ಮ ಜೀವನವನ್ನೆ ಮುಡುಪಾಗಿಟ್ಟ ಮಹತ್ಮಾರು ಬ್ರಹ್ಮಶ್ರೀ ನಾರಾಯಣಗುರು ಹಾಗೂ ನುಲಿಯ ಚಂದಯ್ಯ ನವರು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಶುಕ್ರವಾರ ಪಟ್ಟಣದ ತಾಲೂಕು ಪಂಚಾಯತ್ ಸಂಭಾಗಣದಲ್ಲಿ ತಾಲೂಕು ನಾಡ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಬ್ರಹ್ಮಶ್ರಿ ನಾರಾಯಣಗುರು ಹಾಗೂ ನುಲಿಯ ಚಂದಯ್ಯನವರ ಜಯಂತಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆ ಹೋಗಲಾಡಿಸಲು ತಮ್ಮ ಜೀವನವನ್ನೆ ಮುಡಿಪಾಗಿಟ್ಟದ್ದ ಮಹತ್ಮಾ, ನುಲುಗೆ ಚಂದಯ್ಯ ೧೨ ನೇ ಶತಮಾನದಲ್ಲಿ ಸಾಮಾಜಿಕ ಹರಿಕಾರ ಬಸವಣ್ಣನವರ ಸಹವರ್ತಿಯಾಗಿ ತಮ್ಮ ನೇಯ್ಗೆಯಲ್ಲಿ ಬರುತ್ತಿದ್ದ ಸಣ್ಣ ಮೊತ್ತದಲ್ಲಿ ನಿರ್ಗತಿಕರಿಗೆ ಅನ್ನದಾಸೋಹ ಮಾಡುವ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದರೆ, ಮೇಲ್ವರ್ಗದ ಜಾತಿ ವ್ಯವಸ್ಥೆಯನ್ನು ಖಂಡಿಸಿ ಹಿಂದುಳಿದವರಿಗೆ ತಮ್ಮದೆ ಅಸ್ತಿತ್ವ ಕಟ್ಟಿಕೊಟ್ಟ ಬ್ರಹ್ಮಗುರು ನಾರಾಯಣಗುರುಗಳು ಭೂಮಿ ಇರುವವರಗೆ ಇವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರಾಂಶುಪಾಲ್ ರಮೇಶ್ ಮಾತನಾಡಿ, ಇಂದಿನ ಯುವ ಜನತೆಯ ಮನಸ್ಥಿತಿಯನ್ನು ಮಹತ್ಮಾರು ಅಂದೇ ತಮ್ಮ ವಚನಗಳಲ್ಲಿ ವಿವರಿಸಿದ್ದರೆ, ಇಂದು ಸಂಪತ್ತಿದೆ, ಸಂಬಂಧಗಳು ದೂರವಾಗುತ್ತಿವೆ. ದೇಶ ಮುಂದುವರಿಯುತ್ತಿದೆ ಆದರೆ, ಸಮಾಜ ಹಿಂದುಳಿಯುತ್ತಿದೆ ಇಂತಹ ಸ್ಥಿತಿಗೆ ನಾವು ಬರಲು ಕಾರಣವೇ ಮೌಲ್ಯಯುತ ಶಿಕ್ಷಣದ ಕೊರತೆ. ದರ್ಶನಿಕರ ಬಧುಕಿನ ಕಥೆಗಳನ್ನು ಹಿರಿಯರು ಮನೆಯಲ್ಲಿ ಹೇಳಿಕೊಡುವ ಕೆಲಸ ಮಾಡುವ ಮೂಲಕ ಸನಾತನ ಸಂಸ್ಕೃತಿಯ ಪರಂಪರೆಯನ್ನು ನಾವು ಕಟ್ಟ ಬೇಕಿದೆ ಎಂದರು. ವೇದಿಕೆಯಲ್ಲಿ ನಾರಯಣಗುರು ಸೇವಾ ಸಂಘದ ಅಧ್ಯಕ್ಷ ಭಾಸ್ಕರ್, ಕಮ್ಮಾರ ಸಮಾಜದ ಅಧ್ಯಕ್ಷ ಮೋಹನ್ ಕುಮಾರ್, ಮುಖ್ಯಾಧಿಕಾರಿ ಮಹೇಶ್ವರಪ್ಪ ಮುಂತಾದವರಿದ್ದರು.