ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದಾದಿಯರೂ ರೋಗಿಗಳ ಕಾಯಿಲೆ ವಾಸಿ ಮಾಡುವಲ್ಲಿ, ಮಾನಸಿಕ ಧೈರ್ಯ ತುಂಬುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಅಲೈ ಕೆ.ಟಿ.ಹನುಮಂತು ಅವರು ಹೇಳಿದರು.ತಾಲೂಕಿನ ಸಂತೇಬಾಚಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗೆಳೆಯರ ಬಳಗ ಹಾಗೂ ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ವತಿಯಿಂದ ಅಂತಾರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾದಿಯರು ನೀಡುವ ಸೇವೆ ನೋಡಿದರೆ ಎಂತವರಿಗೂ ವೃತ್ತಿ ಮೇಲೆ ಗೌರವ ಮೂಡುತ್ತದೆ. ರೋಗಿಗಳಿಗೆ ತಾಯಿಯಂತೆ ಧೈರ್ಯ ತುಂಬುತ್ತಾರೆ. ಅವರ ನಿಸ್ವಾರ್ಥ ಸೇವೆ ಸ್ಮರಿಸುವ ದಿನವಾಗಿದೆ. ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದರೆ, ವಾರಗಳ ಕಾಲ ದಾದಿಯರು ರೋಗಿಗಳನ್ನ ಹಾರೈಕೆ ಮಾಡುತ್ತಾರೆ. ಅವರಿಗೆ ಗೌರವ ಸಲ್ಲಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.ಇದೇ ವೇಳೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂತೇಬಾಚಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ಮಧುಸೂದನ್, ವಿಎಸ್ಎಸ್ ಎನ್ ಅಧ್ಯಕ್ಷ ಬಿ. ಮೋಹನ್, ಸಂಸ್ಥೆ ಪದಾಧಿಕಾರಿಗಳಾದ ಕೆ.ಆರ್.ಶಶಿಧರ್, ಎಸ್. ಎಂ.ಲೋಕೇಶ್, ಸಂಪತ್ ಕುಮಾರ್, ಗೆಳೆಯರ ಬಳಗದ ಅಧ್ಯಕ್ಷ ಜಯಕುಮಾರ್, ಎಸ್.ಎಚ್.ಕೃಷ್ಣ, ಎಸ್. ಬಿ.ಸೋಮಶೇಖರ್, ಎಸ್.ಎನ್ ಕೃಷ್ಣ, ನಿವೃತ್ತ ಎಂಜಿನಿಯರ್ ಸೋಮೇಶ್ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ದಾದಿಯರು ಇದ್ದರು.
ಆಪರೇಷನ್ ಸಿಂದೂರ ಕುರಿತ ಅಭಿಪ್ರಾಯಗಳುಪಾಕಿಸ್ತಾನ ಭಾರತದ ಶಾಂತಿ ಕದಡಲು ಮುಂದಾಗಿದೆ. ನಮ್ಮ ದೇಶವು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ. ನಾವು ಶಾಂತಿ ಮಂತ್ರ ಜಪಿಸಿದರೂ ಕೂಡ ಪಾಕಿಸ್ತಾನದ ಉಗ್ರಗಾಮಿಗಳು ನಿರಂತರ ದಾಳಿ ಮಾಡುವ ಮೂಲಕ ಯೋಧರನ್ನು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದೆ. ಪಾಕಿಸ್ತಾನವನ್ನು ಬಗ್ಗು ಬಡಿಯುವ ಸ್ಥಿತಿಯಲ್ಲಿ ನಾವಿದ್ದೇವೆ. ತಾಯಿನಾಡು ರಕ್ಷಣೆಗೆ ನಿವೃತ್ತ ಯೋಧರು ಸದಾ ಸಿದ್ಧ.
