ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ನಾನಾ ಭಾಗಗಳಲ್ಲಿ ಈಗಾಗಲೇ ಒಳಮಿಸಲಾತಿಯ ಅಂಗವಾಗಿ ಜಾತಿ ಗಣತಿಯು ಸಮೀಕ್ಷೆ ನಡೆಯುತ್ತಿದ್ದು ತಾಂತ್ರಿಕವಾಗಿ ಕೆಲವು ಗೊಂದಲಗಳು ಎದುರಾಗಿವೆ. ಆದರೆ ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದಲ್ಲಿ ಗಣತಿದಾರ ಅರುಣ್ ಕುಮಾರ್ ಎಂಬ ಶಿಕ್ಷಕ 061 ಕಾಲಂನಲ್ಲಿ ಮಾದಿಗ ಎಂದು ಬರೆಯದೇ ಗಣತಿದಾರರು 22.15 ಮಾದಿ ಎಂದು ನಮೂದಿಸುತ್ತಿದ್ದಾರೆಂದು ಎಂದು ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಸುರೇಶ್ ಆರೋಪಿಸಿದರು. ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಜಾತಿಗೆ ಸಿಗಬೇಕಾಗಿರುವ ಮೀಸಲಾತಿಯ ಶೇಕಡಾವಾರನ್ನು ಪಡೆದುಕೊಳ್ಳಲು ಮೂರು ದಶಕಗಳಿಂದ ಹೋರಾಟ ಮಾಡಲಾಗಿದೆ. ಈಗ ಗಣಿತಿದಾರರು ಮನೆಮನೆಯನ್ನು ಗುರುತಿಸಿ ಗುರುತರ ವಾದಂತಹ ಜಾತಿಯನ್ನು ಸಂಬಂಧಪಟ್ಟಂತ ಕಾಲಂನಡಿ ನಮೂದಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಪಾರದರ್ಶಕ ಸಮೀಕ್ಷೆ ನಡೆಸಬೇಕು ಎಂದರು.ಮಾದಿಕ ಜನಾಂಗಕ್ಕೆ ಅನ್ಯಾಯ
ಕಳೆದ ಏಳು ದಶಕಗಳಿಂದ ನಮಗೆ ಆಗಿರುವ ಅನ್ಯಾಯಕ್ಕೆ ಗಣತಿದಾರರು ಇನ್ನು ಅನ್ಯಾಯ ಮಾಡಲು ಇಂತಹ ಕುಂಟು ನೆಪಗಳ ಮುಖಾಂತರ ನಮ್ಮ ಸಮುದಾಯದ ಸಂಖ್ಯೆಯನ್ನು ಇಳಿಮುಖ ಮಾಡುವಲ್ಲಿ ತಾಂತ್ರಿಕ ದೋಷ, ನಮಗೆ ಇನ್ನು ಇದರ ಬಗ್ಗೆ ಗೊತ್ತಿಲ್ಲ ಎಂಬ ಹಾರಿಕೆ ಉತ್ತರದ ಮೂಲಕ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು,ಚಿಕ್ಕಬಳ್ಳಾಪುರ ತಾಲೂಕಿನ ಹೂವ್ವಿನಹಾರ್ಲಹಳ್ಳಿಯಲ್ಲಿ ಗಜೇಂದ್ರ ಎಂಬ ಗಣಿತಿದಾರರು ಇದೇ ತಪ್ಪನ್ನು ಮಾಡುತ್ತಿದ್ದು ಕೇಳಿದರೆ ನಮಗೆ ಗೊತ್ತಿಲ್ಲ ಈ ತಪ್ಪನ್ನು ಮತ್ತೆ ಮಾಡದಂತೆ ಸರಿ ಮಾಡುತ್ತೇವೆ ಎಂದು ಕ್ಷಮೆಯನ್ನು ಯಾಚಿಸಿರುತ್ತಾರೆ. ಸಂಬಂಧಪಟ್ಟ ಮೇಲಾಧಿಕಾರಿಗಳು ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಮತ್ತು ಗಣಿತಿದಾರರಿಗೆ ಸರಿಯಾದ ಮಾಹಿತಿಯನ್ನು ನೀಡಿ ಗಣತಿಯನ್ನು ಕಾರ್ಯವನ್ನು ಪಾರದರ್ಶಿಕವಾಗಿ ಮಾಡಿ, ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಒಳ ಮೀಸಲಾತಿ ನೀಡುವ ಮೂಲಕ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಒತ್ತಾಯಿಸಿದರು.
