ಪ್ರಕಟಿತ ಪುಸ್ತಕಗಳ ಸಂಖ್ಯೆ ಸಾಹಿತಿ ಗುಣಮಟ್ಟದ ಮಾನದಂಡವಲ್ಲ: ರಾಮಕೃಷ್ಣ ಗುಂದಿ

| Published : Feb 07 2024, 01:51 AM IST

ಪ್ರಕಟಿತ ಪುಸ್ತಕಗಳ ಸಂಖ್ಯೆ ಸಾಹಿತಿ ಗುಣಮಟ್ಟದ ಮಾನದಂಡವಲ್ಲ: ರಾಮಕೃಷ್ಣ ಗುಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕಟಿತ ಪುಸ್ತಕಗಳ ಸಂಖ್ಯೆ ಒಬ್ಬ ಸಾಹಿತಿಯ ಗುಣಮಟ್ಟದ ಮಾನದಂಡವಲ್ಲ. ಅವರು ರಚಿಸಿದ ಕೃತಿಗಳು ಎಷ್ಟು ಗಟ್ಟಿ ಕಾಳು ಹಾಗೂ ಜನಮಾನಸಕ್ಕೆ ತಲುಪಿದೆ ಎಂಬುದು ಮುಖ್ಯವಾಗುತ್ತದೆ.

ಅಂಕೋಲಾ:

ಪ್ರಕಟಿತ ಪುಸ್ತಕಗಳ ಸಂಖ್ಯೆ ಒಬ್ಬ ಸಾಹಿತಿಯ ಗುಣಮಟ್ಟದ ಮಾನದಂಡವಲ್ಲ. ಅವರು ರಚಿಸಿದ ಕೃತಿಗಳು ಎಷ್ಟು ಗಟ್ಟಿ ಕಾಳು ಹಾಗೂ ಜನಮಾನಸಕ್ಕೆ ತಲುಪಿದೆ ಎಂಬುದು ಮುಖ್ಯವಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ರಾಮಕೃಷ್ಣ ಗುಂದಿ ಹೇಳಿದರು. ಅವರು ಕನ್ನಡ ಚಂದ್ರಮ, ಅಂಕೋಲೆಯ ನವಕರ್ನಾಟಕ ಸಂಘ ಹಾಗೂ ಕುಮಟಾ ರಾಜ್ಯ ಬೋಧಕರ ಸಂಘಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಅಂಕೋಲಾ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ, ಸಾಹಿತಿ ನಾಗೇಶದೇವ ಅಂಕೋಲೆಕರ ಅವರ ಕೃತಿಗಳ ಅವಲೋಕನ ಹಾಗೂ ಚಿಂತನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶಯ ಭಾಷಣ ಭಾಷಣ ಮಾಡಿದರು.ಅಂಕೋಲಾ ಶಹರದ ಶ್ರೀರಾಮ ಸ್ಟಡಿ ಸರ್ಕಲ್‌ನಲ್ಲಿ ಜರುಗಿದ ಚೇತೋಹಾರಿ ಕಾರ್ಯಕ್ರಮದಲ್ಲಿ ಅಂಕೋಲೆಕರವರ ‘ಲೆಕ್ಕವಿಲ್ಲದವರು’, ‘ಝೆನ್‌ಧ್ವನಿ’, ‘ಮನದ ಮಾದೇಸ’, ‘ಮೂಕಂ ಕರೋತಿವಾಚಾಲಂ’ ಹಾಗೂ ‘ನಿರ್ನಾಮಿಕರು’ ಕೃತಿಯ ಕುರಿತು ಮಾಣೇಶ್ವರ ನಾಯಕ, ಗಣಪತಿ ಕೊಂಡದಕುಳಿ, ವಿಷ್ಣು ಪಟಗಾರ, ಮಂಜುನಾಥ ಇಟಗಿ ಹಾಗೂ ಮಹಾಂತೇಶ ರೇವಡಿ ಉಪನ್ಯಾಸ ನೀಡಿದರು.ಅಂಕೋಲೆಕರ ಮೃದು ಭಾಷಿಗಳು. ಅವರ ಸಾಹಿತ್ಯದಲ್ಲಿ ಮಾರ್ದವತೆ ತುಂಬಿದೆ. ದೃಷ್ಟಿಯಿಂದ ಸಮಷ್ಟಿ ವರೆಗೆ ಅನೇಕ ಸಂಗತಿಗಳು ಅವರ ಸಾಹಿತ್ಯದ ಮೂಲ ದ್ರವ್ಯಗಳಾಗಿವೆ ಎಂದು ಉಪನ್ಯಾಸಕರ ಅಭಿಪ್ರಾಯ ವ್ಯಕ್ತಪಡಿಸಿದರು.ಸಾಹಿತಿ ಪ್ರೊ. ಅಂಕೋಲೆಕರ ಮಾತನಾಡಿ, ನನ್ನ ಕೃತಿಗಳ ಅವಲೋಕನ ನನಗೆ ಸಂತಸ ತಂದಿದ್ದು, ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೃತಿಗಳನ್ನು ಅರ್ಪಿಸಲು ಪ್ರೇರಣೆಯಾಗಿದೆ ಎಂದರು.ಕನ್ನಡ ಚಂದ್ರಮದ ಮುಖ್ಯಸ್ಥ ಜಗದೀಶ ನಾಯಕ ಹೊಸ್ಕೇರಿ ಅಧ್ಯಕ್ಷತೆ ವಹಿಸಿದ್ದರು. ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ ಪ್ರೊ. ಮೋಹನ ಹಬ್ಬು ‘ಅಂಕೋಲೆಕರವರ ಬದುಕು ಬರಹ’ದ ಕುರಿತು ಮಾತನಾಡಿದರು. ಹರೀಶ ನಾಯಕ ಬೇಲೆಕೇರಿ ಕೃತಿಗಳನ್ನು ಅವಲೋಕನ ಮಾಡಿದರು. ಅಂಕೋಲಾ ನವ ಕರ್ನಾಟಕ ಸಂಘದ ಅಧ್ಯಕ್ಷ ವಿ.ಎಸ್. ನಾಯಕ ಕಣಗಿಲ್ ಮಾತನಾಡಿದರು. ನವ ಕರ್ನಾಟಕ ಸಂಘದ ಮಂಜುನಾಥ ಬರ್ಗಿ ಸ್ವಾಗತಿಸಿದರು.