ಸಾರಾಂಶ
ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಂಧ್ಯಾ ಸುರಕ್ಷಾ,ವೃದ್ಧಾಪ್ಯ ವೇತನ ಯೋಜನೆಗಳ ಬಗ್ಗೆ ಯಲಬುರ್ಗಾ ನ್ಯಾಯಾಲಯದಲ್ಲಿ ಕಾನೂನು ಸೇವಾ ಸಮಿತಿಗೆ ಆಗಮಿಸಿ ಉಚಿತ ಕಾನೂನು ನೆರವು ಪಡೆದುಕೊಳ್ಳಬೇಕು
ಕುಕನೂರು: ಮನೆಯ ಹಿರಿಯರನ್ನು ಚಿಕ್ಕ ಮಕ್ಕಳನ್ನು ಪೋಷಿಸುವ ರೀತಿಯ ಪೋಷಣೆ ಮಾಡಬೇಕು ಎಂದು ಯಲಬುರ್ಗಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ ಹೇಳೀದರು.
ತಾಲೂಕಿನ ಮಂಗಳೂರು ಗ್ರಾಮದ ಮೋಚಿ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ, ಕಂದಾಯ ಇಲಾಖೆ, ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಜರುಗಿದ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರು ಈ ದೇಶದ ಬುದ್ಧಿಜೀವಿಗಳು ಹಾಗೂ ಮಾರ್ಗದರ್ಶಕರು.ಅವರನ್ನು ಪ್ರತಿಯೊಬ್ಬರು ಪ್ರತಿ ಕುಟುಂಬದ ಸದಸ್ಯರು ಗೌರವಿಸುವುದು ಎಲ್ಲರ ಕರ್ತವ್ಯ. ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸರ್ವೋಚ್ಚ ನ್ಯಾಯಾಲಯ 2007ರಲ್ಲಿ ಹಿರಿಯ ನಾಗರಿಕರ ರಕ್ಷಣೆಗಾಗಿ ನೂತನ ಕಾನೂನನ್ನು ಜಾರಿಗೆ ತಂದಿದ್ದು ಹಿರಿಯ ನಾಗರಿಕರ ರಕ್ಷಣೆ ಮಾಡೋದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಂಧ್ಯಾ ಸುರಕ್ಷಾ,ವೃದ್ಧಾಪ್ಯ ವೇತನ ಯೋಜನೆಗಳ ಬಗ್ಗೆ ಯಲಬುರ್ಗಾ ನ್ಯಾಯಾಲಯದಲ್ಲಿ ಕಾನೂನು ಸೇವಾ ಸಮಿತಿಗೆ ಆಗಮಿಸಿ ಉಚಿತ ಕಾನೂನು ನೆರವು ಪಡೆದುಕೊಳ್ಳಬೇಕು ಎಂದರು.
ಗ್ರೇಡ್ 2 ತಹಸೀಲ್ದಾರ ಮುರುಳಿದರ ಕುಲಕರ್ಣಿ,ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಹೊಂಬಳ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಜಂಟಿ ಕಾರ್ಯದರ್ಶಿ ಹಸನ್ ಸಾಬ್ ನದಾಫ್, ಬಸವರಾಜ ಕುಲಕರ್ಣಿ, ಲಕ್ಷ್ಮಿ ನಾಯಕ, ಕಂದಾಯ ನಿರೀಕ್ಷಕ ದಾದಾಪೀರ್, ನ್ಯಾಯಾಲಯದ ಶಿರಸ್ತೆದಾರ ಲೋಕೇಶ, ರಾಘವೇಂದ್ರ ಕೋಳಿಹಾಳ, ವಿನಾಯಕ ಇತರರು ಇದ್ದರು.