ಟಿ. ನರಸೀಪುರಕ್ಕೆ ಕರ್ನಾಟಕ 50 ಸಂಭ್ರಮ ರಥಯಾತ್ರೆ

| Published : Sep 04 2024, 01:46 AM IST

ಸಾರಾಂಶ

ಸರ್ಕಾರ ಕನ್ನಡ ಭಾಷೆ, ನೆಲ,ಜಲ, ಉಳಿವಿಗಾಗಿ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ 50ರ ಸಂಭ್ರಮ ರಥಯಾತ್ರೆಯನ್ನು ಹಮ್ಮಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ಏಕೀಕರಣದ 50ನೇ ವರ್ಷದ ನೆನಪಿಗಾಗಿ ಸರ್ಕಾರ ಹಮ್ಮಿಕೊಂಡಿರುವ ‘ಕರ್ನಾಟಕ 50ರ ಸಂಭ್ರಮ’ ರಥಯಾತ್ರೆ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆ ರಥವನ್ನು ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಅದ್ದೂರಿಯಾಗಿ ಬರಮಾಡಿಕೊಂಡು ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇಗುಲದ ಬಳಿ ಶಾಲಾ ಮಕ್ಕಳು, ಎಲ್ಲ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರಥವನ್ನು ಬರಮಾಡಿಕೊಂಡು ಪೂಜೆ ಸಲ್ಲಿಸಿ ರತಯಾತ್ರೆಗೆ ಚಾಲನೆ ನೀಡಿದರು.ಸರ್ಕಾರ ಕನ್ನಡ ಭಾಷೆ, ನೆಲ,ಜಲ, ಉಳಿವಿಗಾಗಿ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ 50ರ ಸಂಭ್ರಮ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ಹಲವು ಸಂಘಟನೆಗಳು, ಸಂಘ ಸಂಸ್ಥೆಗಳು ಮತ್ತು ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿವೆ. ಕರ್ನಾಟಕದ ಜನರು ‘ಕರ್ನಾಟಕ 50 ಸಂಭ್ರಮ’ ಯಾತ್ರೆಯ ಉದ್ದೇಶವನ್ನು ಅರಿತು ಕನ್ನಡದ ಬಗ್ಗೆ ಹೆಚ್ಚು ಜಾಗೃತಗೊಳ್ಳಬೇಕು ಅವರು ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿದರು.ಪೊಲೀಸ್ ಇನ್ ಸ್ಪೆಕ್ಟರ್ ಧನಂಜಯ, ಬಿಇಒ ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿಗಳಾದ ವಸಂತಕುಮಾರಿ, ಬನ್ನೂರು ಪುರಸಭಾ ಮುಖ್ಯಾಧಿಕಾರಿ ಹೇಮಂತ್ ರಾಜು, ಸಿಡಿಪಿಒ ಗೋವಿಂದರಾಜು, ಸಮಾಜ ಕಲ್ಯಾಣಧಿಕಾರಿ ರಾಮೇಗೌಡ, ಬಿಸಿಎಂ ಇಲಾಖೆ ರಾಜಣ್ಣ, ಎಇಇ ಸತೀಶ್ ಚಂದ್ರನ್, ಬಿಆರ್.ಸಿ ನಾಗೇಶ್, ಸೆಸ್ಕ್ ಎಇಇ ವೀರೇಶ್, ಪಶುಸಂಗೋಪನಾ ಸಹಾಯಕ ನಿರ್ದೇಶಕ ಲಿಂಗರಾಜು, ತೋಟಗಾರಿಕೆ ಎಡಿ ಶಾಂತ, ತಾಲೂಕು ಯೋಜನಾಧಿಕಾರಿ ರಂಗಸ್ವಾಮಿ, ಆರ್.ಐ ಮಹೇಂದ್ರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ, ಪುರಸಭೆ ಸಮನ್ವಯಾಧಿಕಾರಿ ಮಹದೇವನಾಯಕ,, ರಾಜೂಗೌಡ ಇದ್ದರು.