ಉಡುಪಿ ಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ ಮುತ್ತಿನ ಕವಚ ಅರ್ಪಣೆ

| Published : Aug 06 2025, 01:30 AM IST

ಉಡುಪಿ ಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ ಮುತ್ತಿನ ಕವಚ ಅರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ತಮ್ಮ ಜನ್ಮ ನಕ್ಷತ್ರ ಆಚರಣೆಯ ಪ್ರಯುಕ್ತ ಶ್ರೀ ಕೃಷ್ಣನಿಗೆ ಮುತ್ತಿನ ಕವಚವನ್ನು, ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥರ ಮೂಲಕ ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ತಮ್ಮ ಜನ್ಮ ನಕ್ಷತ್ರ ಆಚರಣೆಯ ಪ್ರಯುಕ್ತ ಶ್ರೀ ಕೃಷ್ಣನಿಗೆ ಮುತ್ತಿನ ಕವಚವನ್ನು, ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥರ ಮೂಲಕ ಸಮರ್ಪಿಸಿದರು.ನಂತರ ಅನುಗ್ರಹ ಸಂದೇಶ ನೀಡಿದ ಅದಮಾರು ಶ್ರೀಗಳು, ಆಡಿದರೆ ಮುತ್ತಿನಂತಿರಬೇಕು, ಮಾತು ಮುತ್ತಿನಂತೆ ಶುಭ್ರವಾಗಿರಬೇಕು, ಗಟ್ಟಿಯಾಗಿರಬೇಕು, ಆಡಿದ ಮಾತು ತುಟಿ ಮೀರಿತು ಎಂಬಂತಿರಬಾರದು, ಹಿಂದಕ್ಕೆ ಪಡೆಯುವಂತಾಗಬಾರದು ಎಂದು ಹೇಳಿದರು.ಶ್ರೀ ಸುಶ್ರೀಂದ್ರ ತೀರ್ಥರು ತನ್ನ ಜನ್ಮ ದಿವಸದಂಗವಾಗಿ ಕೃಷ್ಣನಿಗೆ ಚಿನ್ನದಲ್ಲಿ ಮುತ್ತನ್ನು ಪೋಣಿಸಿ ಅರ್ಪಿಸಿದ್ದಾರೆ. ಅವರು ಕೂಡ ತಮ್ಮ ಗುರು ಶ್ರೀ ಸುಗುಣೇಂದ್ರ ತೀರ್ಥರಂತೆ ಛಲ ಉಳ್ಳವರು. ಗುರುವಿಗೆ ತಕ್ಕ ಶಿಷ್ಯರು, ಇಬ್ಬರೂ ಸಂಕಲ್ಪಿಸಿದ್ದನ್ನು ಈಡೇರಿಸದೇ ಬಿಡುವವರಲ್ಲ. ಸುಶ್ರೀಂದ್ರ ತೀರ್ಥರು ಹೃದಯ ವೈಶಾಲ್ಯವುಳ್ಳವರು, ಇಂತಹ ಶಿಷ್ಯರನ್ನು ಪಡೆದ ಪುತ್ತಿಗೆ ಶ್ರೀಗಳು ಧನ್ಯರು ಎಂದು ಅದಮಾರು ಶ್ರೀಗಳು ಕೊಂಡಾಡಿದರು. ಸುಶ್ರಂದ್ರ ತೀರ್ಥರು ಸಮಾಜದ ಮಾನಸಿಕ ಕಾಯಲಿಗೆ ಕೃಷ್ಣನಾಮ ಎಂಬ ಔಷಧ ನೀಡಲಿ, ಅವರ ಕೀರ್ತಿ ಹದಿನಾಲ್ಕು ಲೋಕಕ್ಕೂ ಹರಡಲಿ ಎಂದು ಶ್ರೀಗಳು ಜನ್ಮದಿನಾಚರಿಸಿದ ಶ್ರೀಗಳನ್ನು ಹರಸಿದರು.ಈ ಸಂದರ್ಭ ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥರು ಮುತ್ತಿನ ಕವಚಧಾರಿ ಕೃಷ್ಣನಿಗೆ ಮಂಗಳಾರತಿ ಬೆಳಗಿದರು.