- ಸುರೇಶ್, ಮಾಜಿ ಯೋಧ, ಮಳವಳ್ಳಿಭಯೋತ್ಪಾದಕರನ್ನು ಬೆಂಬಲಿಸಿದ ಪಾಕಿಸ್ತಾನದ ವಿರುದ್ಧ ಭಾರತೀಯ ಯೋಧರ ನಡೆಸಿದ ಹೋರಾಟ ಅದ್ಭುತ. ಪಾಕಿಸ್ತಾನದ ದಾಳಿಯನ್ನು ಹುಟ್ಟಡಗಿಸುವ ಶಕ್ತಿ ಭಾರತಕ್ಕಿದೆ ಎನ್ನುವುದನ್ನು ನಮ್ಮ ದೇಶ, ಸೇನೆ ತೋರಿಸಿದೆ. ಪಾಕಿಸ್ತಾನದ ಇಂತಹ ಕೃತ್ಯಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಲು ಮತ್ತಷ್ಟು ಕಠಿಣ ಕ್ರಮದ ಅವಶ್ಯಕತೆ ಇದೆ.-ದಿಲೀಪ್ ಕುಮಾರ್ (ವಿಶ್ವ), ಎಪಿಎಂಸಿ ಮಾಜಿ ಸದಸ್ಯ ಮಳವಳ್ಳಿಭಯೋತ್ಪಾದಕರ ಮೂಲ ನೆಲೆ ಪಾಕಿಸ್ತಾನ. ವಿಶ್ವದಲ್ಲಿ ಶಾಂತಿಗೆ ಭಯೋತ್ಪಾದಕರು ಬಹುದೊಡ್ಡ ಅಪಾಯಕಾರಿಗಳು. ಇದಕ್ಕೆ ಪೋಷಣೆ ನೀಡುತ್ತಿರುವ ಪಾಕಿಸ್ತಾನವನ್ನು ವಿಶ್ವದ ಯಾವುದೇ ದೇಶಗಳು ಬೆಂಬಲಿಸಬಾರದು. ಭಾರತವು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ನಮ್ಮ ವಶಕ್ಕೆ ಪಡೆದುಕೊಳ್ಳಲು ಇದೊಂದು ಸುವರ್ಣ ಅವಕಾಶ. ಪಿಒಕೆಯನ್ನು ವಶಕ್ಕೆ ಪಡೆದುಕೊಳ್ಳಬೇಕು.
-ಮಂಜು, ಕಮ್ಮನಾಯಕನಹಳ್ಳಿ, ಕನ್ನಡಸೇನೆ ಮುಖಂಡಕೇಂದ್ರ ಸರ್ಕಾರ ಭಯೋತ್ಪಾದನೆ ನಿಮೂರ್ಲನೆ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಸಾಲದು. ಪಾಕಿಸ್ತಾನದ ನೆಲದಲ್ಲಿ ಅಡಗಿರುವ ಎಲ್ಲಾ ಭಯೋತ್ಪಾದಕರ ನಾಯಕರನ್ನು ಭಾರತ ವಶಕ್ಕೆ ಪಡೆಯಬೇಕು. ಕಾಶ್ಮೀರದ ವಿವಾದಕ್ಕೆ ಅಂತ್ಯ ಹಾಡಬೇಕು. ಪೆಹಲ್ಗಾಂ ಅಂತಹ ಘಟನೆಗಳು ಇನ್ನೆಂದಿಗೂ ದೇಶದಲ್ಲಿ ಮರುಕಳಿಸಬಾರದು.- ವಿನುತ, ಗೃಹಣಿ, ದುಗ್ಗನಹಳ್ಳಿ, ಮಳವಳ್ಳಿ ತಾಲೂಕುಪಾಕಿಸ್ತಾನ ಸ್ವಾತಂತ್ರ್ಯಗೊಂಡಾಗಿನಿಂದಲೂ ಸುಖಾಸುಮ್ಮನೆ ಕಾಲೆಳೆದುಕೊಂಡು ಭಾರತದ ಮೇಲೆ ಜಗಳ ತೆಗೆಯುತ್ತಲೆ ಇದೆ. ಈಗಾಗಲೇ ಮುರ್ನಾಲ್ಕು ಬಾರಿ ಯುದ್ಧದಲ್ಲಿ ಹೊಡೆತ ತಿಂದಿದ್ದರೂ ಬುದ್ಧಿ ಮಾತ್ರ ಕಲಿತ್ತಿಲ್ಲ. ಯುದ್ಧದ ಮೂಲಕ ಪಾಕಿಸ್ತಾನ ತಾನೇ ತನ್ನ ಮೈಮೇಲೆ ಬರೆ ಎಳೆದುಕೊಂಡಂತಾಯಿತು.
