ಸಾರಾಂಶ
ಕಂಪ್ಲಿ:ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು.
ತಹಸೀಲ್ದಾರ್ ಜೂಗಲ ಮಂಜು ನಾಯಕ ಮಾತನಾಡಿ ಓಬವ್ವ ಅವರು ಧೈರ್ಯ, ಸಮಯಪ್ರಜ್ಞೆ ಹಾಗೂ ದೇಶಭಕ್ತಿ ಎಂಬ ಅಪರೂಪದ ಗುಣಗಳ ಪ್ರತೀಕ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಪುರಸಭೆ ಸದಸ್ಯ ಸಿ.ಆರ್. ಹನುಮಂತ ಮಾತನಾಡಿ, ಓಬವ್ವ ಅವರ ಶೌರ್ಯ ಕೇವಲ ಛಲವಾದಿ ಸಮುದಾಯದ ಹೆಮ್ಮೆಯಲ್ಲ. ಇಡೀ ಕನ್ನಡನಾಡಿನ ಗೌರವವಾಗಿದೆ. ಮಹಿಳೆಯರೂ ಸಮಾಜ ಮತ್ತು ದೇಶ ರಕ್ಷಣೆಯಲ್ಲಿ ಪುರುಷರಿಗಿಂತ ಕಡಿಮೆ ಅಲ್ಲ ಎಂಬುದನ್ನು ಓಬವ್ವ ತಮ್ಮ ಕಾರ್ಯದಿಂದ ಸಾಬೀತುಪಡಿಸಿದ್ದಾರೆ. ಒನಕೆ ಓಬವ್ವ ಅವರಂತಹ ಮಹನೀಯರ ಬದುಕು ಇಂದಿನ ಪೀಳಿಗೆಗೆ ಸ್ಫೂರ್ತಿಯ ದೀಪಸ್ತಂಭವಾಗಿದೆ. ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಮತ್ತು ಧೈರ್ಯವನ್ನು ಪ್ರತಿಯೊಬ್ಬರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು. ನಾವು ಅವರ ಜೀವನ ಮೌಲ್ಯಗಳನ್ನು ಅನುಸರಿಸಿದಾಗ ಮಾತ್ರ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿರಸ್ತಿದಾರ್ ರಮೇಶ್, ಇಸಿಒ ಟಿ.ಎಂ. ಬಸವರಾಜ್, ಛಲವಾದಿ ಸಮಾಜದ ಮುಖಂಡರಾದ ಎಂ.ಸಿ. ಮಾಯಪ್ಪ, ಲಕ್ಷ್ಮಣ, ವಿರೂಪಾಕ್ಷಪ್ಪ, ಸಿ.ಎ. ಚೆನ್ನಪ್ಪ, ಚೆನ್ನಬಸವ, ಸಿ.ಎ. ರಾಮಸ್ವಾಮಿ, ದೇವೇಂದ್ರ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.ಓಬವ್ವ ಚರಿತ್ರೆ ಸದಾ ನೆನಪಿಸನಲ್ಲಿರಬೇಕು
ಕೊಟ್ಟೂರು: ವೀರ ವನಿತೆ ಒನಕೆ ಓಬವ್ವನ ಚರಿತ್ರೆಯನ್ನು ಮುಂದಿನ ಪೀಳಿಗಿಗೆ ಪ್ರತಿಯೊಬ್ಬರು ಹೆಮ್ಮಯಿಂದ ಸಾರಬೇಕು. ಓಬವ್ವ ಮಹಾನ್ ನಾಡ ರಾಷ್ಟ್ರಪ್ರೇಮಿ ಆಗಿದ್ದಳು ಎಂದು ಚಲುವಾದಿ ಮಹಾ ಸಭಾದ ಅಧ್ಯಕ್ಷ ಮಂಜುನಾಥ ಡಿ. ಹೇಳಿದರುತಾಲೂಕಿನ ಹ್ಯಾಳ್ಯ ಗ್ರಾಮದಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ ಅಂಗವಾಗಿ ಓಬವ್ವ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.ಗ್ರಾಮ ಪಂಚಾಯಿತಿ ಸದಸ್ಯ ನಾಣಿಕೇರಿ ಕೊಟ್ರೇಶ್, ಶಿವಕುಮಾರ್, ಶಿವಾನಂದ, ರಾಜು, ಭೀಮಪ್ಪ, ನೀಲಪ್ಪ, ಬಸವರಾಜಪ್ಪ , ಮತ್ತಿತರರು ಇದ್ದರು.ಒನಕೆ ಓಬವ್ವ ಅಸಧಾರಣ ಮಹಿಳೆಕೊಟ್ಟೂರು: ವೀರ ವನಿತೆ ಒನಕೆ ಓಬವ್ವ ನೂರು ಸೈನಿಕರು ಮಾಡಬೇಕಾದ ಕೆಲಸವನ್ನು ಒಬ್ಬಳೇ ಮಾಡಿ ವಿರೋಧಿಗಳನ್ನು ಹಿಮ್ಮೆಟಿಸಿದ ಮಹಾ ತಾಯಿ ಎಂದು ಗ್ರೇಡ್ 2 ತಹಸೀಲ್ದಾರ್ ಎಂ. ಪ್ರತಿಭಾ ಹೇಳಿದರು.ತಾಲೂಕು ಆಡಳಿತದಿಂದ ಮಹಾತ್ಮಾ ಗಾಂಧೀ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಒನಕೆ ಓಬವ್ವನ ಜಯಂತಿಯಲ್ಲಿ ಓಬವ್ವನ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಮಾತನಾಡಿದರು .ಚಲುವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಹೊಟ್ಟೆರ ಅಜ್ಜಯ್ಯ ಮಾತನಾಡಿ, ಓಬವ್ವನ ಸಾಹಸದಿಂದಾಗಿ ಚಿತ್ರದುರ್ಗಕೋಟೆ ಸದಾ ವಿರೋಧಿಗಳಿಂದ ಸುರಕ್ಷಿತವಾಗಿತ್ತು ಎಂದರು.ಪಪಂ ಮುಖ್ಯಾಧಿಕಾರಿ ಎ. ನಸರುಲ್ಲಾ ಚಲವಾದಿ ಮಹಸಭಾದ ಸಿ. ಕೆಂಗರಾಜ, ಪಪಂ ಸದಸ್ಯ ವೀಣಾ ವಿವೇಕಾನಂದ ಗೌಡ, ಬಿ. ದುರ್ಗಪ್ಪ, ಉಪತಹಸೀಲ್ದಾರ್ ಅನ್ನದಾನೇಶ್ ಬಿ. ಪತ್ತಾರ್, ಶಿರಸ್ಥೆದಾರ್ ಚಂದ್ರನಾಯಕ್ , ಆರ್.ಐ. ಹರೀಶ ಹಳ್ಳಿ, ಮತ್ತಿತರರು ಇದ್ದರು. ಸಿ.ಮ. ಗುರುಬಸವರಾಜ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))