ಕಾಳಸಂತೆಯಲ್ಲಿ ಪೌಷ್ಟಿಕ ಆಹಾರ ಕಿಟ್‌ ಮಾರಾಟಗಾರರನ್ನು ಬಂಧಿಸಿ

| Published : Feb 20 2025, 12:46 AM IST

ಸಾರಾಂಶ

ಪೌಷ್ಟಿಕಾಂಶಯುಕ್ತ ಆಹಾರ ಕಿಟ್‌ನಲ್ಲಿ ದೊಡ್ಡ ಮಾಫಿಯಾ ಅಡಗಿದ್ದು, ಅದರಲ್ಲಿ ಕಾಂಗ್ರೆಸ್‌ನ ಮುಖಂಡರು ಭಾಗಿಯಾಗಿದ್ದಾರೆ. ಕೂಡಲೇ ಅವರನ್ನು ಪತ್ತೆ ಹಚ್ಚುವ ಮೂಲಕ ಜೈಲಿಗೆ ಕಳಿಸಬೇಕು

ಹುಬ್ಬಳ್ಳಿ: ಅಂಗನವಾಡಿ ಕೇಂದ್ರ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ವಿತರಿಸಬೇಕಾದ ಪೌಷ್ಟಿಕ ಆಹಾರ ಕಿಟ್‌ಗಳನ್ನು ಅಕ್ರಮವಾಗಿ ಕಳ್ಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿ ಹಾಗೂ ಕಾಂಗ್ರೆಸ್ ನಾಯಕಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಬುಧವಾರ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಇಲ್ಲಿನ ದುರ್ಗದಬೈಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪೌಷ್ಟಿಕಾಂಶಯುಕ್ತ ಆಹಾರ ಕಿಟ್‌ನಲ್ಲಿ ದೊಡ್ಡ ಮಾಫಿಯಾ ಅಡಗಿದ್ದು, ಅದರಲ್ಲಿ ಕಾಂಗ್ರೆಸ್‌ನ ಮುಖಂಡರು ಭಾಗಿಯಾಗಿದ್ದಾರೆ. ಕೂಡಲೇ ಅವರನ್ನು ಪತ್ತೆ ಹಚ್ಚುವ ಮೂಲಕ ಜೈಲಿಗೆ ಕಳಿಸಬೇಕು. ಪೊಲೀಸ್ ಇಲಾಖೆ ಕೇವಲ ಕಾಟಾಚಾರಕ್ಕೆಂಬಂತೆ ಕೆಲವರನ್ನು ಮಾತ್ರ ಬಂಧಿಸಿದೆ. ಆದರೆ, ಪ್ರಮುಖ ಆರೋಪಿಯಾದ ಮಹಿಳಾ ಕಾಂಗ್ರೆಸ್ ನಾಯಕಿಯನ್ನು ಇಂದಿಗೂ ಬಂಧಿಸಿಲ್ಲ. ಅವರ ಬಂಧನಕ್ಕೆ ತಡೆ ಉಂಟು ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ದಾಖಲಿಸಬೇಕು. ಇಲ್ಲದೇ ಹೋದಲ್ಲಿ ಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ವೇಳೆ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಂಜುನಾಥ್ ಕಾಟ್ಕರ್, ಪ್ರಭು ನವಲಗುಂದಮಠ, ಅರುಣ್ ಹುದ್ಲಿ, ಜಗದೀಶ್ ಬಳ್ಳಾನವರ, ರಾಜು ಜರತಾರಘರ, ಪ್ರತಿಭಾ ಪವಾರ, ಸುವರ್ಣ ಜಂಗಮಗೌಡ್ರು, ಲಕ್ಷ್ಮೀಕಾಂತ ಘೋಡಕೆ, ಅಣ್ಣಪ್ಪ ಗೋಕಾಕ್, ಜಗದೀಶ ಕಂಬಳಿ, ರಾಜು ಕೊರ್ಯಾಣಮಠ, ಗೋಪಾಲ್ ಕಲ್ಲೂರ, ಭಾರತಿ ಎಲ್ಕಾನ, ವಿನಾಯಕ್ ಲದವಾ, ಪ್ರವೀಣ್ ಕುಬಸವ, ರಂಗಾ ಕಠಾರೆ, ನೀಲಕಂಠ ತಡಸದಮಠ, ವಿರೇಶ್ ಸಾಲಿಮಠ ಸೇರಿದಂತೆ ಹಲವರಿದ್ದರು.