ಪೌಷ್ಟಿಕ ಆಹಾರವೇ ದೇಹಕ್ಕೆ ಒಳ್ಳೆಯ ಔಷಧ

| Published : Sep 06 2024, 01:03 AM IST

ಪೌಷ್ಟಿಕ ಆಹಾರವೇ ದೇಹಕ್ಕೆ ಒಳ್ಳೆಯ ಔಷಧ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಸೇವಿಸುವ ಪೌಷ್ಟಿಕ ಆಹಾರವೇ ನಮ್ಮ ದೇಹಕ್ಕೆ ಒಳ್ಳೆಯ ಔಷಧ ಎಂದು ಬ.ವಿ.ವ ಸಂಘದ ಸಜ್ಜಲ ಶುಶ್ರೂಷಾ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಿಲೀಪ ನಾಟೇಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾವು ಸೇವಿಸುವ ಪೌಷ್ಟಿಕ ಆಹಾರವೇ ನಮ್ಮ ದೇಹಕ್ಕೆ ಒಳ್ಳೆಯ ಔಷಧ ಎಂದು ಬ.ವಿ.ವ ಸಂಘದ ಸಜ್ಜಲ ಶುಶ್ರೂಷಾ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಿಲೀಪ ನಾಟೇಕರ್ ಹೇಳಿದರು.ಬ.ವಿ.ವ ಸಂಘದ ಸಜ್ಜಲ ಶುಶ್ರೂಷಾ ವಿಜ್ಞಾನಗಳ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ವತಿಯಿಂದ ರಾಷ್ಟ್ರೀಯ ಆಹಾರ ಸಪ್ತಾಹ-2024ರ ನಿಮಿತ್ತ ಬುಧವಾರ ಪೌಷ್ಟಿಕ ಮತ್ತು ಸಮತೋಲನ ಆಹಾರದ ಮಹತ್ವದ ಸಾರುವ ಆಹಾರ ಪ್ರದರ್ಶನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ಸೇವಿಸುವ ಮನೆಯ ಆಹಾರವೇ ದಿವ್ಯ ಔಷಧವಾಗಿದ್ದು, ಉತ್ತಮ ಹಾಗೂ ಆರೋಗ್ಯಕರ ಆಹಾರದ ಸೇವನೆ ಅಗತ್ಯವಾಗಿದೆ. ಮನೆ ಅಹಾರವನ್ನೇ ಹೆಚ್ಚಾಗಿ ಸೇವಿಸಿ ಎಂದು ಸಲಹೆ ನೀಡಿದರು.ಮಹಾವಿದ್ಯಾಲಯ ಬಿಎಸ್ಸಿ, ಪಿ.ಬಿ.ಬಿ.ಎಸ್ಸಿ ಹಾಗೂ ಜಿ.ಎನ್.ಎಂ. ಪ್ರಥಮ ವರ್ಷದ ಎಲ್ಲ 220 ವಿದ್ಯಾರ್ಥಿಗಳನ್ನು 22 ಗುಂಪುಗಳಾಗಿ ವಿವಿಧ ಆಹಾರ ಪದ್ಧತಿಗಳ ಬಗ್ಗೆ, ಪೌಷ್ಟಿಕ ಖಾದ್ಯಗಳನ್ನು ತಯಾರಿಸಿದ ಆಹಾರಪ್ರದರ್ಶನ ಮೇಳ ಎಲ್ಲರ ಗಮನ ಸೆಳೆಯಿತು.ತೀರ್ಪುಗಾರರಾಗಿ ಬಿ.ವಿ.ವಿ.ಎಸ್.ನರ್ಸಿಂಗ್ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಜಯಶ್ರೀ ಇಟ್ಟಿ ಹಾಗೂ ಬ.ವಿ.ವ.ಸಂಘದ ಶಾರದಾಂಬೆ ಶುಶ್ರೂಷಾ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರವೀಣ ಪಾಟೀಲ ಅವರು ಆಗಮಿಸಿದ್ದರು. ಆಯ್ದ ಅತ್ಯುತ್ತಮ 7 ಗುಂಪುಗಳ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ಮುಖ್ಯಸ್ಥೆ ಶಿಲ್ಪಾ ಕೂಗಲಿ ಹಾಗೂ ಪ್ರಾಧ್ಯಾಪಕರಾದ ರೇಣುಕರಾಜ ನಾಗಮ್ಮನವರ, ಡಾ.ರಾಜಶೇಖರ ಹಿರೇಗೌಡರ, ಜಗದೀಶ ಹಿರೇಮಠ, ಕಿರಣ ಕಲಕಬಂಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಮಹಾವಿದ್ಯಾಲಯದ ಎಂ.ಎಸ್ಸಿ ನರ್ಸಿಂಗ್‌ ಪ್ರಥಮ ಹಾಗೂ ದ್ವಿತೀಯ ವರ್ಷದ ಎಲ್ಲ ವಿದ್ಯಾರ್ಥಿಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.