ತಲಕಾವೇರಿಯಲ್ಲಿ ಯದುವೀರ್ ಪೂಜೆ ಸಲ್ಲಿಕೆ

| Published : Jun 17 2024, 01:37 AM IST

ಸಾರಾಂಶ

ಸಂಸದ ಯದುವೀರ್‌ ಒಡೆಯರ್‌ ಅವರು ಭಾಗಮಂಡಲ, ತಲಕಾವೇರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಪಕ್ಷದ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಶನಿವಾರ ಭಾಗಮಂಡಲ ಹಾಗೂ ತಲಕಾವೇರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು.

ಕೊಡಗು-ಮೈಸೂರು ಗಡಿ ಭಾಗವಾದ ಕುಶಾಲನಗರಕ್ಕೆ ಯದುವೀರ್ ಆಗಮಿಸಿದ ಸಂದರ್ಭ ಪಕ್ಷದ ವತಿಯಿಂದ ಭವ್ಯ ಸ್ವಾಗತವನ್ನು ನೀಡಲಾಯಿತು. ನಂತರ ಕಾವೇರಿ ಪ್ರತಿಮೆಗೆ ಹಾಗೂ ಕುಶಾಲನಗರ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.

ಮಾಜಿ ವಿಧಾನಸಭಾಧ್ಯಕ್ಷರಾದ ಕೆ. ಜಿ. ಬೋಪಯ್ಯ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನಾಪಂಡ‌‌ ರವಿ‌ಕಾಳಪ್ಪ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ, ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್ ಕುಮಾರ್, ರವಿ ಹೆಬ್ಬಾರ್, ಹೊಳ್ಳ, ದೇವಾಲಯದ ಅಧಿಕಾರಿ ಚಂದ್ರಶೇಖರ್, ಭಾಗಮಂಡಲ ಭಗಂಡೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಹರೀಶ್ ವಿ.ಕೆ.ಲೋಕೇಶ್, ಮಹೇಶ್ ಜೈನ್, ಆರ್.ಕೆ.ಚಂದ್ರ, ಅನಿತಾ ಪೂವಯ್ಯ, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.