-ಕೆ.ಎಸ್.ಸುರೇಶ್ ಕುಮಾರ್, ಕಾರ್ಯದರ್ಶಿ, ಕೆ.ಆರ್.ಪೇಟೆ ನಾಗರಿಕರ ಹಿತರಕ್ಷಣಾ ಸಮಿತಿಪಾಕಿಸ್ತಾನದ ಅಧಿಕೃತ ಸೈನಿಕರೇ ಉಗ್ರಗಾಮಿಗಳು ಎಂದರೆ ತಪ್ಪಾಗಲಾರದು. ನಮ್ಮ ವೀರ ಸೈನಿಕರು ಮುಟ್ಟಿ ನೋಡಿಕೊಳ್ಳುವ ಹಾಗೆ ಉಗ್ರಗಾಮಿಗಳ ಮನೆಗಳನ್ನು ಸ್ಫೋಟಿಸುವ ಮುಖಾಂತರ ಭಾರತಕ್ಕೆ ಕನಸಿನಲ್ಲಿಯೂ ಕೇಡು ಬಯಸದ ಹಾಗೆ ಭಯೋತ್ಪಾದಕರಿಗೆ ಬುದ್ಧಿ ಕಲಿಸಿದ್ದಾರೆ.- ಬಿ.ಎನ್.ಕೃಷ್ಣಗೌಡ, ಹಲಗೂರು, ಅಧ್ಯಕ್ಷರು ಆಶ್ರೇಯ ಜನಸೇವಾ ಫೌಂಡೇಷನ್ಪಾಕಿಸ್ತಾನ ಭಯೋತ್ಪಾದಕರನ್ನು ಪೋಷಣೆ ಮಾಡುತ್ತಿರುವ ರಾಷ್ಟ್ರ. ಮತ್ತೊಮ್ಮೆ ಭಾರತವನ್ನು ಕೆಣದಂತೆ ಪಾಠ ಕಲಿಸಬೇಕಿತ್ತು. ಕದನ ವಿರಾಮ ತೆಗೆದುಕೊಳ್ಳದೆ ಯುದ್ಧಮಾಡಿ ಭಯೋತ್ಪಾದನೆ ಚಟುವಟಿಕೆಯನ್ನು ಸಂಪೂರ್ಣ ನಾಶ ಮಾಡಬೇಕು.
-ಗವೀಗೌಡ ಪ್ರವೀಣ್, ಕ್ಯಾತನಹಳ್ಳಿ, ಪಾಂಡವಪುರ ತಾಲೂಕುಭಾರತೀಯ ಯೋಧರು ದಿಟ್ಟು ಹೋರಾಟ ಮಾಡುವ ಮೂಲಕ ಪಾಕಿಸ್ತಾನದಲ್ಲಿ ಇರುವ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸುವ ಕೆಲಸ ಮಾಡಿರುವುದು ಸರಿ. ಪಾಕಿಸ್ತಾನ ಮತ್ತೆ ಭಾರತ ಸಹವಾಸಕ್ಕೆ ಬಾರದಂತೆ ತಕ್ಕ ಪಾಠಕಲಿಸಲು ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಧಾರ ಉತ್ತಮವಾಗಿದೆ.- ತಿಮ್ಮಪ್ಪ, ರೈತ, ಬಿ.ಟಿ.ಕೊಪ್ಪಲು, ಪಾಂಡವಪುರ ತಾಲೂಕುನಾನು ಯುದ್ಧ ವಿರೋಧಿ. ಆದರೆ, ಅನಿವಾರ್ಯ ಸಂದರ್ಭಗಳಲ್ಲಿ ನಮ್ಮ ರಕ್ಷಣೆಗೆ ನಾವು ಯುದ್ಧ ಮಾಡಲೇಬೇಕು. ಆಪರೇಷನ್ ಸಿಂದೂರ ಕಾರ್ಯಾಚರಣೆ ಗುರಿ ಮುಟ್ಟುವ ಮುನ್ನವೇ ಕದನ ವಿರಾಮಕ್ಕೆ ಮುಂದಾಗಬಾರದಿತ್ತು. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಇದು ಸಕಾಲ. ಬಹುತೇಕ ಭಾರತೀಯರ ನಿರೀಕ್ಷೆಯೂ ಇದೇ ಆಗಿದೆ.
-ಮಲ್ಲಿಕಾರ್ಜುನ್, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷರುಭಯೋತ್ಪಾದನೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಸ್ವಾಗತಾರ್ಹ. ಇದರ ಮೂಲಕ ನಮ್ಮ ಸೈನಿಕರ ಕೆಚ್ಚದೆಯ ಹೋರಾಟ ಮತ್ತು ಭಾರತದ ವಿರಾಟ್ ಮಿಲಿಟರಿ ಶಕ್ತಿ ಜಗತ್ತಿಗೆ ಗೋಚರಿಸಿದೆ.- ಕೆ.ಬಿ.ಚಂದ್ರಶೇಖರ್, ಮಾಜಿ ಶಾಸಕರು, ಕೆ.ಆರ್.ಪೇಟೆ