ಗಣತಿಯಲ್ಲಿ ಜನಾಂಗಕ್ಕೆ ಅನ್ಯಾಯಜಂಬುದ್ವೀಪ ಜನಸೇವಾ ಸಂಘದ ಜಿಲ್ಲಾಧ್ಯಕ್ಷ ರಮಣ್ ಅಕೇಶ್ ಮಾತನಾಡಿ,ಒಳ ಮೀಸಲಾತಿ ಜಾತಿಗಣತಿಯನ್ನು ಪ್ರಾರಂಭಿಸಿದ ರಾಜ್ಯ ಸರ್ಕಾರವು ಮನೆಮನೆಗೆ ತೆರಳಿ ಅಂಕಿ ಅಂಶಗಳನ್ನು ಸಂಗ್ರಹಣೆ ಮಾಡುತ್ತಿರುವುದು ಸ್ವಾಗತ, ಆದರೆ ಸಾದಲಿ ಗ್ರಾಮದಲ್ಲಿ ಗಣತಿ ದಾರ ಅರುಣ್ ಕುಮಾರ್ ಮತ್ತು ಹೂವ್ವಿನಹಾರ್ಲಹಳ್ಳಿಯಲ್ಲಿ ಗಜೇಂದ್ರ ಎಂಬ ಗಣಿತಿದಾರ 061 ಕಾಲಂನಲ್ಲಿ ಮಾದಿಗ ಎಂದು ಬರೆಯದೇ ಗಣತಿದಾರರು 22.15 ಮಾದಿ ಎಂದು ನಮೂದಿಸುತ್ತಿದ್ದು ನಮ್ಮ ಜಾತಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನು ಜಿಲ್ಲಾಧಿಕಾರಿಗಳು ಕೂಡಲೆ ಸರಿಪಡಿಸಬೇಕು ಮತ್ತ ಗಣಿತಿದಾರರು ನಿಮ್ಮ ಮನೆಗಳ ಹತ್ತಿರ ಬಂದಾಗ ನಿಮ್ಮ ಜಾತಿ ಪ್ರಮಾಣ ಪತ್ರದಲ್ಲಿ ಯಾವುದೇ ನಮೂದಾಗಿರಲಿ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಆದಿ ದ್ರಾವಿಡ ಆದಿ ಆಂಧ್ರ ಎಂಬ ಇತರೆ ಉಪಜಾತಿಗಳು ಯಾವುದೇ ಇರಲಿ ಇವುಗಳನ್ನು ಗಣಿತಿದಾರರಿಗೆ ಹೇಳದೆ ಕೇವಲ ಮಾದಿಗ ಎಂಬ ನಾಮಾಂಕಿತದ ಜಾತಿಯನ್ನು ಮಾತ್ರ ಹೇಳಬೇಕು ಎಂದು ಮಾದಿಗ ಸಮುದಾಯಕ್ಕೆ ಜಾಗೃತಿಯನ್ನು ಮೂಡಿಸಿದರು.ಜಾತಿ ಗಣತಿ ಭಿತ್ತಿ ಪತ್ರ ಬಿಡುಗಡೆ
ಈವೇಳೆ ಮಾದಿಗ ದಂಡೋರಾ ಮೀಸಲಾತಿ ಹೋರಾಟ ಸಮಿತಿಯಿಂದ ಜಾತಿ ಗಣತಿಯ ಬಗ್ಗೆ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾದಿಗ ದಂಡೋರ ಜಿಲ್ಲಾ ಗೌರವಾಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ,ಎಸ್.ಜಿ. ಗಣೇಶ್,ಗುಡಿಬಂಡೆ ತಾಲೂಕು ಅಧ್ಯಕ್ಷ ರಮೇಶ್, ಮುರುಳಿ, ಅಣ್ಣಮ್ಮ ಸಮುದಾಯದ ಮುಖಂಡರು ಇದ್ದರು..