ಸಾರಾಂಶ
ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಮಂಗಳವಾರ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯಯಾತ್ರೆಗೆ ಅಸ್ಸಾಂನಲ್ಲಿ ಅಡ್ಡಿ ಮಾಡಿರುವುದನ್ನು ಖಂಡಿಸಿ ಅಸ್ಸಾಂ ಮುಖ್ಯಮಂತ್ರಿಯ ಭಾವಚಿತ್ರ ದಹಿಸಿ ಕಾಂಗ್ರೆಸ್ ಮುಖಂಡರು ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂನಲ್ಲಿ ಅಡ್ಡಿ ಮಾಡಿರುವುದನ್ನು ಖಂಡಿಸಿ ಅಸ್ಸಾಂ ಮುಖ್ಯಮಂತ್ರಿಯ ಭಾವಚಿತ್ರ ದಹಿಸಿ ಕಾಂಗ್ರೆಸ್ ಮುಖಂಡರು ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ನೇತೃತ್ವದಲ್ಲಿ ಮಂಗಳವಾರ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ರಾಹುಲ್ ಗಾಂಧಿ ಅವರ ಯಾತ್ರೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುವುದನ್ನು ಕಂಡು ಬಿಜೆಪಿ ನಾಯಕರು ಭಯಗೊಂಡಿದ್ದಾರೆ. ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಈ ಯಾತ್ರೆ ಯನ್ನು ತಡೆಯುವ, ಅಡ್ಡಿ ಮಾಡುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈಹಾಕಿದೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿ ಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಅಸ್ಸಾಂ ಮುಖ್ಯಮಂತ್ರಿಗೆ ರಾಹುಲ್ ಗಾಂಧಿ ಅವರ ಯಾತ್ರೆಯಿಂದ ದಿಗ್ಭ್ರಮೆಯಾಗಿದೆ. ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಕೂಡಲೇ ಅಸ್ಸಾಂ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಚಂದ್ರ ಭೂಪಾಲ್, ಅಕ್ರಂ ಪಾಶ, ವೈ.ಎಚ್.ನಾಗರಾಜ್, ಯೋಗೀಶ್, ಎಂ.ಪಿ.ದಿನೇಶ್ ಪಾಟೀಲ್, ಗಿರೀಶ್ ರಾವ್, ಎಸ್.ಟಿ. ಚಂದ್ರಶೇಖರ್, ಶಿವಾನಂದ್, ಶಿವು, ಸೌಗಂಧಿಕಾ, ಸ್ಟೆಲಾ ಮಾರ್ಟಿನ್, ಸುವರ್ಣ ನಾಗರಾಜ್, ನಾಜೀಮಾ, ಪ್ರೇಮಾ, ಕವಿತಾ ರಾಘವೇಂದ್ರ, ಕವಿತಾ , ಅರ್ಚನಾ, ಮಧುಸೂದನ್, ಎಚ್.ಪಿ.ಗಿರೀಶ್, ರಾಜಶೇಖರ್, ಎಸ್.ಕೆ. ಮರಿಯಪ್ಪ, ಶ್ರೀನಿವಾಸ ಕರಿಯಣ್ಣ, ಅಫ್ರೀದಿ ಮತ್ತಿತರರು ಇದ್ದರು.