ನರ್ಸರಿ ಮಾಲೀಕರು, ರೈತರ ಸಭೆ

| Published : Jun 25 2024, 12:32 AM IST

ಸಾರಾಂಶ

ಒಂದು ಮೆಣಸಿನ ಸಸಿ ಪ್ರಾಯಕ್ಕೆ (ನಾಟಿ ಮಾಡುವ ಹಂತಕ್ಕೆ) ಬರಬೇಕಾದರೆ ೪೦-೪೫ ದಿನಗಳು ಬೇಕು.

ಕುರುಗೋಡು: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಲಾಗಿದ್ದ ನರ್ಸರಿ ಮಾಲೀಕರು ಮತ್ತು ರೈತರ ಸಭೆ ಜರುಗಿತು.

ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್, ಜಿಲ್ಲಾ ಕಾರ್ಯದರ್ಶಿ ಗಾಳಿ ಬಸವರಾಜ ಮಾತನಾಡಿ, ಒಂದು ಮೆಣಸಿನ ಸಸಿ ಪ್ರಾಯಕ್ಕೆ (ನಾಟಿ ಮಾಡುವ ಹಂತಕ್ಕೆ) ಬರಬೇಕಾದರೆ ೪೦-೪೫ ದಿನಗಳು ಬೇಕು. ನರ್ಸರಿ ಮಾಲೀಕರು ಬೆಡ್ ಮೇಲೆ ಪ್ಲಾಸ್ಟಿಕ್ ಪೇಪರ್ ಹಾಕಿದರೆ ಸಸಿ ಬೇಗ ಬೆಳೆಯುವುದಿಲ್ಲ ಎಂದು ಮಣ್ಣಿನ ಬೆಡ್ ಮೇಲೆ ಹಾಕಿ ಕೇವಲ ೨೮ ದಿನಗಳಲ್ಲಿ ರೈತರಿಗೆ ಒತ್ತಡ ಹಾಕಿ ಸಸಿ ಕಿತ್ತು ಕಳುಹಿಸುತ್ತೀರಿ. ಒಂದು ಎಕರೆ ಜಾಗದಲ್ಲಿ ೧೮-೨೦ ಎಕರೆಗಾಗುವಷ್ಟು ಮೆಣಸಿನ ಸಸಿಗಳನ್ನು ಬೆಳೆಸುತ್ತೀರಿ ಹಾಗೂ ನಿರಂತರ ಮೂರು ಹಂತದ ಸಸಿಗಳನ್ನು ಬೆಳೆಸುತ್ತೀರಿ ಒಂದು ಹಂತದ ಸಸಿಗೆ ಕನಿಷ್ಠ ೧೨-೧೪ ಲಕ್ಷದವರೆಗೆ ಆದಾಯ ಬರುತ್ತದೆ ಎಂದರು.

ಮೂರು ಹಂತದಲ್ಲಿ ಮೆಣಸಿನ ಸಸಿ ಮಾರಾಟ ಮಾಡಿ ₹೩೫ ರಿಂದ ₹೪೦ ಲಕ್ಷ ಬೆಳೆಯನ್ನು ಒಂದು ಎಕರೆಯಲ್ಲಿ ಬೆಳೆಯಬೇಕಾದರೆ ತಾವು ಹೇಳಿದಂತೆ ಒಂದು ಎಕರೆಗೆ ಸಸಿ ಬೆಳೆಸಲು ಒಂದು ವರ್ಷದ ಖರ್ಚು ಮೂರೂವರೆ ಲಕ್ಷ ರುಪಾಯಿ ಆಗುತ್ತದೆ. ನಷ್ಟ ಹೇಗಾಗುತ್ತದೆ? ನೆರೆಯಆಂದ್ರ ಪ್ರದೇಶದಲ್ಲಿಅನ್ ಸಿಜನ್ನಲ್ಲಿ ೨೫ ಪೈಸೆ ಸೀಜನ್ ನಲ್ಲಿ ೩೦ ಪೈಸೆಗೆ ಸಸಿ ಬೆಳೆಸಿ ಕೊಡುತ್ತಾರೆ.

ಉಪ ತಹಸೀಲ್ದಾರ್ ವಿಜಯಕುಮಾರ್, ತಾಲೂಕು ಸಮಿತಿ ಅಧ್ಯಕ್ಷ ಟಿ.ಅಮೀನಸಾಬ್, ಸಿಐಟಿಯು ಮುಖಂಡ ಎನ್.ಸೋಮಪ್ಪ, ಮೇಟಿಕಲ್ಗಡೆಪ, ಜೆ.ಗಂಗಣ್ಣ, ಎನ್.ಹುಲೆಪ್ಪ, ಕೆಂಚಪ್ಪ, ಮುರುಣಿಕಲ್ಗುಡೆಪ್ಪ, ಅಮೃತಾಪುರ, ಹನುಮಂತಪ್ಪ, ಬೈಲೂರುಕಲ್ಗುಡೆಪ್ಪ, ಸುಬ್ರಹ್ಮಣ್ಯಂ, ಮೇಲ್ಸೀಮೆ ನಾಗರಾಜ್, ಪಶುಪತಿಗೌಡ ಹಾಗೂ ನೂರಾರು ರೈತರು ಭಾಗವಹಿಸಿದ್ದರು.