ಸಾರಾಂಶ
ಹಿಂದೆ ನೀಟ್ ಪರೀಕ್ಷೆ ಬರೆಯಲು ಚಿಕ್ಕಬಳ್ಳಾಪುರದಲ್ಲಿಯೇ ನೀಟ್ ಪರೀಕ್ಷಾ ಕೇಂದ್ರ ತೆರೆದು ಅನುಕೂಲ ಡಾ.ಕೆ.ಸುಧಾಕರ್ ಅನುಕೂಲ ಮಾಡಿಕೊಟ್ಟಿದ್ದರು. ಈಗ ಪರೀಕ್ಷಾ ಕೇಂದ್ರ ರದ್ದಾಗಿದೆ. ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋಗಬೇಕಾದ ದುಸ್ಥಿತಿ ಉಂಟಾಗಿದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
20 ನೀಟ್ ಪರೀಕ್ಷಾ ಕೇಂದ್ರಗಳಿದ್ದ ರಾಜ್ಯದಲ್ಲಿ ಇಂದು 10 ನೀಟ್ ಪರೀಕ್ಷಾ ಕೇಂದ್ರಗಳಿಗೆ ಇಳಿದಿದೆ ಮತ್ತು ಚಿಕ್ಕಬಳ್ಳಾಪುರದಲ್ಲಿದ್ದ ನೀಟ್ ಪರೀಕ್ಷಾ ಕೇಂದ್ರ ರದ್ದಾಗಿದೆ ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.28ನೇ ದತ್ತಿ ದಿನಾಚರಣೆ 109ನೇ ಸಿವಿವಿ ರವರ ಜಯಂತಿ ಅಂಗವಾಗಿ ಶುಕ್ರವಾರ ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಕೆವಿ ಟ್ರಸ್ಟ್ ಮತ್ತು ಪಂಚಗಿರಿ ವಿಧ್ಯಾ ಸಂಸ್ಥೆಗಳ ಸಿಬ್ಬಂದಿಗೆ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕಾ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ತಾವು ಶಾಸಕ ಮತ್ತು ಸಚಿವನಾಗಿದ್ದಾಗ ನೀಟ್ ಪರೀಕ್ಷೆ ಬರೆಯಲು ನಮ್ಮಜಿಲ್ಲೆಯಲ್ಲಿಯೇ ನೀಟ್ ಪರೀಕ್ಷಾ ಪರೀಕ್ಷಾ ಕೇಂದ್ರಗಳನ್ನು ತೆರೆದು ಅನುಕೂಲ ಮಾಡಿಕೊಟ್ಟಿದ್ದೆ. ಆದರೆ ಈಗ ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋಗಬೇಕಾದ ದುಸ್ಥಿತಿ ಉಂಟಾಗಿದೆ. ಈಗಲೂ ಸಾಧ್ಯವಾದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಳಿ ಚರ್ಚಿಸಿ, ನೀಟ್ ಪರೀಕ್ಷಾ ಕೇಂದ್ರ ಇಲ್ಲಿಯೆ ನಡೆಸಲು ಅವಕಾಶವಿದ್ದರೆ ತಾವೂ ಪ್ರಯತ್ನಿಸುವುದಾಗಿ ತಿಳಿಸಿದರು.
ಎದೆಗೆ ಬಿದ್ದ ಅಕ್ಷರ. ಭೂಮಿಗೆ ಹಾಕಿದ ಬೀಜ ಎಂದಾದರೊಂದು ದಿನ ಫಲ ನೀಡುತ್ತದೆ ಎನ್ನುವುದಕ್ಕೆ ಶಿಕ್ಷಣ ಪ್ರೇಮಿ ಮಾಜಿ ಶಾಸಕ ಸಿ.ವಿ.ವೆಂಕಟರಾಯಪ್ಪನವರೆ ಸಾಕ್ಷಿಯಾಗಿದ್ದು ಅವರು ಪ್ರಾರಂಭಿಸಿದ ಶಿಕ್ಷಣ ಸಂಸ್ಥೆಗಳು ಇಂದು ಹೆಮ್ಮರಬಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಮತ್ತು ಚಿಕ್ಕಬಳ್ಳಾಪುರಕ್ಕೆ ಶಿಕ್ಷಣ ಕಾಶಿ ಎಂದು ಹೆಸರು ಬರಲು ಕಾರಣರಾಗಿದ್ದಾರೆ ಎಂದರು.ಕೆವಿ ಟ್ರಸ್ಟ್ ಮತ್ತು ಪಂಚಗಿರಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್‌ಕಿರಣ್ ಮಾತನಾಡಿ, ದತ್ತಿ ದಿನಾಚರಣೆ ಅಂಗವಾಗಿ ಪ್ರತಿ ವರ್ಷದಂತೆ ಜುಲೈ 24ರಂದು ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಹಾಗೆಯೆ ಕ್ಯಾಂಪಾಸ್ ನ ಎಲ್ಲ ವಿದ್ಯಾಸಂಸ್ಥೆಗಳ ಸಿಬ್ಬಂದಿ ಹಾಗು ವಿದ್ಯಾರ್ಥಿಗಳಿಗೂ ಕ್ರೀಡಾ ಹಾಗು ಸಾಂಸ್ಕೃತಿಕ ಸ್ಪರ್ದೆಗಳನ್ನ ಆಯೋಜಿಸಲಾಗಿದೆ ಎಂದರು.
ಇದೇ ವೇಳೆ ಟ್ರಸ್ಟ್ ಕಚೇರಿಯನ್ನು ಸಂಸದ ಡಾ.ಕೆ.ಸುಧಾಕರ್ ಉಧ್ಘಾಟಿಸಿದರು. ಈ ವೇಳೆ ಟ್ರಸ್ಟಿಗಳಾದ ಬಿ.ಮುನಿಯಪ್ಪ, ಡಾ.ಸಾಯಿಪ್ರಭು, ವಿಜಯಲಕ್ಷ್ಮಿ,ಇಮ್ರಾನ್ ಖಾನ್, ಸುಜಾತ ನವೀನ್ ಕಿರಣ್,ಶ್ರೀನಿವಾಸ್, ಟ್ರಸ್ಟ್ ವ್ಯೆವಸ್ಥಾಪಕ ಕೆ.ಆರ್. ಲಕ್ಷ್ಮಣಸ್ವಾಮಿ, ಸಾಂಸ್ಕೃತಿಕ ಚಟುವಟಿಕೆಗಳ ಅಧ್ಯಕ್ಷ ಮಹತೇಶ್ ಕಮಟಾಪುರ, ಮತ್ತಿತರರು ಇದ್ದರು.