ಯಾವುದೇ ವಾಹನ ಚಾಲಕರು ಚಾಲನೆ ಮಾಡುವಾಗ ಜವಾಬ್ದಾರಿಯುತವಾಗಿರಬೇಕು
ಗಂಗಾವತಿ: ವಾಹನ ಚಾಲಕರು ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಸಾರಿಗೆ ಇಲಾಖೆ ನೀಡಿದ ಸೂಚನೆ ಪಾಲಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಧೀಶ ಜಿ.ಬಿ.ಹಳ್ಳಕಾಯಿ ಹೇಳಿದರು.
ನಗರದ ಪೊಲೀಸ್ ಸಮುಚ್ಚಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಏರ್ಪಡಿಸಿದ್ದ ರಸ್ತೆ ಸುರಕ್ಷಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಯಾವುದೇ ವಾಹನ ಚಾಲಕರು ಚಾಲನೆ ಮಾಡುವಾಗ ಜವಾಬ್ದಾರಿಯುತವಾಗಿರಬೇಕು ಜತೆಗೆ 18ವರ್ಷ ಮೇಲ್ಪಟ್ಟವರು ವಾಹನ ಚಾಲನೆ ಜೊಜತೆಗೆ ವಿಮೆ ಮತ್ತು ಹೆಲ್ಮೆಟ್ ಕಡ್ಡಾಯವಾಗಿರಬೇಕೆಂದು ತಿಳಿಸಿದರು.
ನಗರದಲ್ಲಿ ಬಹಳಷ್ಟು ಚಾಲಕರು ನೋಂದಣಿ ಇಲ್ಲ, ವಿಮೆ ಸೇರಿದಂತೆ ಯಾವುದೇ ರೀತಿಯ ಲೈಸನ್ಸ್ ಹೊಂದಿರುವದಿಲ್ಲ. ಕೂಡಲೆ ಸಂಬಂಧಿಸಿದ ಇಲಾಖೆಯ ಅನುಮತಿ ಪಡೆಯಬೇಕೆಂದರು.ಇನ್ನೋರ್ವ ಪ್ರಧಾನ ಸಿವಿಲ್ ನ್ಯಾಯಧೀಶ ನಾಗೇಶ ಪಾಟೀಲ್ ಮಾತನಾಡಿ, ಚಾಲಕರು ನೀತಿ ನಿಯಮ ಪಾಲಿಸಬೇಕೆಂದು ತಿಳಿಸಿದ ಅವರು, ವಾಹನಗಳನ್ನು ಎಡಬದಿಯಿಂದ ಸಂಚಾರ ಮಾಡಬೇಕು. ಇದು ಇವತ್ತಿನ ನಿಯಮ ಅಲ್ಲ ದೇಗುಲಗಳಲ್ಲಿ ಎಡದಿಂದ ಬಲಕ್ಕೆ ಪ್ರದಕ್ಷಣೆ ಹಾಕುವ ಸಂಪ್ರದಾಯದಂತೆ ಚಾಲನೆ ನಿಯಮಕ್ಕೆ ಅನ್ವಯಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಚಾಲಕರಿಗೆ ಉಚಿತ ಕಣ್ಣಿನ ಪರೀಕ್ಷೆ ಆಯೋಜಿಸಲಾಗಿತ್ತು. ಈ ವೇಳೆ ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ನೇತ್ರತಜ್ಞ ಡಾ.ಹನುಮಂತಪ್ಪ, ಪಿಐ ಪ್ರಕಾಶ ಮಾಳೆ, ರಂಗಪ್ಪ, ವಕೀಲರ ಸಂಘದ ಅಧ್ಯಕ್ಷ ಎಚ್.ವೈ.ನಾಯಕ, ಮಂಜುನಾಥಸ್ವಾಮಿ ಎಚ್.ಎಂ.ನ್ಯಾಯವಾದಿ ಕುಸಬಿ, ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಇಸ್ಮಾಯಲ್ ಸಾಬ್, ಶಾರದಮ್ಮ, ಸಾರಿಗೆ ಇಲಾಖೆಯ ನಾಗರಾಜ್ ಉಪಸ್ಥಿತರಿದ್ದರು.