ನರ್ಸಿಂಗ್‌ ವೃತ್ತಿಯು ಎಲ್ಲ ವೃತ್ತಗಳಿಗಿಂತ ಹೆಚ್ಚಿನದು

| Published : Jun 18 2024, 12:58 AM IST

ನರ್ಸಿಂಗ್‌ ವೃತ್ತಿಯು ಎಲ್ಲ ವೃತ್ತಗಳಿಗಿಂತ ಹೆಚ್ಚಿನದು
Share this Article
  • FB
  • TW
  • Linkdin
  • Email

ಸಾರಾಂಶ

ನರ್ಸಿಂಗ್‌ ವೃತ್ತಿಯು ಎಲ್ಲ ವೃತ್ತಗಳಿಗಿಂತ ಹೆಚ್ಚಿನದು. ಇಲ್ಲಿ ಸೇವೆಯೇ ಪ್ರಾಮುಖ್ಯವಾಗಿರುತ್ತದೆ ಎಂದು ಗೋಕಾಕ ರಾಕೆಟ್‌ ಕಂಪನಿಯ ಮುಖ್ಯಸ್ಥ ರಾಜು ಶೇಖರ ಹೇಳಿದರು.

ಕನ್ನಡಪ್ರಭ ವಾರ್ತೆ ಘಟಪ್ರಭಾ

ನರ್ಸಿಂಗ್‌ ವೃತ್ತಿಯು ಎಲ್ಲ ವೃತ್ತಗಳಿಗಿಂತ ಹೆಚ್ಚಿನದು. ಇಲ್ಲಿ ಸೇವೆಯೇ ಪ್ರಾಮುಖ್ಯವಾಗಿರುತ್ತದೆ ಎಂದು ಗೋಕಾಕ ರಾಕೆಟ್‌ ಕಂಪನಿಯ ಮುಖ್ಯಸ್ಥ ರಾಜು ಶೇಖರ ಹೇಳಿದರು.

ಸ್ಥಳೀಯ ಜೆ.ಜಿ.ಆಸ್ಪತ್ರೆ ಸೊಸೈಟಿಯ ನರ್ಸಿಂಗ್‌ ಕಾಲೇಜಿನ ದೀಪ ಬೆಳಗಿಸುವ ಹಾಗೂ ನರ್ಸಿಂಗ್‌ ವಿದ್ಯಾರ್ಥಿಗಳ ವಿಧಿ ಬೋಧನಾ ಕಾರ್ಯಕ್ರಮ ಆಸ್ಪತ್ರೆಯ ಆಯುರ್ವೇದ ಮೆಡಿಕಲ್‌ ಕಾಲೇಜಿನ ಸಭಾ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾಕ್ಟರ್‌ಕಿಂತ ನಾವು ಮೊದಲು ಭೇಟಿಯಾಗುವುದು ದಾದಿಗಳನ್ನು ನಂತರ ಡಾಕ್ಟರ್‌ ಸೇವೆ ಪ್ರಾರಂಭವಾಗುತ್ತದೆ. ಇಂತಹ ನರ್ಸಿಂಗ್‌ ವೃತ್ತಿಯನ್ನು ಜೆಜಿ ಸಹಕಾರಿ ಆಸ್ಪತ್ರೆಯಲ್ಲಿ ಕಲಿಯುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.ಕಾಹೇರ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ.ವೀರಕುಮಾರ ಮಾತನಾಡಿ, ವಿದ್ಯಾರ್ಥಿಗಳನ್ನು ಕೇಳಿದರೇ ನಾನು ಡಾಕ್ಟರ್‌ ಆಗುತ್ತೇನೆ. ನಾನು ಇಂಜನಿಯರ್‌ ಆಗುತ್ತೇನೆಂದು ಹೇಳುವ ಸಮಯದಲ್ಲಿ ನೀವುಗಳು ಭಾರತ ದೇಶದ ಏಕೈಕ ಸಹಕಾರಿ ಸಂಸ್ಥೆಯಲ್ಲಿ ನರ್ಸಿಂಗ್‌ ವೃತ್ತಿಯನ್ನು ಆಯ್ಕೆ ಮಾಡಿದ್ದು ಶ್ಲಾಘನೀಯ ಎಂದರು. ನರ್ಸಿಂಗ್‌ ಸೇವೆ ಒಂದು ಗ್ಲೊಬಲ್ ವೃತ್ತಿ, ಈ ವೃತ್ತಿಯಲ್ಲಿ ರೋಗಿಯನ್ನು ಸಂಭಾಳಿಸುವುದರ ಜತೆಗೆ ಅವರ ಸಂಬಂಧಿಕರನ್ನು ಸಂಭಾಳಿಸಬೇಕಾಗುತ್ತದೆ. ರೋಗಿಯನ್ನು ಗುಣಮುಖ ಮಾಡಿ ಅವರನ್ನು ಮತ್ತೆ ಸಮಾಜಕ್ಕೆ ಕೊಡುವುದು ಗುರುತರ ಕೆಲಸ. ಕಾರಣ ನಸಿಂಗ್‌ ಕೆಲಸದ ಬಗ್ಗೆ ಕಿಳುರಮೆ ಪಡುವುದು ಬೇಡ ಎಂದು ಸಲಹೆ ನೀಡಿದರು.ಗುಬ್ಬಲಗುಡ್ಡ ಕೆಂಪಯ್ಯ ಮಠದ ಮಠಾಧೀಶ ಡಾ.ಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಸಿದ್ದುಸಿಂಗ ಹಜೆರಿ ವರದಿ ವಾಚನ ಮಾಡಿದರು. ಸಂಸ್ಥೆಯ ಅಧ್ಯಕ್ಷ ಅಪ್ಪಯ್ಯ ಬಡಕುಂದ್ರಿ, ಉಪಾಧ್ಯಕ್ಷ ಅನಿಲ ನೇರ್ಲಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ.ಎಚ್.ಪಾಟೀಲ, ಆರ್.ಟಿ.ಶಿರಾಳಕರ, ಸಿ.ಎಸ್.ಕಾಡದವರ, ಎಂ.ಎ.ಪಾಟೀಲ, ಎಸ್.ಎಸ್.ಪಾಟೀಲ, ಆಶಾದೇವಿ ಕತ್ತಿ ಸೇರಿದಂತೆ ಎಲ್ಲ ನಿರ್ದೇಶಕ ಮಂಡಳಿಯ ಸದಸ್ಯರು, ನರ್ಸಿಂಗ್ ಕಾಲೇಜಿನ ಮತ್ತು ಆಯುರ್ವೇದ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಯವರು ಇದ್ದರು. ಕಲ್ಲಪ್ಪ ಕೊಲ್ಹಾಪುರೆ ವಂದನಾರ್ಪಣೆ ಮಾಡಿದರು.